ಲಕ್ಕಿ ಕ್ಕೀಂ ಗೊಂದಲ: ಕಂಪೆನಿ ಕಚೇರಿಗೆ ಗ್ರಾಹಕರ ಮುತ್ತಿಗೆ

Spread the love

ಲಕ್ಕಿ ಕ್ಕೀಂ ಗೊಂದಲ: ಕಂಪೆನಿ ಕಚೇರಿಗೆ ಗ್ರಾಹಕರ ಮುತ್ತಿಗೆ

ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಲಕ್ಕಿ ಸ್ಕಿಂಗಳ ಹಾವಳಿ ಮಿತಿಮೀರಿದ್ದು ಈಗಾಗಲೇ ಕೆಲವು ಸ್ತ್ರೀಂಗಳು ಕೋಟ್ಯಂತರ ರೂಪಾಯಿ ಹಣವನ್ನು ಗ್ರಾಹಕರಿಗೆ ಪಂಗನಾಮ ಹಾಕಿ ಬಾಗಿಲು ಎಳೆದು ಕೊಂಡಿವೆ.

ಇವುಗಳ ಸಾಲಿಗೆ ಹೊಸ ಕಂಪೆನಿಯೊಂದು ಸೇರ್ಪಡೆಯಾಗಿದ್ದು ಗ್ರಾಹಕರಿಂದ ಪ್ರತೀ ತಿಂಗಳು ಸಾವಿರ ಸಾವಿರ ರೂಪಾಯಿ ಕಂತು ಪಡೆದು ಹೇಳಿದ ಆಫರ್ ನೀಡದೆ, ಹಣವನ್ನೂ ಹಿಂದಿರುಗಿಸಲು ವಿಳಂಬ ಮಾಡುತ್ತಿರುವ ಕಾರಣ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆಗೈದಿರುವ ಘಟನೆ ಗುರುವಾರ ಬೆಳಗ್ಗೆ ಕೃಷ್ಣಾಪುರದಲ್ಲಿ ನಡೆದಿದೆ.

ಈ ಹಿಂದೆ ಗ್ರಾಹಕರ ಹಣವನ್ನು ಹಿಂದಿರುಗಿಸುವುದಾಗಿ ಮಾಲಕ ಹೇಳಿದ್ದ. ಆದರೆ ಇಲ್ಲಿಯವರೆಗೆ ಹಿಂದಿರುಗಿಸಿಲ್ಲ ಎನ್ನಲಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ಹಣ ಕಟ್ಟಿ ಕೈಸುಟ್ಟುಕೊಂಡಿರುವ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿದರು. ಸುರತ್ಕಲ್ ಪೊಲೀಸರು ಮಾಲಕನ ವಿಚಾರಣೆ ನಡೆಸಿದ್ದಾರೆ.


Spread the love