ಮೂಡುಬಿದಿರೆ: ಟ್ರೆಕ್ಕಿಂಗ್ ವೇಳೆ ವಿದ್ಯಾರ್ಥಿ ಜಾರಿ ಬಿದ್ದು ಮೃತ್ಯು

Spread the love

ಮೂಡುಬಿದಿರೆ: ಟ್ರೆಕ್ಕಿಂಗ್ ವೇಳೆ ವಿದ್ಯಾರ್ಥಿ ಜಾರಿ ಬಿದ್ದು ಮೃತ್ಯು

ಮೂಡುಬಿದಿರೆ ಬಳಿಯ ಕೊಣಾಜೆಕಲ್ಲು ಗುಡ್ಡದಲ್ಲಿ ಬುಧವಾರ ಬೆಳಿಗ್ಗೆ ನಡೆದ ಟ್ರೆಕ್ಕಿಂಗ್ ವೇಳೆ ವಿದ್ಯಾರ್ಥಿಯೋರ್ವನು ಜಾರಿ ಬಿದ್ದು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾನೆ.

ಮೃತನನ್ನು ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಟ್ಟಂಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್ ಎನ್. (22) ಎಂದು ಗುರುತಿಸಲಾಗಿದೆ.

ಮಂಗಳೂರಿನಲ್ಲಿ ಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮನೋಜ್ ಹಾಗೂ ಕೇರಳ ಅಡೂರು ಮೂಲದ ಕಾರ್ತಿಕ್ (22) ಬುಧವಾರ ಬೆಳಗ್ಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಈ ವೇಳೆ ಮನೋಜ್ ಆಕಸ್ಮಿಕವಾಗಿ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


Spread the love