ವಿಶೇಷ ಹಣಕಾಸು ಪ್ಯಾಕೇಜ್ ಘೋಷಣೆಗೆ ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್.ಎಸ್ ಆಗ್ರಹ

Spread the love

ವಿಶೇಷ ಹಣಕಾಸು ಪ್ಯಾಕೇಜ್ ಘೋಷಣೆಗೆ ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್.ಎಸ್ ಆಗ್ರಹ

ಉಡುಪಿ: ಕರೋನಾ ವೈರಸ್ ಸಮಸ್ಯೆಯಿಂದ ಸಾಲ ಕಟ್ಟಲು ತೊಂದರೆ ಅನುಭವಿಸುತ್ತಿರುವ ಕೃಷಿಕರು, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಗ್ರಹಿಸಿದೆ.

ಕೊರೋನಾ ವೈರಸ್ ತಡೆಗೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬಂಧಿ, ಪೊಲೀಸರು, ಮಾಧ್ಯಮ ವರ್ಗದವರಿಗೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಭಿನಂದನೆ ಸಲ್ಲಿಸುತ್ತದೆ.

ಪ್ರಮುಖವಾಗಿ ವಿದೇಶದಿಂದ ಬಂದವರು ಸ್ವಯಂ ಜಾಗೃತರಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಎಲ್ಲಾ ವೈದ್ಯಕೀಯ ಮುಂಜಾಗೃತಾ ಕ್ರಮಗಳಿಗೆ ಒಳಗಾಗಬೇಕು ಹಾಗೆಯೇ ಕೊರೋನಾ ವೈರಸ್ ಹರಡುವಿಕೆಯ ನಿಯಂತ್ರಣದಲ್ಲಿ ಸರಕರಾದೊಂದಿಗೆ ಕೈಜೋಡಿಸಬೇಕು

ಕೊರೋನಾ ವೈರಸ್ ನ್ನು ತಡೆಗಟ್ಟಲು ರಾಜ್ಯ ಸರಕಾರ ತೆಗೆದುಕೊಂಡಿರುವ ಲಾಕ್ ಡೌನ್ ಕ್ರಮಗಳಿಂದ ರಾಜ್ಯದಲ್ಲಿರುವ ಕೃಷಿ ಕಾರ್ಮಿಕರು, ಕೃಷಿ ಬೆಳೆಗಾರರು, ದಿನ ಕೂಲಿ ನೌಕರರು, ಬೀದಿ ವ್ಯಾಪಾರಿಗಳು, ತೀವ್ರವಾಗಿ ಸಂಕಷ್ಟಕ್ಕಿಡಾಗಿದ್ದಾರೆ. ಒಂದು ಹೊತ್ತಿನ ಊಟವನ್ನು ಕಷ್ಟದಲ್ಲೂ ಕೂಡ ಸಂತೋಷದಲ್ಲಿ ಉಂಡು ಹಾಯಾಗಿ ನಿದ್ರಿಸಿ ಏಳುತ್ತಿದ್ದ ಬಡಜನರ ಬದುಕಿಗೆ ಕೊಡಲಿ ಪೆಟ್ಟು ಬಿದ್ದಿದೆ. ಕಾರ್ಖಾನೆಗಳು ಬಾಗಿಲು ಹಾಕುತ್ತಿದ್ದ ಗೇರು ಬೀಜದ ಫ್ಯಾಕ್ಟರಿಗಳಲ್ಲಿ ಬೀಜಗಳ ಆಮದು ರಫ್ತುಗಳಲ್ಲಿದೇ, ಕೆಲಸದ ಮಹಿಳೆಯರಿಗೆ ರಜೆ ಘೋಷಿಸುವಂತಾಗಿದೆ. ಗುಂಪಾಗಿ ನಡೆಸುವ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿದೆ. ಕೂಲಿ ಕೆಲಸಗಳು ಅಲ್ಪಸ್ವಲ್ಪ ಮಟ್ಟಿಗೆ ಅಲ್ಲಲ್ಲಿ ನಡೆಯುತ್ತಿವೆ. ಅಚ್ಚೇ ದಿನದ ಸಂಪಾದನೆಯಲ್ಲೇ ಇದ್ದ ಕೃಷಿ ಕಾರ್ಮಿಕರ, ಕೃಷಿ ಬೆಳೆಗಾರರ, ಕೃಷಿ ಕೂಲಿ ಕಾರ್ಮಿಕರ, ಬೀದಿ ವ್ಯಾಪಾರಿಗಳ, ಗೋಳು ಕೇಳುವವರಿಲ್ಲದಾಗಿದೆ. ಮಕ್ಕಳು ಕುಡಿಯುವ ಪ್ಯಾಕೆಟ್ ಹಾಲಿನ ಖರ್ಚಿಗೂ ಕೈಯಲ್ಲಿ ಕಾಸು ಇಲ್ಲದೆ ಗೋಳಾಡುವ ಪರಸ್ಥಿತಿ ಉಂಟಾಗದೆ. ಗಗನಕ್ಕೆ ಏರಿದ ದೈನಂದಿನ ವಸ್ತುಗಳ ದರ ಒಣಗಿದ ಗಂಟಲಿನ ನಡುವೆ ಮಾತುಬಾರದೇ ಏನೋ ಗುಸುಗುಟ್ಟುತ್ತಾ ಪರಿತಪ್ಪಿಸುತ್ತಿದ್ದಾರೆ. ಜನತೆ ಸ್ವಸಹಾಯ ಸಂಘಗಳ ವಾರದ ಕಂತು ಒಂದು ಕಡೆಯಾದರೆ, ಸಣ್ಣ ಪುಟ್ಟ ಫೈನಾನ್ಸ್ ಗಳ ವಾರದ ಕಂತು ಕಟ್ಟುವಂತೆ ಮಾನಸಿಕ ಹಿಂಸೆ ಇನ್ನೋಂದು ಕಡೆ. ಕಟ್ಟಲೇ ಬೇಕಾದ ಸಾಲದ ಕಂತುಗಳು ಇವತ್ತಿನ ದಿನಗಳಲ್ಲಿ ಕೊರೋನಾಕ್ಕಿಂತ ಹೆಚ್ಚಾಗಿ ಜನರನ್ನು ಕೊಲ್ಲುತ್ತಿದೆ.

