ವಲಸೆ ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿ ನೀಡಿ ಮಾನವೀಯತೆ ತೋರಿದ ಕಂಡ್ಲೂರು ಪೊಲೀಸರು

Spread the love

ವಲಸೆ ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿ ನೀಡಿ ಮಾನವೀಯತೆ ತೋರಿದ ಕಂಡ್ಲೂರು ಪೊಲೀಸರು

ಕುಂದಾಪುರ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ಭಾರತವೇ ಲಾಕ್ ಡೌನ್ ಆಗಿದೆ. ಎಲ್ಲೆಡೆ ಕೂಲಿ ಕಾರ್ಮಿಕರು, ನಿರ್ಗತಿಕರು ಬಡವರು ಊಟಕ್ಕಾಗಿ ಪರದಾಡುತ್ತಿರುವದರ ನಡುವೆ ಹಸಿವಿನಿಂದ ಕಂಗಾಲಾಗಿದ್ದ ಕೂಲಿ ಕಾರ್ಮಿಕರಿಗೆ ಕಂಡ್ಲೂರು ಪೊಲೀಸರು ದಾನಿಗಳ ಸಹಕಾರದೊಂದಿಗೆ ಆಹಾರ ಧಾನ್ಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಂಡ್ಲೂರಿನ ಯಂಗ್ ಸ್ಟರ್ಸ್ ಅಸೋಸಿಯೇಶನ್ ಇವರ ಸಹಕಾರದೊಂದಿಗೆ ಹಟ್ಟಿಯಂಗಡಿ, ಮಾವಿನಕಟ್ಟೆ ಬಳಿಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ಕಂಡ್ಲೂರು ಠಾಣಾಧಿಕಾರಿ ರಾಜ್ ಕುಮಾರ್ ಇವರ ನೇತೃತ್ವದಲ್ಲಿ ಹಂಚಲಾಯಿತು

ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಬಡ ವಲಸೆ ಕೂಲಿಕಾರ್ಮಿಕರು ಕುಟುಂಬಗಳು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಊಟ ಮಾಡಲು ದಿನಬಳಕೆ ವಸ್ತುಗಳು ಇಲ್ಲದೆ ಪರದಾಡುತ್ತಿದ್ದ ಇವರ ನೋವನ್ನು ಆಲಿಸಿದ ಕಂಡ್ಲೂರು ಠಾಣಾಧಿಕಾರಿ ರಾಜ್ ಕುಮಾರ್ ಅವರು ಸ್ಥಳೀಯ ಸಂಘಟನೆಗಳ ನೆರವಿನಿಂದ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಕೂಲಿಕಾರ್ಮಿಕರಿಂದ ಶ್ಲಾಘನೀಯ ವ್ಯಕ್ತವಾಯಿತು.

ಈ ವೇಳೆ ಸಂಘಟನೆಯ ಮಹಮ್ಮದ್ ಇಮ್ತಿಯಾಜ್, ಸಮೀರ್, ಸೀಯಾನ್ ಕಂಡ್ಲೂರು ಠಾಣೆಯ ಸಿಬಂದಿಗಳಾದ ಎಸ್ ಎಸ್ ಐ ರವೀಶ್ ಹೊಳ್ಳ, ಸಿಬಂದಿಗಳಾದ ರಮೇಶ್, ಮಧು, ಗಂಗಾಧರ್, ಆನಂದ, ಶ್ರೀಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love