ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನ

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಆಯೋಜಿಸಲ್ಪಡುತ್ತಿರುವ ಜನ ಸಂಪರ್ಕ ಅಭಿಯಾನದ 3ನೇ ತಿಂಗಳ (ಫೆಬ್ರವರಿ 2019) ಕಾರ್ಯಕ್ರಮಗಳ ವರದಿ

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನÀವನ್ನು 2019ನೇ ಫೆಬ್ರವರಿ ತಿಂಗಳಲ್ಲಿ ನಗರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಆಯೋಜಿಸಲಾಗಿತ್ತು. ದಿನಾಂಕ 1-2-2019 ರಿಂದ 28-2-2019 ರ ತನಕ ಸ್ವಚ್ಛತಾ ಜನಸಂಪರ್ಕ ಅಭಿಯಾನದ ಪ್ರಯುಕ್ತ 28 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.  ಒಟ್ಟು 3 ತಿಂಗಳಲ್ಲಿ 76 ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜಾಗೃತಿ ಕಾರ್ಯ ಮಾಡಲಾಯಿತು. ಇಲ್ಲಿಯವರೆಗೆ ಸುಮಾರು 2500 ಜನರು ಮನೆಯ ಹಸಿತ್ಯಾಜ್ಯ ನಿರ್ವಹಣೆಗೆ ಮಡಕೆಗಳಿಗಾಗಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಶ್ರೀಮಾರಿಯಮ್ಮ ದೇವಸ್ಥಾನ: ಉರ್ವಾದಲ್ಲಿರುವ ಶ್ರೀಮಾರಿಯಮ್ಮ ದೇವಸ್ಥಾನದಲ್ಲಿ ಭಜನಾ ಮಂಡಳಿಯ ಮಹಿಳೆಯರಿಗೆ ಮಡಕೆ ಗೊಬ್ಬರದ ಕುರಿತು 49ನೇ ಪ್ರಾತ್ಯಕ್ಷಿಕೆ ಜರುಗಿತು. ಸುಂದರ ಗುರಿಕಾರ ಅತಿಥಿಯಾಗಿ ಭಾಗಿಯಾದ್ದರು. ವಿಠಲದಾಸ್ ಪ್ರಭು ಹಾಗೂ ಸುಬ್ರಾಯ ನಾಯಕ್ ಕಾರ್ಯಕ್ರಮವನ್ನು ಆಯೋಜಿಸಿ, ನಿರ್ವಹಿಸಿದರು.

ನಿರ್ಮಲಾ ಟ್ರಾವೆಲ್ಸ್: ಕೋಡಿಯಾಲ್ ಬೈಲ್ ನಲ್ಲಿರುವ ನಿರ್ಮಲಾ ಟ್ರಾವೆಲ್ಸ್ ಪ್ರಧಾನ ಕಚೇರಿಯಲ್ಲಿ ಕಮಲಾಕ್ಷ ಪೈ ನೇತೃತ್ವದಲ್ಲಿ 50ನೇ ಕಾರ್ಯಕ್ರಮ ಜರುಗಿತು. ನಿರ್ಮಲಾ ಟ್ರಾವೆಲ್ಸ್ ಸಿಬ್ಬಂದಿಗಳಿಗೆ ಉಮಾನಾಥ್ ಕೋಟೆಕಾರ್ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ವತಿಕಾ ಇಂಟರ್ ನ್ಯಾಶನಲ್ ಟ್ರಾವೆಲ್ ಮುಖ್ಯಸ್ಥೆ ವತಿಕಾ ಪೈ ಸ್ವಾಗತಿಸಿದರು.

ವಿಶ್ವ ಬ್ರಾಹ್ಮಣ ಸಮಾಜ ಸೇವ ಸಂಘ: ಸುರತ್ಕಲ್‍ನಲ್ಲಿರುವ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ‘ಹಸಿಕಸÀÀ ನಿರ್ವಹಣೆ’ ಕುರಿತಂತೆ 51ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಧ್ಯಕ್ಷರಾದ ಶಿವಶಂಕರ ಆಚಾರ್ಯ, ದಿವಾಕರ್ ಆಚಾರ್ಯ ಹಾಗೂ ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸತೀಶ್ ಸದಾನಂದ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದರು.

