ಮುಲ್ಕಿ : ಮನೆಯಿಂದ ಹೊರ ಹೋದ ಯುವಕ ನಾಪತ್ತೆ

Spread the love

ಮುಲ್ಕಿ : ಮನೆಯಿಂದ ಹೊರ ಹೋದ ಯುವಕ ನಾಪತ್ತೆ

ಮಂಗಳೂರು :  ಮನೆಯಿಂದ ಹೊರ ಹೋದ ಯುವಕ ನಾಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಸೈನ್ (22) ಎಂಬ ಯುವಕ, ಅಕ್ಟೋಬರ್ 04 ರಂದು ಮನೆಯಿಂದ ಹೋದವನು ವಾಪಸ್ಸು ಬಾರದೆ ಕಾಣೆಯಾಗಿದ್ದಾನೆ.

ಕಾಣೆಯಾದ ಯುವಕನ ಚಹರೆ ಇಂತಿವೆ: ಹೆಸರು- ಹುಸೈನ್,  ಪ್ರಾಯ-22 ವರ್ಷ, ಎತ್ತರ-5 ಅಡಿ 4 ಇಂಚು, ಎಣ್ಣೆಗಪ್ಪು ಸಪೂರ ಶರೀರ, ಕೋಲು ಮುಖ ಹೊಂದಿರುತ್ತಾನೆ. ಧರಿಸಿದ ಬಟ್ಟೆ – ನೀಲಿ ಬಣ್ಣದ ಟೀ- ಶರ್ಟ್‍ಬಿಳಿ ಮತ್ತು ಬಿಳಿ ಬಣ್ಣದ ಪ್ಯಾಂಟ್, ಮಾತನಾಡುವ ಭಾಷೆ- ಕನ್ನಡ, ಇಂಗ್ಲೀಷ್ , ಬ್ಯಾರಿ.

ಕಾಣೆಯಾದ ಯುವಕನ  ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಮುಲ್ಕಿ ಪೋಲಿಸ್ ಠಾಣೆ, ದೂರವಾಣಿ ಸಂಖ್ಯೆ: 0824-2220533, 9480805332, 9480805359 ಸಂಪರ್ಕಿಸಲು ಮುಲ್ಕಿ ಪೋಲಿಸ್ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.


Spread the love