ಲಂಚ ಪಡೆಯುತ್ತಿದ್ದ ಎಸಿಬಿ ದಾಳಿ:  ಪ್ರಾಜೆಕ್ಟ್ ಇಂಜಿನಿಯರ್ ಬಂಧನ

Spread the love

ಲಂಚ ಪಡೆಯುತ್ತಿದ್ದ ಎಸಿಬಿ ದಾಳಿ:  ಪ್ರಾಜೆಕ್ಟ್ ಇಂಜಿನಿಯರ್ ಬಂಧನ

ಮಂಗಳೂರು: ಮಂಗಳೂರು: ಸರಕಾರದಿಂದ ದೊರೆಯುವ ಬಯೋಗ್ಯಾಸ್ ಸಬ್ಸಿಡಿಗೆ ಏಜೆನ್ಸಿ ಮಾಲಕರೊಬ್ಬರಿಂದ ಮಂಗಳೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಸಮಗ್ರ ಗ್ರಾಮೀಣ ಇಂಧನ ಯೋಜನೆಯ ಪ್ರಾಜೆಕ್ಟ್ ಇಂಜಿನಿಯರ್ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ 30 ಸಾವಿರ ರೂ. ನಗದು ವಶಪಡಿಸಿಕೊಂಡಿದೆ.

ಸಮಗ್ರ ಗ್ರಾಮೀಣ ಇಂಧನ ಯೋಜನೆಯ ಪ್ರಾಜೆಕ್ಟ್ ಇಂಜಿನಿಯರ್ (ಎಂಐಇ- ಇಂಡಿಯಾ) ಎನ್.ನಾಗೇಶ್ ಬಂಧಿತ ಆರೋಪಿ.

ಬಂಧಿತ ಎನ್.ನಾಗೇಶ್ ಸಬ್ಸಿಡಿ ಹಣ ಬಿಡುಗಡೆ ಮಾಡಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು 15 ಸಾವಿರ ರೂ. ನೀಡಿದ್ದು, ಮತ್ತೆ 35 ಸಾವಿರ ರೂ. ನೀಡದಿದ್ದರೆ ಸಬ್ಸಿಡಿ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಪೀಡಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದರಿಂದ ಬೇಸತ್ತ ಸಂತ್ರಸ್ತ ನೇರವಾಗಿ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕಚೇರಿಗೆ ತೆರಳಿ ದೂರು ನೀಡಿದ್ದರು. ಬುಧವಾರ ಪ್ರಾಜೆಕ್ಟ್ ಇಂಜಿನಿಯರ್ ಎನ್. ನಾಗೇಶ್ 30 ಸಾವಿರ ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿ ಸೇರಿ ನಗರದನ್ನು ವಶಕ್ಕೆ ಪಡೆದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಶ್ರುತಿ ಎನ್.ಎಸ್, ಡಿವೈಎಸ್ಪಿ ಸುಧೀರ್ ಎಂ. ಹೆಗ್ಡೆ, ಇನ್‌ಸ್ಪೆಕ್ಟರ್ ಯೊಗೀಶ್‌ ಕುಮಾರ್ ಮತ್ತು ಸಿಬ್ಬಂದಿ ಹರಿಪ್ರಸಾದ್, ಉಮೇಶ್, ರಾಧಾಕೃಷ್ಣ ಕೆ., ಪ್ರಶಾಂತ್, ವೈಶಾಲಿ, ರಾಕೇಶ್ ವಾಗ್ಮನ್, ಗಣೇಶ್, ರಾಧಾಕೃಷ್ಣ ಮತ್ತು ರಾಜೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love