ಅಯ್ಯಪ್ಪ ಭಜನಾ ಮಂದಿರ: ಯಕ್ಕೂರಿನಲ್ಲಿರುವ ಅಯ್ಯಪ್ಪ ಭಜನಾ ಮಂದಿರದಲ್ಲಿ ಸ್ವಚ್ಛತಾ ಜನಸಂಪರ್ಕ ಪ್ರಯುಕ್ತ ಮಡಕೆ ಗೊಬ್ಬರದ 52ನೇ ಪ್ರಾತ್ಯಕ್ಷಿಕೆ ನಡೆಯಿತು. ಯಶೋಧರ ಚೌಟ್ ಅಧ್ಯಕ್ಷತೆ ವಹಿಸಿದ್ದರು. ಭರತ್ ಶೆಟ್ಟಿ, ತೇಜಸ್ವಿನಿ ಆಚಾರ್ಯ್ ಮತ್ತು ಇನ್ನಿತರ ಭಜನಾ ಮಂಡಳಿಯ ಸದಸ್ಯರು ಭಾಗಿಯಾಗಿದ್ದರು.

ಜೀವ ವಿಮಾ ನಿಗಮ: ಕೋಡಿಯಾ¯ಬೈಲ್‍ನಲ್ಲಿರುವ  ಜೀವ ವಿಮಾನಿಗಮದ 2ನೇ ಶಾಖೆಯಲ್ಲಿ ‘ಹಸಿತ್ಯಾಜ್ಯವನ್ನು ನಿರ್ವಹಿಸುವ ಬU’É ಎಂಬ ವಿಷಯದ ಕುರಿತು 53ನೇ ಕಾರ್ಯಕ್ರಮ ನಡೆಯಿತು. ಶಾಖಾ ವ್ಯವಸ್ಥಾಪಕ ವಿಜಯ ಕುಮಾರ್, ಪ್ರಕಾಶ ಶೆಟ್ಟಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೋಡಂಗೆ ಬಾಲಕೃಷ್ಣ ನಾೈಕ್ ಕಾರ್ಯಕ್ರಮವನ್ನು ಸಂಯೋಜಿಸಿದರು.

ಮಹಾನಗರ ಪಾಲಿಕೆ: ಮಂಗಳೂರಿನ ಮಹಾನಗರ ಪಾಲಿಕೆಯ ಮಂಗಳಾ ಸಭಾಭವನದಲ್ಲಿ ಹಸಿತ್ಯಾಜ್ಯದ ನಿರ್ವಹಣೆ ಕುರಿತು 54ನೇ ಪ್ರಾತ್ಯಕ್ಷಿಕೆ ಜರುಗಿತು. ಉಪಮಹಾಪೌರರಾದ ಮಹ್ಮದ್ ಕೆ ಹಾಗೂ ಆಯುಕ್ತರಾದ ಮಹ್ಮದ್ ನಝೀರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಸ್ವಚ್ಛತಾ ಅಭಿಯಾನದ ಕುರಿತು ಮಾತನಾಡಿದರು. ಸಚಿನ್ ಶೆಟ್ಟಿ ಮಡಕೆಯಲ್ಲಿ ಹಸಿಕಸ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಮಧು ಮನೋಹರ್ ಪ್ರಸ್ತಾಪಿಸಿ ಸ್ವಾಗತಿಸಿದರು.  ಸುಮಾರು ನೂರೈವತ್ತು ಮನಪಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆ.ಟಿ.ಸಿ ಒಕ್ಕೂಟ: ಬಲ್ಮಠದಲ್ಲಿರುವ ಬಿಷಪ್ ಜನ್ನತ್ ಸಭಾಂಗಣದಲ್ಲಿ ಕೆ.ಟಿ.ಸಿ ಒಕ್ಕೂಟದ ಸಹಯೋಗದಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನದ ಪ್ರಯುಕ್ತ 55ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಡಾ ಅನಿಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಮಧುಕಿರಣ ಸ್ವಾಗತಿಸಿದರು. ಫಾದರ್ ವಾಟ್ಸನ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದರು

