ಮುಸ್ಲಿಂರಲ್ಲಿ ಒಗ್ಗಟ್ಟಿನ ಸಮಸ್ಯೆ ಕಾಡುತ್ತಿದೆ: ಪ್ರೊ. ಮುಜಾಪ್ಫರ್ ಅಸ್ಸಾದಿ

Spread the love

ಮುಸ್ಲಿಂರಲ್ಲಿ ಒಗ್ಗಟ್ಟಿನ ಸಮಸ್ಯೆ ಕಾಡುತ್ತಿದೆ: ಪ್ರೊ. ಮುಜಾಪ್ಫರ್ ಅಸ್ಸಾದಿ

ಮಂಗಳೂರು : ಸ್ಪ್ಯಾನಿಷ್ ದೇಶ ಒಂದು ಕಾಲಕ್ಕೆ ಮುಸ್ಲಿಂ ದೇಶ ಆಗಿತ್ತು, 1943 ರಲ್ಲಿ ಸ್ಪೇನ್‍ನ ರಾಣಿ ಕೊಲಂಬಸ್‍ಗೆ ಸನದು ಕೊಡುವ ಹೊತ್ತಿಗೆ ಮೂಸುಗಳ ನಾಶ ಆಯ್ತು ಹೀಗಾಗಿ ಅದಕ್ಕೆ ಸನದು ಕೊಡುತ್ತೇನೆ ನೀನು ಎಲ್ಲೆಲ್ಲಿ ಹೋಗುತ್ತಿ ಅಲ್ಲಲ್ಲಿ ಅದು ಸ್ಪೇನ್‍ನ ಭಾಗವಾಗುತ್ತಾ ಎಂದು ಕೇಳಿದ್ದಳು ಎಂದು ರಾಜಕೀಯ ವಿಶ್ಲೇಷಕ, ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ. ಮುಜಾಪ್ಫರ್ ಅಸ್ಸಾದಿ ಹೇಳಿದರು.

ಅವರು ಮಂಗಳೂರಿನ ಬಲ್ಮಠದ ಶಾಂತಿ ನಿಲಯದ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ಎರಡು ದಿನಗಳ ಕಾಲ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ “ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ, ಸಬಲೀಕರಣ’ ವಿಷಯದ ಕುರಿತು ವಿಚಾರ ಮಂಡಿಸಿದರು.
ಮಾಕ್ರ್ಸನ ವಾದಗಳು ಇಸ್ಲಾಂನ ಸಂಧಿಯೊಳಗೆಯೇ ಬರುತ್ತವೆ ಎಂದ ಮುಜಾಫ್ಫರ್ ಅಸ್ಸಾದಿ ಆದರೆ ಅವ್ಯಾವೂ ಕಾರ್ಯಗತವಾಗಲಿಲ್ಲ ಎಂದರು. ಮುಸ್ಲಿಮರು ಮೊದಲಿನಿಂದಲೂ ಮಾಕ್ರ್ಸವಾದದ ಜೊತೆಗೇ ಇದ್ದಾರೆ ಆದರೆ ಒಗ್ಗೂಡುವಿಕೆಯ ಕೊರತೆ ಸಮುದಾಯವನ್ನು ಕಾಡುತ್ತಿದೆ ಎಂದು ಅಸ್ಸಾದಿ ಹೇಳಿದರು.

ಶಕ್ತಿ ರಾಜಕಾರಣದಲ್ಲಿ ಮುಸ್ಲಿಮರು ಎಲ್ಲಿದ್ದಾರೆ ಎನ್ನುವ ಪ್ರಶ್ನೆಯ ಬಗ್ಗೆ ಇಂದು ಚರ್ಚೆ ನಡೆಸಬೇಕಾಗಿದೆ. 1946 ರಲ್ಲಿ ಈ ಚರ್ಚೆ ನಡೆದಿತ್ತು, ಮುಸ್ಲಿಮರು ಲೀಗಲ್ ಕೆಡಗರಿಗೆ ಸೇರಿದ್ದರೂ ಅವರನ್ನು ಮೈನಾರಿಟಿ ಕೆಟಗರಿಗೆ ಸೇರಿಸಲಾಗಿದೆ ಎಂದರು.

