ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಜನೆಗೆ ಪೂರಕ-ಪ್ರಕಾಶ್ ಪಿ.ಎಸ್

Spread the love

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಜನೆಗೆ ಪೂರಕ-ಪ್ರಕಾಶ್ ಪಿ.ಎಸ್

ಮಂಗಳೂರು: ಕ್ರೀಡೆಯು ವಿದಾರ್ಥಿಗಳ ಜೀವನದಲ್ಲಿ ಮಹತ್ವವಾದ ಅಂಗ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರೀಡೆಯಲ್ಲೂ ತಮ್ಮನ್ನುತಾವು ತೊಡಗಿಸಿಕೊಳ್ಳಬೇಕು ಎಂದು ಹೊಸ ದಿಗಂತದ ಸಿಇಓ ಶ್ರೀ ಪ್ರಕಾಶ್ ಪಿ.ಎಸ್‍ಅವರು ಹೇಳಿದರು.

ಅವರು ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವಕಾಲೇಜಿನಮಂಗಳ ಕ್ರೀಡಾಂಗಣದಲ್ಲಿ ನಡೆದವಾರ್ಷಿಕಕ್ರೀಡಾಕೂಟ- 2018ನ್ನುಉದ್ಘಾಟಿಸಿ ಮಾತನಾಡಿದರು.

ಅವರು ಮಾತನಾಡುತ್ತವಿದ್ಯಾರ್ಥಿಗಳಿಗೆ ಕ್ರೀಡಾಸ್ಪೂರ್ತಿ ನೀಡುವ ಮೂಲಕ ಉತ್ಕೃಷ್ಟಮಟ್ಟದಅಂಕವನ್ನು ಪಡೆದು ಸಾಧನೆ ಮಾಡಲು ಸಾಧ್ಯ ಈ ನಿಟ್ಟಿನಲ್ಲಿಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ ಅದು ಹೆಮ್ಮೆಯ ವಿಚಾರ.ಆ ಮೂಲಕ ಈ ಶಿಕ್ಷಣ ಸಂಸ್ಥೆಯುರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ಮನೆಮಾತಾಗಿದೆ.
ಕ್ರೀಡೆಯಲ್ಲಿಇಚ್ಚಾಶಕ್ತಿಯಜತೆಯಲ್ಲಿ ಪ್ರಯತ್ನಶೀಲ ಮನೋಭಾವಕೂಡ ಮುಖ್ಯ.ಆಗ ತನ್ನಗುರಿಯನ್ನು ಮುಟ್ಟಬಹುದು ನಮ್ಮ ಬದುಕಿನ ಪ್ರತಿಹಂತದಲ್ಲೂಕೂಡ ಶಿಸ್ತು ಮತ್ತು ಪರಿಶ್ರಮ ಮುಖ್ಯ.ಯಾವುದೇಕ್ಷೇತ್ರವನ್ನುಆಯ್ಕೆ ಮಾಡಿಕೊಂಡರುಅಲ್ಲಿ ನಮ್ಮ ಸಮರ್ಪಣಭಾವ, ಶ್ರದ್ಧೆ, ಆತ್ಮವಿಶ್ವಾಸ, ಶಿಸ್ತು ಮುಖ್ಯ.ಆಗ ಯಶಸ್ಸನ್ನುಕಾಣಲು ಸಾಧ್ಯ.ವಿದ್ಯಾರ್ಥಿಗಳು ವಿದ್ಯಾರ್ಜನೆ ಸಮಯದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಡರಾಗಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಹಕಾರಿಯಾಗುತ್ತದೆ.

ಜೀವನದಲ್ಲಿ ಏನು ಸಾಧನೆ ಮಾಡಬೇಕು ಎಂಬ ಕಲ್ಪನೆ ಪರಿಪೂರ್ಣವಾಗಿರಬೇಕು.ಆ ಮೂಲಕ ಸುಂದರವಾದ ಭವಿಷ್ಯವನ್ನು ನಾವು ರೂಪಿಸಿಕೊಳ್ಳಬೇಕು.ಸಮಾಜದಲ್ಲಿದೇಶ ಮೆಚ್ಚುವಂತಕಾರ್ಯವನ್ನು ಮಾಡಬೇಕು.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಬಾಲ್ಯದಲ್ಲಿತಪ್ಪು ಹಾದಿಯನ್ನು ಹಿಡಿಯದೇ ಸತ್ ಮಾರ್ಗದಲ್ಲಿ ನಡೆದುಉತ್ತಮ ಪ್ರಜೆಗಳಾಗಬೇಕು.ಜೀವನದಲ್ಲಿ ಹಲವು ತಿರುವುಗಳು ಬಂದಾಗಎಚ್ಚರಿಕೆಯಿಂದ, ಉತ್ತಮವಾದ ಆಯ್ಕೆಗಳನ್ನು ಮಾಡಿಕೊಂಡುಗುರಿಯನ್ನು ಮುಟ್ಟಬೇಕುಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪೆÇ್ರ.ನರೇಂದ್ರ .ಎಲ್. ನಾಯಕ್‍ಅವರುಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ವೇದಿಕೆಯಲ್ಲಿ ಯೋಗ ಗುರುಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ರಾಮಚಂದ್ರ ಭಟ್, ಕ್ರೀಡಾ ಸಂಯೋಜಕರಾದ ಪ್ರಮೋದ್‍ಕಿಣಿ ಹಾಗು ಇನ್ನಿತರರು ಉಪಸ್ಥಿತರಿದ್ದರು.
ಇಂಗ್ಲೀಷ್ ವಿಭಾಗಉಪನ್ಯಾಸಕಿಝೀಟಾ ಡಿ’ಸೋಜಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love