ಸ್ವ ಸಹಾಯ ಸಂಘ: ಸಿದ್ಧಿವಿನಾಯಕ, ಮಹಾಗಣಪತಿ, ಸರ್ವಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯೆಯರಿಗೆ ಬೋಳಾರದ ಅಂಗನವಾಡಿ ಕೇಂದ್ರದಲ್ಲಿ ಕಸನಿರ್ವಹಣೆಯ ಬಗ್ಗೆ 56ನೇ ಕಾರ್ಯಕ್ರಮವನ್ನು ನಡೆಸಲಾಯಿತು. ಸಮುದಾಯ ಸಂಘಟನಾ ಅಧಿಕಾರಿ ಮಾಲಿನಿ ರೋಡ್ರಿಗಸ್, ಶ್ರೀಕಾಂತಿ ಇನ್ನಿತರ ಸದಸ್ಯೆಯರು ಉಪಸ್ಥಿತರಿದ್ದರು.

ಪ್ರಕೃತಿ ಮಹಿಳಾ ಮಂಡಳಿ: ಶಕ್ತಿ ನಗರದಲ್ಲಿರುವ ಪ್ರಕೃತಿ ಮಹಿಳಾ ಮಂಡಳಿಯ ಸದಸ್ಯೆಯರಿಗೆ ಸ್ವಚ್ಛತೆಯ ಮಹತ್ವದ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಮನಪಾ ಸದಸ್ಯೆ ಅಖಿಲಾ ಆಳ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಆಶಾಲತಾ ಎಂ ವಿ ಹಾಗೂ ಸದಸ್ಯೆಯರು 57ನೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಛತೆಯ ಮಾಹಿತಿ ಪಡೆದುಕೊಂಡರು.

ವಿಶ್ವಕರ್ಮ ಸಹಕಾರ ಬ್ಯಾಂಕ್À: ಮಡಕೆ ಗೊಬ್ಬರ ತಯಾರಿಕೆಯ 58ನೇ ಪ್ರಾತ್ಯಕ್ಷಿಕೆ ರಥಬೀದಿಯಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಜರುಗಿತು. ಸ್ವಾಮಿ ಏಕಗಮ್ಯಾನಂದಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮನೆಮಟ್ಟದಲ್ಲಿ ತ್ಯಾಜ್ಯ ನಿರ್ವಹಿಸುವುದರ ಮೂಲಕ ಹೇಗೆ ಪರಿಸರ ಉಳಿಸಬಹುದು ಹಾಗೂ ಹಣ ಗಳಿಸಬಹುದು ಎಂಬುದರ ಬಗ್ಗೆ ತಿಳಿಸಿದರು. ಬ್ಯಾಂಕಿನ ಅಧ್ಯಕ್ಷ ಹರೀಶ್ ಆಚಾರ್, ಡಿ ಭಾಸ್ಕರ್ ಆಚಾರ್, ಲೋಕೇಶ್ ಆಚಾರ್, ರಾಜೇಶ ನೆತ್ತರ್, ಸುರೇಶ್ ಕುಮಾರ್ ಹಾಗೂ ಬ್ಯಾಂಕಿನ ಸಿಬ್ಬಂದಿ ಭಾಗಿಯಾಗಿದ್ದರು.

ಕರ್ನಾಟಕ ಟೈಲರ್ ಅಸೋಶಿಯೇಶನ್: ಮಂಗಳಾದೇವಿಯಲ್ಲಿರುವ ಕಾಂತಿ ಚರ್ಚ್ ಆವರಣದಲ್ಲಿ ಕರ್ನಾಟಕ ಟೈಲರ್ ಅಸೋಶಿಯೇಶನ್ ಮಂಗಳಾದೇವಿ ವಲಯದ ಸಹಯೋಗದಲ್ಲಿ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 59ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುರೇಶ್ ಶೆಟ್ಟಿ ಸ್ವಚ್ಛತೆಯ ಬಗ್ಗೆ ಮಾತನಾಡಿದರು.  ಪ್ರಜ್ವಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಬಿತಾ ಕುಮಾರ್ ಹಾಗೂ ರತ್ನಾ ಆಳ್ವ ಕಾರ್ಯಕ್ರಮ ಸಂಯೋಜಿಸಿದರು.