ಮುಸ್ಲಿಮರಲ್ಲಿ ನೂರಾರು ಉಪಜಾತಿಗಳಿವೆ, ಭಾರತದ ಬೇರೆ ಬೇರೆ ಧರ್ಮಗಳಂತೆ ಅವುಗಳಲ್ಲಿರುವ ಜಾತಿಗಳಂತೆ ಮುಸ್ಲಿಮರಲ್ಲಿಯೂ ಜಾತಿಗಳಿವೆ, ಸಂಸ್ಕøತಿ ಉಳಿಸಿ ಬೆಳೆಸುವಂತಹ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ ಎಂದು ಅಸ್ಸಾದಿ ಹೇಳಿದರು. ಪ್ರಭುತ್ವ ಮುಸ್ಲಿಮರನ್ನು ಮುಸ್ಲಿಮರಾಗಿಯೇ ಪರಿಗಣಿಸುತ್ತದೆ, ಮುಸ್ಲಿಮರ ಸಮಸ್ಯೆಯಲ್ಲಿಯೂ ರಾಜಕೀಯ ಮಾಡಲಾಯಿತು ಎಂದು ಪ್ರೊ. ಅಸ್ಸಾದಿ ಅಭಿಪ್ರಾಯಪಟ್ಟರು.

ಕಾಶ್ಮೀರದ ಸಮಸ್ಯೆ ಕಾಶ್ಮೀರದ ಸಮಸ್ಯೆ ಆದರೆ ಅದನ್ನು ಮುಸ್ಲಿಂರ ಸಮಸ್ಯೆ ಎಂಬಂತೆ ಬಿಂಬಿಸಲಾಯಿತು. ಅಂದರೆ ಕಲಂ 370 ರ ಸಮಸ್ಯೆ ಮುಸ್ಲಿಮರ ಸಮಸ್ಯೆ ಎಂದು ಬಿಂಬಿಸಲಾಯಿತು ಎಂದು ಪ್ರೊ. ಮುಜಾಫ್ಫರ್ ಅಸ್ಸಾದಿ ಹೇಳಿದರು. ಅಲಿಗಢ್ ವಿಶ್ವವಿದ್ಯಾಲಯದಲ್ಲಿ ಹಿಂದೂಗಳೇ ಜಾಸ್ತಿಯಿದ್ದಾರೆ, ಮುಸ್ಲಿಮರು ಬಹಳ ಕಡಿಮೆ ಇರುವುದು ವಿಶ್ವವಿದ್ಯಾಲಯದ ಸಮಸ್ಯೆಯಲ್ಲ, ಎಲ್ಲಾ ಮುಸ್ಲಿಮರ ಸಮಸ್ಯೆಯಾಗಿದೆ ಅಲ್ಲಿಗೆ ಎಲ್ಲಾ ಮುಸ್ಲಿಮರು ಹೋಗುವುದಿಲ್ಲ ಎಂದರು.

ಗೋಹತ್ಯೆಯ ವಿಷಯ ಬಂದಾಗ ಒಂದು ರೀತಿಯ ರಾಜಕೀಯ ಬಣ್ಣ ಎದುರಾಗುತ್ತದೆ, ಮತ್ತೆ ಅದೇ ವಿಷಯ ನೆನಪಾಗುತ್ತದೆ, ಮುಸ್ಲಿಂರು ಎಷ್ಟು ಜನ ದನದ ಮಾಂಸ ಸೇವಿಸುತ್ತಾರೆ? ಕೇವಲ ಶೇಕಡಾ 50 ರಷ್ಟು ಜನರಿರಬಹುದು ಎಂದು ಪ್ರೊ. ಅಸ್ಸಾದಿ ಹೇಳಿದರು. ಉರ್ದು ವಾಸ್ತವವಾಗಿ ಎಲ್ಲಾ ಮುಸ್ಲಿಮರ ಭಾಷೆಯಲ್ಲ, ಶೇಕಡಾ 49 ರಷ್ಟು ಮುಸ್ಲಿಮರು ಉರ್ದುಯೇತರ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ, ಆದರೆ ಪದೇ ಪದೇ ಉರ್ದು ಭಾಷೆ ಮುಸ್ಲಿಮರ ಭಾಷೆ ಎಂದು ಬಿಂಬಿಸಿ ಆ ಭಾಷೆಯನ್ನು ತುಳಿತಕ್ಕೊಳಪಡಿಸಲಾಯಿತು. ರಾಝಕಾರಣ ಭಾಷೆ, ಜಾತಿ ಧರ್ಮ ಯಾವುದನ್ನೂ ಬಿಟ್ಟಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಮುಸ್ಲಿಮರು ಎಂತಹ ಸ್ಥಿತಿಯಲ್ಲಿ ಇದ್ದಾರೆ ಎಂದರೆ ಅಸ್ಮಿತೆಯ ತಲ್ಲಣಗಳು ನಮ್ಮನ್ನು ಕಾಡುತ್ತಿವೆ ಎಂದ ಪ್ರೊ,ಅಸ್ಸಾದಿ ಟೋಪಿ, ಗಡ್ಡ ಶೇರ್ವಾನಿ, ಬುರ್ಖಾಗಳು ಐಡೆಂಟಿಟಿ ಮಾರ್ಕಗಳಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸುತ್ತಿವೆ ಎಂದರು. ಎಲ್ಲ ಮುಸ್ಲಿಮರು ಉಗ್ರರಲ್ಲ ಆದರೆ ಉಗ್ರರೆಲ್ಲ ಮುಸ್ಲಿಮರೇ ಎಂದು ರಾಜಕೀಯ ನೇತಾರರೊಬ್ಬರು ಹೇಳಿಕೆ ನೀಡಿದ್ದರು, ಅದು ಮುಸ್ಲಿಮರ ಬಗೆಗೆ ರೂಪಿಸಿದ ಒಂದು ಕೆಟ್ಟ ಅಭಿಪ್ರಾಯಕ್ಕೆ ಒಂದು ಉದಾಹರಣೆ ಎಂದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ನನಗೆ ಮನೆ ಭಾಡಿಗೆ ಸಿಗಲಿಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ನಮಗೆ ಪ್ರವೇಶಾತಿ ಸಿಗುವುದಿಲ್ಲ, ಇದು ಮುಸ್ಲಿಂ ಸಮುದಾಯ ಎಂತಹ ಭಯಸ್ಥ ಸ್ಥಿತಿಯಲ್ಲಿದೆ ಎಂಬುದರ ಸೂಚಕ ಎಂದು ಪ್ರೊ. ಅಸ್ಸಾದಿ ಕಳವಳ ವ್ಯಕ್ತಪಡಿಸಿದರು.

