“ವಿಶೇಷ ಮಕ್ಕಳದು ನಿಷ್ಕಳಂಕ ನಗು” – ಡಾ ಎಮ್. ಆರ್. ರವಿ

Spread the love

“ವಿಶೇಷ ಮಕ್ಕಳದು ನಿಷ್ಕಳಂಕ ನಗು” – ಡಾ ಎಮ್. ಆರ್. ರವಿ

ವಿಶೇಷ ಮಕ್ಕಳು ಮನಸ್ಸಿನಲ್ಲಿ ಯಾವುದೇ ಅಯ ಭಾವನೆಯನ್ನು ಇರಿಸಿಕೊಳ್ಳದೆ ಮನ ತುಂಬಿ ನಗುತ್ತಾರೆ. ಅವರ ನಗುವಿನಲ್ಲಿ ನೈಜ ನಗುವಿದೆ. “ಸುಂದರ ನಗು” ಎಂಬ ಕಾರ್ಯಕ್ರಮ ಇಲ್ಲಿ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ, ಸಾನಿಧ್ಯ ವಸತಿಶಾಲೆ, ಶಕ್ತಿನಗರ ಹಾಗೂ ಎ.ಜೆ. ಆಸ್ಪತ್ರೆ ದಂತ ವೈದ್ಯಕೀಯ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ “ಸುಂದರ ನಗು” ದಂತ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ದಕ್ಷಿಣ ಕನ್ನಡ ಜಿಲ್ಲಾ     ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಡಾ ಎಮ್. ಆರ್. ರವಿಯವರು ಹೇಳಿದರು.

ವಿಶೇಷ ಮಕ್ಕಳ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ವಿಶೇಷ ಶಿಕ್ಷಕರ ಸೇವೆ ಅಭಿನಂದನೀಯ. ನಿಮ್ಮ ನಿರಂತರ ತರಬೇತಿಯಿಂದ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯ   ಎಂದು ಅವರು ನುಡಿದರು. ಎ.ಜೆ. ದಂತ ವೈದ್ಯಕೀಯ ಮಹಾವಿದ್ಯಾಲಯದ ಡಾ ಸೌಮ್ಯ ಶೆಟ್ಟಿ, ಡಾ ಕುಶಲ್ ವಿ. ಶೆಟ್ಟಿ ಹಾಗೂ ಡಾ  ಸ್ವಾತಿ ಶೆಟ್ಟಿ, ತಮ್ಮ ದಂತ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ  ಈ ಶಿಬಿರದಲ್ಲಿ ಭಾಗವಹಿಸಿದ್ದರು. ಸುಮಾರು 140ಕ್ಕೂ ಮಿಕ್ಕಿ ಭಿನ್ನ ಸಾಮಥ್ರ್ಯದ ವಿದ್ಯಾರ್ಥಿಗಳ ತಪಾಸಣೆ ಮಾಡಲಾಯಿತು.

                       

ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಇದರ ಏರಿಯಾ ಡೈರೆಕ್ಟರ್ ಹಾಗೂ ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಿಶೇಷ ವಿದ್ಯಾರ್ಥಿನಿ ಕು ಶ್ರೇಯಾ ಎ.ವೈ. ಪ್ರಾರ್ಥನೆ ಗೀತೆಯನ್ನು ಹಾಡಿದಳು. ವಿಶೇಷ ಶಿಕ್ಷಕಿ ಶಾಂಭವಿ ಕಾಮತ್ ನಿರೂಪಿಸಿದರು. ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕದ ಮೆನೇಜರ್ ರಿಚ್ಚರ್ಡ್ ಪಿಂಟೊ ವಂದಿಸಿದರು.


Spread the love