ಶ್ರೀಶಾರದೋತ್ಸವ ಸೇವಾ ಟ್ರಸ್ಟ್: ಪಂಜಿಮೊಗರುವಿನಲ್ಲಿರುವ ಶ್ರೀಶಾರದೋತ್ಸವ ಸೇವಾ ಟ್ರಸ್ಟ್‍ನಲ್ಲಿ ಪ್ರೇರಣಾ, ಅಮೃತಾ, ಪ್ರಿಯಾ ಹಾಗೂ ಸಿಂಚನ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗಾಗಿ 60ನೇ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮನಪಾ ಸ್ಥಳೀಯ ಸದಸ್ಯ ದಯಾನಂದ ಶೆಟ್ಟಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮುದಾಯ ಸಂಘಟಕಿ ಸುಲತ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.

ಕರಾವಳಿ ವಾಚಕಿಯರ ಸಂಘ: ಸಾಹಿತ್ಯ ಸದನ ಕೊಟ್ಟಾರದಲ್ಲಿ ಕರಾವಳಿ ವಾಚಕಿಯರ ಸಂಘದ ಸಹಯೋಗದಲ್ಲಿ ನಮ್ಮ ತ್ಯಾಜ್ಯ ನಮ್ಮ ಹೊಣೆ ಕಲ್ಪನೆಯಲ್ಲಿ 61ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸತೀಶ್ ಸದಾನಂದ ಮಡಕೆಯಲ್ಲಿ ಮನೆಯ ಹಸಿ ತ್ಯಾಜ್ಯವನ್ನು ಹೇಗೆ ನಿರ್ವಹಿಸಬಹುದು ಎಂಬುವುದರ ಕುರಿತು ಪ್ರಾತ್ಯಕಿಕೆ ನೀಡಿದರು. ಸಂಘದ ಅಧ್ಯಕ್ಷೆ ಶಶಿಲೇಖಾ ಬಿ ಅಧಕ್ಷತೆ ವಹಿಸಿ ಮಾತನಾಡಿದರು. ಪೆÇ್ರೀ. ಶೇಷಪ್ಪ ಅಮೀನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಸ್ವಸ್ವಹಾಯ ಗುಂಪು: ಉರ್ವಾದಲ್ಲಿರುವ ಸಮುದಾಯ ಭವನದಲ್ಲಿ ಅಕ್ಷಯ ಸಾಯಿ, ಅಮ್ಮ, ಸವಿನಯ ಹಾಗೂ ಮಾರಿಯಮ್ಮ ಸ್ವಸಹಾಯ ಗುಂಪುಗಳ ಸದಸ್ಯರು ಸ್ವಚ್ಛತಾ ಜನ ಸಂಪರ್ಕದ 62ನೇ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಹಾನಗರ ಪಾಲಿಕೆ ಸಹಕಾರದಲ್ಲಿ ಸಮುದಾಯ ಸಂಘಟಕಿ ಮಮತಾ ಕಾರ್ಯಕ್ರಮವನ್ನು ಸಂಘಟಿಸಿದರು.