ಬಡತನ, ನಿರುದ್ಯೋಗ, ಮುಸಲ್ಮಾನರ ಸಮಸ್ಯೆ ಎಂದು ಹೇಳುತ್ತಾರೆ, ಅದು ಮೂಲ ಸಮಸ್ಯೆಯಲ್ಲ ನನ್ನ ಪ್ರಕಾರ ಜೀವಭದ್ರತೆ ಇಲ್ಲದಿರುವುದು ಮುಖ್ಯ ಸಮಸ್ಯೆಯಾಗುತ್ತಿದೆ, ಇಂದು ಮುಸ್ಲಿಮರ ಪೈಕಿ ಶೇಕಡಾ 75 ರಷ್ಟು ಮುಸ್ಲಿಮರು ಪ್ರತಿ ದಿನ ಕೇವಲ 12 ರೂಪಾಯಿಯಲ್ಲಿ ಜೀವನ ನಡಡೆಸುವಂತಹ ಬಡವರಿದ್ದಾರೆ, ಹೀಗಾಗಿ ಭದ್ರತೆ ಮುಸ್ಲಿಮರ ಮೂಲ ಸಮಸ್ಯೆಯಾಗಿದೆ, ಕೋಮುಗಲಭೆಗಳು ಮುಸ್ಲಿಮರನ್ನು ಹಿಂದೆ ಒಯ್ಯುತ್ತಿವೆ. ಒಂದು ಕೋಮುಗಲಭೆ 20 ವರ್ಷಗಳ ಕಾಲ ಮುಸ್ಲಿಮರನ್ನು ಹಿಂದೆ ಒಯ್ಯುತ್ತಿದೆ, ಭಾರತದಲ್ಲಿ ಈವರೆಗೆ ನಡೆದ ಕೋಮುಗಲಭೆಗಳು ಮುಸ್ಲಿಮರನ್ನು ಮಧ್ಯಯುಗೀನ ಕಾಲಕ್ಕೆ ಒಯ್ದಿವೆ ಹೀಗಾಗಿಯೇ ಮುಸ್ಲಿಮರ ಸಾಮಾನ್ಯ ಸ್ನೇಹಿತರು ಉಲೇಮಾಗಳಾಗಿದ್ದಾರೆ. ಪ್ರತಿಯೊಂದು ಸಮಸ್ಯೆಗೆ ಸಾಮಾನ್ಯ ಮುಸ್ಲಿಮರು ಉಲೇಮಾರಿಂದಲೇ ಸಲಹೆ ಪಡೆಯುತ್ತಾರೆ ಎಂದರು ಪ್ರೊ. ಅಸ್ಸಾದಿ ಹೇಳಿದರು.

ಬಡತನ ಮುಸ್ಲಿಮರ ಸಾಮಾನ್ಯ ಸಮಸ್ಯೆಯಾಗಿದೆ ಆದರೆ ಅವರು ಕಾಣುವ ಕನಸು ಏನು ಎಂದರೆ ಅದು ಆಹಾರ ಭದ್ರತೆಯ ಕನಸು ಮತ್ತು ಭಯ ಭೀತಿ ಇಲ್ಲದ ವಾತಾವರಣದ ಸೃಷ್ಠಿ ಮಾಡುವುದು ಎಂದು ಪ್ರೊ. ಅಸ್ಸಾದಿ ಹೇಳಿದರು. ಆಹಾರದ ಸಮಸ್ಯೆ ದಲಿತರ ಕೆಳಸ್ತರದ ಜನರ ಸಮಸ್ಯೆಯಾಗಿದೆ ಎಂದರು.

