ವಾರಾಹಿ ಕಾಲುವೆಯಲ್ಲಿ ನೀರು ಹರಿಸಲು ಕುಂದಾಪುರ ತಾಲ್ಲೂಕು ರೈತ ಸಂಘ ಆಗ್ರಹ
ಕುಂದಾಪುರ: ಈ ಭಾರಿ ವಾಡಿಕೆಗಿಂತ ಮಳೆ ಹೆಚ್ಚಾಗಿ ರೈತರಿಗೆ ಹರುಷವನ್ನೂ ತಂದರೂ ಮಳೆಗಾಲ ಮುಗಿದು ಹಲವು ತಿಂಗಳು ಕಳೆದರೂ ವಾರಾಹಿ ನೀರಾವರಿ ಯೋಜನೆಯವರು ಇಲ್ಲಿಯ ತನಕ ವರಾಹಿ ನೀರಾವರಿ ಕಾಲುವೆಗಳಲ್ಲಿ ಇಲ್ಲಿಯ ತನಕ ನೀರು ಹಾಯಿಸದೆ ಇರುವುದು ರೈತ ವಿರೋಧಿ ನಿಲುವಾಗಿದೆ. ಪ್ರತಿ ವರ್ಷ ಕಾಲುವೆಯಲ್ಲಿ ನೀರು ಹರಿಸಬೇಕಾದ ಜವಾಬ್ದಾರಿ ಹೊಂದಿರುವ ಇಲಾಖೆಯವರು ಕಾಲುವೆ ದುರಸ್ಥಿ ಕಾರ್ಯವನ್ನು ಮಳೆಗಾಲ ಮುಗಿದ ಕೂಡಲೇ ಮಾಡುವುದನ್ನು ಬಿಟ್ಟು ಅನವಶ್ಯಕ ಕಾಲಹರಣ ಮಾಡಿ ಈಗ ರೈತರು ನೀರಿಗಾಗಿ ಬೇಡಿಕೆ ಇಡುವಾಗ ವರಾಹಿ ನೀರಾವರಿ ಇಲಾಖೆಯವರು ಕಾಲುವೆಯಲ್ಲಿ ನೀರು ಹರಿಸಲು ಇಲ್ಲಸಲ್ಲದ ಸಬೂಬು ಹೇಳುವುದು ಅವರ ಬೇಜವಾಬ್ದಾರಿ ತನವಾಗಿದೆ. ವರಾಹಿ ನೀರಾವರಿ ಇಲಾಖೆಯವರು ಕಾಗಕ್ಕೆ ಗುಬ್ಬಕ್ಕ ಕತೆ ಹೇಳುವುದನ್ನು ಬಿಟ್ಟು ಕೂಡಲೇ ರೈತರ ಹೊಲಗಳಿಗೆ ನೀರು ಹಾಯಿಸಬೇಕು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.