ಜನತಾ ಕೇಂದ್ರ : ಮಹಾನಗರ ಪಾಲಿಕೆಯ ಆಶ್ರಯದಲ್ಲಿ  ಜ್ಞಾನದೀಪ, ಆಶಾಕಿರಣ, ಆದರ್ಶ, ಹಾಗೂ  ಶ್ರೀಮಂಗಳಾದೇವಿ ಸ್ವ ಸಹಾಯ ಗುಂಪುಗಳ ಸಹಯೋಗದಲ್ಲಿ ಜನತಾ ಕೇಂದ್ರ ಬೋಳಾರದಲ್ಲಿ ಮಡಕೆ ಗೊಬ್ಬರದ 63ನೇ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಸಚಿನ್ ಶೆಟ್ಟಿ ಹಸಿಕಸದ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಪೀಠ: ಸೂಟರಪೇಟೆಯಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನದ ಪ್ರಯುಕ್ತ 64ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಭಿಯಾನದ ಸಂಯೋಜಕ ಉಮಾನಾಥ್ ಮಾತನಾಡಿ ಸ್ವಚ್ಛತೆಗೆ ಆದ್ಯತೆ ನೀಡಿ ಮನೆಯಲ್ಲಿಯೇ ಕಸವನ್ನು ನಿರ್ವಹಣೆ ಮಾಡುವಂತೆ ಮನವಿ ಮಾಡಿದರು. ಪ್ರಶಾಂತ ಯಕ್ಕೂರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಅರ್ಜುನ್ ಅತಿಥಿಯಾಗಿ ಪಾಲ್ಗೊಂಡಿದ್ದರು.

ಅತ್ತಾವರ ಶಾಂತಾ ಆಳ್ವ ಪ್ರತಿಷ್ಠಾನ: ಮಂಗಳಾದೇವಿಯಲ್ಲಿರುವ ರಮಾ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ಹಸಿತ್ಯಾಜ್ಯ ಬಳಸಿ ಮನೆಯಲ್ಲಿ ಸಾವಯವ ಗೊಬ್ಬರ ತಯಾರಿಕೆಯ ಕುರಿತ 65ನೇ ಪ್ರಾತ್ಯಕ್ಷಿಕೆಯನ್ನು ಅತ್ತಾವರ ಶಾಂತಾ ಆಳ್ವ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜನೆ ಮಾಡಲಾಗಿತ್ತು. ಪ್ರಮೀತ ರೈ, ರಾಜೇಶ್ ಕೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಬಿತಾ ಎಲ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಮಹಿಳಾ ಕೇಂದ್ರ ಸುರತ್ಕಲ್: ವಿದ್ಯಾದಾಯಿನಿ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ತರಬೇತಿ ಇವರ ಸಹಕಾರದೊಂದಿಗೆ ಮಹಿಳಾ ಕೇಂದ್ರ ಸುರತ್ಕಲ್‍ನಲ್ಲಿ ಹಸಿಕಸವನ್ನು ಮಡಕೆಯಲ್ಲಿ ಹಾಕಿ ಗೊಬ್ಬರ ಮಾಡುವ ಕುರಿತು ಪ್ರಾಯೋಗಿಕ ಮಾಹಿತಿ  ನೀಡಲಾಯಿತು. ಸತೀಶ್ ಸದಾನಂದ 66ನೇ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸುಲೋಚನಾ ರಾವ್, ವಿನೋದಾ ಸೇರಿದಂತೆ ಅನೇಕ ಗೃಹಿಣಿಯರು ಭಾಗಿಯಾಗಿದ್ದರು.

ಶ್ರೀಸುಬ್ರಮಣ್ಯ ಮಠ: ಯಕ್ಕೂರನಲ್ಲಿರುವ ಸುಬ್ರಮಣ್ಯ ಮಠದಲ್ಲಿ ಸ್ಥಳೀಯರಿಗಾಗಿ ಜನಸಂಪರ್ಕ ಅಭಿಯಾನದ ಪ್ರಯುಕ್ತ ನಮ್ಮ ತ್ಯಾಜ್ಯ ನಮ್ಮ ಜವಾಬ್ದಾರಿ ಕುರಿತು  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಗುರುರಾಜ್ ಉಪಾಧ್ಯಾಯ ಹಾಗೂ ವಿಶಾಲಾಕ್ಷಿ ಶೆಟ್ಟಿ  ಉಪಸ್ಥಿತರಿದ್ದರು. 67ನೇ ಕಾರ್ಯಕ್ರಮದಲ್ಲಿ ಉಮಾನಾಥ್ ಕೋಟೆಕಾರ್ ಸ್ವಚ್ಛತೆಯ ಬಗ್ಗೆ ಮಾತನಾಡಿದರು.