ಮುಸ್ಲಿಮರನ್ನು ಕಾಡುತ್ತಿರುವ ಈ ಸಾಮಾಜಿಕ ರಾಜಕೀಯ ಕಾರಣಗಳು ಅವರು ಘೆಟ್ಟೋದಲ್ಲಿ ವಾಸಿಸುವಂತೆ, ಘೆಟ್ಟೋ ಸಮುದಾಯದ ರೀತಿಯಲ್ಲಿ ಬದಲಾಗುವಂತೆ ಮಾಡುತ್ತಿದೆ. ಒಂದು ಪ್ರದೇಶದಲ್ಲಿ ಬವನಿಂದ ಹಿಡಿದು ಶ್ರೀಮಂತನವರೆಗೆ ಎಲ್ಲರೂ ವಾಸಿಸುವಂತಹ ಈ ಸ್ಥಿತಿ ಈಗ ಮತ್ತಷ್ಟು ಹೊಸ ರೂಪ ತಾಳಿದೆ ಒಂದೇ ಅಪಾರ್ಟಮೆಂಟ್‍ನಲ್ಲಿ ಮುಸ್ಲಿಮರು ವಾಸಿಸುವಂತಹ ಬೆಳವಣಿಗೆಗಳಾಗುತ್ತಿವೆ ಎಂದರು.

ಮುಸ್ಲಿಮರಿಗೆ ಅವಕಾಶ ನಿರಾಕರಣೆ ಮಾಡುತ್ತ ಬಂದಿದ್ದರಿಂದ ಈ ರೀತಿಯ ಸಾಮಾಜಿಕ ಸಮಸ್ಯೆಯಿಂದಾಗಿ ಅವರು ಈಗ ಎಲ್ಲ ಕ್ಷೇತ್ರಗಳಿಂದ ಕಾಣೆಯಾಗುತ್ತಿದ್ದಾರೆ ಹೀಗಾಗಿ ರಾಜಕೀಯ ಪ್ರಾತಿನಿಧ್ಯದ ಕೊರತೆ ಕೂಡ ಎದ್ದು ಜಾಣುತ್ತಿದೆ ಎಂದು ಪ್ರೊ. ಅಸ್ಸಾದಿ ಹೇಳಿದರು. ರಾಜ್ಯದ ವಿಧಾನಸಭೆಯಲ್ಲಿ ಮುಸ್ಲಿಮರ ಸಂಖ್ಯೆ ಕೇವಲ 11 ಲೋಕಸಭೆಯಲ್ಲಿ ಮುಸ್ಲಿಮರ ಸಂಖ್ಯೆ 23 ಇದು ಮುಸ್ಲಿಮರು ಭಾರತದಲ್ಲಿ ಪಡೆದಿರುವ ರಾಜಕೀಯ ಪ್ರಾತಿನಿಧ್ಯದ ಪ್ರತೀಕವಾಗಿದೆ. 1980 1985 ರಲ್ಲಿ ಲೋಕಸಭೆಯಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಸುವರ್ಣ ಯುಗ ಎನ್ನಬಹುದು ಎಂದರು.

ಧರ್ಮದ ಆಧಾರದಲ್ಲಿ ಮುಸ್ಲಿಂರಿಗೆ ಯಾವುದೇ ರೀತಿಯ ಮೀಸಲಾತಿ ಕೊಡುವುದಿಲ್ಲ, ದಲಿತ ಮುಸ್ಲಿಂರ ಬಗ್ಗೆ ರಂಗನಾಥ್ ಮಿಶ್ರಾ ಆಯೋಗ ಕೂಲಂಕಷÀವಾದ ವರದಿಯನ್ನು ನೀಡಿತು. ಮುಸ್ಲಿಮರು ಮುಸ್ಲಿಮರ ಬಗ್ಗೆ ಮಾತಾಡಿದರೆ ಅಂತಹವರನ್ನು ಕೋಮುವಾದಿ ಎನ್ನುತ್ತಾರೆ, ಮುಸ್ಲಿಮರಿಗೆ ಒಂದು ರಾಜಕೀಯ ಪಕ್ಷದ ಅನಿವಾರ್ಯತೆ ಇದು ಅದು ಜಾತ್ಯಾತೀತ ನೆಲೆಯ ಪಕ್ಷವಾಗಿರಬೇಕು ಹಾಗಾದಾಗ ಮುಸ್ಲಿಮರು ಈ ಎಲ್ಲ ತಲ್ಲಣಗಳಿಂದ ಹೊರ ಬರಬಹುದು ಎಂದು ಪ್ರೊ.ಅಸ್ಸಾದಿ ಅಭಿಪ್ರಾಯಪಟ್ಟರು.


Spread the love