ವೆಬ್‍ಸೈಟ್‍ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣ

Spread the love

ವೆಬ್‍ಸೈಟ್‍ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣ

ಮಂಗಳೂರು :ಕರ್ನಾಟಕ ಯಕ್ಷಗಾನ ಅಕಾಡೆಮಿಯು ವೆಬ್‍ಸೈಟ್‍ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ನೂತನ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಪ್ರಯುಕ್ತ ಸಾರ್ವಜನಿಕರು ತಮ್ಮ ಬಳಿ ಇರುವ ಯಕ್ಷಗಾನ ಪ್ರಸಂಗಗಳನ್ನು ಅಕಾಡೆಮಿಗೆ ಕಳುಹಿಸಿಕೊಡಬೇಕಾಗಿ ಕೋರಿದೆ. ಇದಕ್ಕೆ ತವiಗೆ ನಿಯಮಾನುಸಾರ ಗೌರವ ಸಂಭಾವನೆಯನ್ನು ಪಾವತಿಸಲಾಗುವುದು.

ಕಲಾವಿದರ/ಸಂಘಸಂಸ್ಥೆಗಳ ಬಳಿ ಇರುವ ಯಕ್ಷಗಾನಕ್ಕೆ ಸಂಬಂಧಿಸಿದ ಆಡಿಯೋ ವೀಡಿಯೋಗಳನ್ನು ದಾಖಲಿಸುವ ಯೋಜನೆಯೊಂದನ್ನು ಸಹ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ಬಳಿ ಇರುವ ಯಕ್ಷಗಾನ(ತೆಂಕು, ಬಡಗು, ಬಡಾಬಡಗು), ಮೂಡಲಪಾಯ ಯಕ್ಷಗಾನ, ಯಕ್ಷಗಾನ ಗೊಂಬೆಯಾಟ, ಕೇಳಿಕೆ, ಘಟ್ಟದಕೋರೆ ಇತ್ಯಾದಿ ಕಲಾಪ್ರಕಾರಗಳ ಆಡಿಯೋ ವೀಡಿಯೋಗಳ ಪ್ರತಿಯನ್ನು ಅಕಾಡೆಮಿಗೆ ಕಳುಹಿಸಿಕೊಡಬೇಕು.

ಮೇಲ್ಕಂಡ ಯಕ್ಷಗಾನ ಪ್ರಸಂಗಗಳು ಹಾಗೂ ಯಕ್ಷಗಾನದ ಆಡಿಯೋ ವೀಡೀಯೋಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560 002, ಇವರಿಗೆ ಅಕ್ಟೋಬರ್ 26 ರೊಳಗೆ ಕಳುಹಿಸುವುದು. ಹೆಚ್ಚಿನ ವಿವರಗಳಿಗೆ ಅಕಾಡೆಮಿಯನ್ನು (ದೂರವಾಣಿ ಸಂಖ್ಯೆ: 080-22113146) ಸಂಪರ್ಕಿಸಲು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love