ಮಹಿಳಾ ಮಂಡಳಿ: ವಿರಾಟ್ ಸಂಸ್ಥೆ ಸುರತ್ಕಲ್ ಹಾಗೂ ಮಹಿಳಾ ಮಂಡಳಿ ಕುಳಾಯಿ ಇವರ ಸಹಯೋಗದಲ್ಲಿ ಸ್ವಚ್ಛತೆ ಮತ್ತು ನಮ್ಮ ಹೊಣೆ ಎಂಬ ಉಪನ್ಯಾಸ ಹಾಗೂ 68ನೇ ಮಡಕೆ ಗೊಬ್ಬರದದ ಪ್ರಾತ್ಯಕ್ಷಿಕೆಯನ್ನು ಕುಳಾಯಿಯಲ್ಲಿ ಹಮ್ಮಿಕೊಳ್ಳಲಾಯಿತು. ಅಧ್ಯಕ್ಷೆ ಮೀನಾಕ್ಷಿ ದೇವದಾಸ್, ಚಂದ್ರಶೇಖರ್ ಕೆ ಪಿ ಹಾಗೂ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸ್ವಚ್ಛತೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯಕ್ಕೆ ಒತ್ತು ನೀಡಲಾಯಿತು.

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ: ಸುರತ್ಕಲ್ ಬಂಟರ ಭವನದಲ್ಲಿ ಯೋಗಾಭ್ಯಾಸಿಗಳಿಗೆ ಶುಚಿತ್ವದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸತೀಶ್ ಸದಾನಂದ ಸ್ವಾಗತಿಸಿ ವಂದಿಸಿದರು. ಸಚಿನ್ ಮಡಕೆ ಗೊಬ್ಬರದ ತಯಾರಿಕೆಯ 69ನೇ ಪ್ರಾತ್ಯಕ್ಷಿಕೆ ನೀಡಿದರು.  ಸಂಚಾಲಕ ಹರೀಶ್ ಕೋಟ್ಯಾನ್, ನಾರಾಯಣ ಮತ್ತಿತರ ಯೋಗಾಬ್ಯಾಸಿಗಳು ಭಾಗಿಯಾಗಿದ್ದರು.

ವೃತ್ತಿಶಿಕ್ಷಣ ಶಿಕ್ಷಕರ ಸಂಘ :  ಕುಲಶೇಖರದಲ್ಲಿರುವ ಸೇಕ್ರೆಡ್ ಹಾರ್ಟ್ಸ್ ಹೈಸ್ಕೂಲ್‍ನಲ್ಲಿ ದಕ ಜಿಲ್ಲಾ ವೃತ್ತಿಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ 70ನೇ ಸ್ವಚ್ಛತಾ ಜನಸಂಪರ್ಕ ಕಾರ್ಯಕ್ರಮವನ್ನು ಆಯೊಜಿಸಲಾಯಿತು. ಉಮಾನಾಥ್ ಕೋಟೆಕಾರ್ ಮಾತನಾಡಿ ಸ್ವಚ್ಛತೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು. ಸಂಘದ ಅಧಕ್ಷೆ ಸುಫಲಾ, ಕಾರ್ಯದರ್ಶಿ ದೇವದಾಸ್ ಹಾಗೂ ಹಲವು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಸತ್ಯವತಿ ಎಂ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದರು.

ಕೇಶವ ಶಿಶು ಮಂದಿರ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರಿಗೆ ತಡಂಬೈಲ್ ಕೇಶವ ಶಿಶು ಮಂದಿರದಲ್ಲಿ ್ಲ ಮನೆಯ ಹಸಿ ತ್ಯಾಜ್ಯವನ್ನು ಹೇಗೆ ನಿರ್ವಹಿಸಬಹುದು ಎಂಬುವುದರ ಕುರಿತು 71ನೇ ಪ್ರಾತ್ಯಕಿಕೆ ನೀಡಲಾಯಿತು. ಸಂಚಾಲಕಿ ಶ್ರೀನಿಧಿ, ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಶ್ರೀದೇವಿ ದೇವಸ್ಥಾನ: ರಾಮಕೃಷ್ಣ ಮಿಷನ್ ಸ್ವಚ್ಛತಾ ಸಂಪರ್ಕ ಅಭಿಯಾನದ ಪ್ರಯುಕ್ತ ಶ್ರೀದೇವಿ ದೇವಸ್ಥಾನದಲ್ಲಿ 72ನೇ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ  ಆಯೋಜಿಸಲಾಗಿತ್ತು. ಸತೀಶ್ ಸದಾನಂದ ಮಾತನಾಡಿ ಪ್ರತಿಯೊಬ್ಬರು ಮನೆಯಲ್ಲಿಯೇ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವಂತೆ ಮನವಿ ಮಾಡಿದರು. ಗೋಕುಲ್, ಭಾರತೀ ಹಾಗೂ ಅನೇಕ ಯೋಗಾಬ್ಯಾಸಿಗಳು ಉಪಸ್ಥಿತರಿದ್ದರು.