ಆದ್ದರಿಂದ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಜ್ಯ ಮತ್ತು ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದ ಕೊರೋನಾ ವೈರಸ್ ನಿಂದ ದಿನಗೂಲಿ ಕಾರ್ಮಿಕರು ತಮ್ಮ ದುಡಿಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣಗಳಿಂದ ಪರಿಸ್ಥಿತಿ ಯಥಾಸ್ಥಿತಿಗೆ ಬರುವವರೆಗೆ ಇಂತಹ ಸಾಲದ ಕಂತುಗಳನ್ನು ಕಟ್ಟುವಂತಹ ಸಂಘಸಂಸ್ಥೆಗಳ, ಬ್ಯಾಂಕ್ ಗಳ ವ್ಯವಹಾರವನ್ನು ಸ್ಥಗಿತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಆದೇಶ ನೀಡಿ ಜನರ ಜೀವ ಉಳಿಸಬೇಕು. ಹಾಗೆಯೇ ರಾಜ್ಯದಲ್ಲಿರುವ ಎಲ್ಲಾ ಕೃಷಿ ಕೂಲಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಕೃಷಿ ಬೆಳೆಗಾರರು ಬೀಡಿವ್ಯಾಪಾರಿಗಳಿಗೆ ನೇರವಾಗಿ ಜಿಲ್ಲಾಡಳಿತದ ಮೂಲಕ ಅವರ ಖಾಗೆಗೆ ಅಥವಾ ನಗದನ್ನು ನೀಡುವ ಮೂಲಕ ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಬೇಕು ಎಂದು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪರವಾಗಿ ಗೌರವ ಸಲಹೇಗಾರರಾದ ವೆರೋನಿಕಾ ಕರ್ನೆಲಿಯೊ ಹಾಗೂ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರ್ ಆಗ್ರಹಿಸಿದ್ದಾರೆ


Spread the love