ಲಡಾಕ್ ಗಡಿಯಲ್ಲಿ ಮೃತರಾದ ಯೋಧರಿಗೆ ದಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ
ಮಂಗಳೂರು: ಲಡಾಕಿನಲ್ಲಿ ಭಾರತದ ಸೈನಿಕರೊಂದಿಗೆ ಸಂಘರ್ಷಮಾಡಿ ಭಾರತೀಯ ಸೈನಿಕರನ್ನ ಹತ್ಯೆಮಾಡಿದ ಚೀನಾದ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕದ್ರಿ ಪಾರ್ಕ್ ಬಳಿಯ ಕಾರ್ಗಿಲ್ ಹುತಾತ್ಮರ ಸ್ಮಾರಕದ ಹೊರಗಡೆ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಮಿಥುನ್ ರೈಯವರು ಚೀನಾದ ಆರ್ಥಿಕತೆಗೆ ಭಾರತದ ಮಾರುಕಟ್ಟೆ ಬಹಳಷ್ಟು ಕೊಡುಗೆ ನೀಡುತ್ತಿವೆ ಆದರೂ ನಮ್ಮ ದೇಶದ ಸೈನಿಕರ ಜೀವನದಲ್ಲಿ ಚೆಲ್ಲಾಟವಾಡಿದ್ದಾರೆ ಆದ್ದರಿಂದ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂದ ಕರೆ ನೀಡಿದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಪ್ರವೀನ್ ಚಂದ್ರ ಆಳ್ವ, ಎಸಿ ವಿನಯರಾಜ್, ಅನಿಲ್ ಕುಮಾರ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೈಲ್ ಕಂದಕ್, ಬ್ಲಾಕ್ ಅದ್ಯಕ್ಷರಾದ ವಿಶ್ವಾಸ್ ದಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲಾ ಗಟ್ಟಿ, ಶಶಿಕಲಾ, ಮೆಘನಾದಾಸ್, ಶೋಭಾ ಕೇಶವು, ಅಶೋಕ್ ಸಲ್ಯಾನ್, ಯುವ ಕಾಂಗ್ರೆಸ್ ಜಿಲ್ಲಾ ಪದಾಧಿಕಾರಿಗಳಾದ ಗಿರಿಶ್ ಆಳ್ವ, ಕಿರಣ್ ಬುಡ್ಲೆಗುತ್ತು, ಪ್ರಸಾದ್ ಮಲ್ಲಿ, ನಾಸಿರ್ ಸಾಮಣಿಗೆ, ಲಾರೆನ್ಸ್ ಡಿಸೋಜ, ರಮಾನಂದ ಪೂಜಾರಿ, ಸೌಹಾನ್, ಸಮರ್ಥ್ ಭಟ್, ಸುಹಾನ್ ಆಳ್ವ, ಸವಾದ್ ಸುಳ್ಯ, ಮುದ್ದಸಿರ್ ಕುದ್ರೊಳಿ ಉಪಸ್ಥಿತರಿದ್ದರು.












![Spanish Ambassador to India Launches ‘The Great Reset [CTRL+ALT+HUMAN]’ in Mangaluru](https://i0.wp.com/www.mangalorean.com/wp-content/uploads/2026/02/The-great-reset.471.jpg?resize=100%2C70&ssl=1)