ಮೂಡಬಿದ್ರೆ: ಸಮಾಜಸೇವಾ ಸ್ಮಾತಕೋತ್ತರ ವಿಭಾಗ, ಲಯನ್ಸ್ ಕ್ಲಬ್ ತೋಡಾರ್, ಹಾಗೂ ಶ್ರೀಧ.ಮ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ವಾಣಿ ವಿಲಾಸ ಶಾಲೆ ತೆಂಕ ಮಿಜಾರುವಿನಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸತೀಶ್ ಸದಾನಂದ 73ನೇ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಿದರು. ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಮಧುಬಾಲಾ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.

ಗ್ರಾಮ ಸಂಘ ಕುಳಾಯಿ:  ಶ್ರೀಗಣೇಶೋತ್ಸವ ಸಮಿತಿ ಕುಲಾಯಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಳಾಯಿ ಇವರ ಸಹಯೋಗದಲ್ಲಿ ಗ್ರಾಮ ಸಂಘ ಕುಳಾಯಿಯಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನದ 74ನೇ ಕಾರ್ಯಕ್ರಮ ಜರುಗಿತು. ಚಂದ್ರಶೇಖರ್ ಕೆ ಪಿ, ಶಂಕರ ಶೆಟ್ಟಿ, ಜಯರಾಂ ಆಚಾರ್ಯ್ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಳ ಕಾವೂರು: ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾವೂರು ಶಾಖೆಯ ಆಶ್ರಯದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದದಲ್ಲಿ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ ನಡೆಯಿತು. ಶಾಖಾ ಸಂಚಾಲಕ ದಾಮೋದರ, ಸೇವಾ ಪ್ರಮುS ಅಶೋಕ, ಶುಭೋದಯ ಆಳ್ವ ಮತ್ತಿತರರು ಕಾರ್ಯಕ್ರಮದಲ್ಲಿದ್ದರು. ಉಮಾನಾಥ್ ಕೋಟೆಕಾರ್ 75ನೇ ಸ್ವಚ್ಛತಾ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಮಾರಿಕಾಂಬಾ ದೇವಸ್ಥಾನ: ಅಡುಮರೋಳಿಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಸ್ವಚ್ಛತೆಯ ಕುರಿತಂತೆ 76ನೇ ಕಾರ್ಯಕ್ರಮ ಜರುಗಿತು. ಗೋಕುಲನಾಥ್ ಶೆಣೈ, ಪುಷ್ಪಲತಾ ಹಾಗೂ ಅನೇಕ ಯೋಗಾಭ್ಯಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸ್ವಚ್ಛತಾ ಜನಸಂಪರ್ಕ ಅಭಿಯಾನದÀ ನೇತೃತ್ವವನ್ನು ಉಮಾನಾಥ್ ಕೋಟೆಕಾರ್ ವಹಿಸಿದ್ದರು. ಸತೀಶ್ ಸದಾನಂದ ಕಾರ್ಯಕ್ರಮಗಳನ್ನು ಸಂಘಟಿಸಿದರು ಹಾಗೂ ನಲ್ಲೂರು ಸಚಿನ್ ಶೆಟ್ಟಿ ಮಡಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಎಂಆರ್‍ಪಿಎಲ್ ಸಂಸ್ಥೆ ಈ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

Photo Album


Spread the love