ಮುಲ್ಕಿ: ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ದಂಪತಿಗಳ ಬಂಧನ
ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಪ್ರದೇಶದಲ್ಲಿ ಹಣ ಹೂಡಿಕೆ ಮಾಡಿಸಿದಂತೆ ನಂಬಿಕೆ ಹುಟ್ಟಿಸಿ ಕೋಟ್ಯಂತರ ರೂಪಾಯಿ ಹಾಗೂ ಚಿನ್ನ ವಂಚಿಸಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಾಂಶ ನೀಡಲಾಗುತ್ತದೆ ಎಂದು ಹೇಳಿ ಆರೋಪಿಗಳು ಸುಮಾರು 1.5 ಕೋಟಿ ರೂಪಾಯಿ ಮತ್ತು ಚಿನ್ನವನ್ನು ಜನರಿಂದ ಸಂಗ್ರಹಿಸಿ ಬಳಿಕ ವಂಚನೆ ಮಾಡಿದ್ದಾರೆ ಎಂಬ ದೂರು ದಾಖಲಾಗಿದೆ.
ಈ ಸಂಬಂಧ ಆರೋಪಿಗಳು —1️⃣ ರಿಚ್ಚರ್ಡ್ ಡಿ ಸೋಜಾ (52 ವರ್ಷ), ತಂದೆ: ಪ್ಯಾಟ್ರಿಕ್ ಡಿ ಸೋಜಾ, ನಿವಾಸ: ಮನೆ ನಂ. 2-81, ಕವತ್ತಾರು ಗುರಿಮನೆ, ಕವತ್ತಾರು ಅಂಚೆ ಮತ್ತು ಗ್ರಾಮ.
2️⃣ ರಶ್ಮಿ ರೀಟಾ ಪಿಂಟೋ (47 ವರ್ಷ), ಗಂಡ: ರಿಚ್ಚರ್ಡ್ ಡಿ ಸೋಜಾ, ನಿವಾಸ: ಮನೆ ನಂ. 2-81, ಕವತ್ತಾರು ಗುರಿಮನೆ, ಕವತ್ತಾರು ಅಂಚೆ ಮತ್ತು ಗ್ರಾಮ.
ಇವರ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ.145/2024 ಮತ್ತು ಅ.ಕ್ರ.17/2025, ಕಲಂ 406 ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಬಂಧನ ತಪ್ಪಿಸಲು ಆರೋಪಿತ ದಂಪತಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದರು. ಮುಲ್ಕಿ ಠಾಣೆಯ ಪೊಲೀಸರು ಹಚ್ಚ ಹಾದಿ ಅನುಸರಿಸಿ ಇಬ್ಬರನ್ನೂ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿತ ರಿಚ್ಚರ್ಡ್ ಡಿ ಸೋಜಾ ವಿರುದ್ಧ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸರ ಪ್ರಕಾರ, ಈ ಪ್ರಕರಣದಲ್ಲಿ ಇನ್ನಷ್ಟು ಬಾಧಿತರ ವಿವರಗಳು ಹೊರಬರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.