ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ “ಪರಿಣತಿ – 2025” ಸನಿವಾಸ ಕಾರ್ಯಾಗಾರ
ವಿಶ್ವ ಕೊಂಕಣಿ ಕೇಂದ್ರದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದ.ಕ ಜಿಲ್ಲಾ ಕುಡಾಳ್ ದೇಶದ ಅಧ್ಯಕ್ಷ ಬ್ರಾಹ್ಮಣ ಸಂಘ ಇವರ ಜಂಟಿ ಆಶ್ರಯದಲ್ಲಿ, ಹಮ್ಮಿಕೊಂಡ ನಾಲ್ಕು ದಿನದ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ “ಪರಿಣತಿ – 2025” ಸನಿವಾಸ ಕಾರ್ಯಾಗಾರದ ನಾಲ್ಕನೇ ದಿನದಲ್ಲಿ ಶಿಬಿರಾರ್ಥಿಗಳಿಗಾಗಿ ಸಂಧ್ಯಾವಂದನೆ ಪ್ರಾತ್ಯಕ್ಷಿಕೆಯ ವಿಡಿಯೋ ಅನಾವರಣಗೊಂಡಿತು.
“ಸಂಧ್ಯಾವಂದನೆಯಲ್ಲಿ ಪಠಿಸುವ ಗಾಯತ್ರಿ ಮಂತ್ರವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಶುದ್ಧೀಕರಣಕ್ಕೆ ಸಹಾಯಕವಾಗಿದೆ, ಮಾತ್ರವಲ್ಲದೆ ಜ್ಞಾನಶಕ್ತಿ , ಬುದ್ಧಿಶಕ್ತಿ ಹಾಗೂ ಏಕಾಗ್ರತೆಯಿಂದ ಆತ್ಮಸ್ಥೈರ್ಯವನ್ನು ಬೆಳೆಸುತ್ತದೆ. ಇದು ನಮ್ಮ ಪರಂಪರೆಯ ಮೂಲ ನಂಬಿಕೆ. ಇದನ್ನು ಉಳಿಸಿ, ಮುಂದಿನ ಪೀಳಿಗೆಗೆ ನೀಡುವಂತಹ ಕಾರ್ಯ ನಮ್ಮಿಂದಾಗಬೇಕಾಗಿದೆ. ಇದರಿಂದ ಜೀವನ ಪಾವನವಾಗುವುದು, ಎನ್ನುವುದು ಸನಾತನ ಧರ್ಮದ ನಂಬಿಕೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ, ಇವರು ಸಂಧ್ಯಾವಂದನೆಯ ಪ್ರಾತ್ಯಕ್ಷಿಕೆಯ ವಿಡಿಯೋವನ್ನು ಅನಾವರಣಗೊಳಿಸಿ ಮಾತನಾಡಿದರು.
ಸಂಧ್ಯಾವಂದನೆಯ ಅಭ್ಯಾಸವು ತಮ್ಮ ದೈನಂದಿನ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ ಮತ್ತು ಜ್ಞಾನವನ್ನು ನೀಡುತ್ತದೆ. ಇದು ಧಾರ್ಮಿಕ ನಂಬಿಕೆಯಾಗಿದ್ದರೂ ಕೂಡ, ಇದರಲ್ಲಿ ಬರುವ ಪ್ರಾಣಾಯಾಮ, ಧ್ಯಾನ, ಕುಳಿತುಕೊಳ್ಳುವ ಭಂಗಿ ಇವೆಲ್ಲವೂ ಶಾರೀರಿಕ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಗುರು ಪರಂಪರೆಯಲ್ಲಿ ಋಗ್ವೇದೀಯ ಸ್ಮಾತ೯ ಸಂಪ್ರದಾಯದಲ್ಲಿ, ನಾವು ವಿಷ್ಣು ಆರಾಧಕರಾಗಿದ್ದರೂ ಹರಿಹರರಲ್ಲಿ ಭೇದವಿಲ್ಲದೆ ಆರಾಧಿಸಿ ಪೂಜೆ ಮಾಡುತ್ತೇವೆ. ನಾವು ಭಸ್ಮಧಾರಿಯೂ, ಗೋಪಿ ಹಾಗೂ ಗಂಧಧಾರಿಗಳೂ ಹೌದು. ಆದ್ದರಿಂದ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಗುರುಪೀಠವಾದ ಶ್ರೀ ದಾಬೋಳಿ ಮಠದ ಗುರು ಪರಂಪರೆಯಲ್ಲಿ ಬಂದ ಸಂಪ್ರದಾಯದಂತೆ ಲಘು ಸಂಧ್ಯಾವಂದನೆ ಪ್ರಾತ್ಯಕ್ಷಿಕೆಯ ವಿಡಿಯೋವನ್ನು ಅನಾವರಣ ಮಾಡುವುದು ಅತ್ಯಂತ ಸಂತೋಷವಾಗಿದೆ. ಇದು ಬ್ರಹ್ಮೋಪದೇಶ ಪಡೆದ ನವ ವಟುಗಳಿಗೆ ಬಹಳ ಸುಲಭವಾಗಿ ಕ್ರಮಬದ್ಧವಾಗಿ ಶ್ರದ್ದಾ ಭಕ್ತಿಯಿಂದ ಅಭ್ಯಾಸ ಮಾಡಲು ಸಹಾಯವಾಗುತ್ತದೆ. ಎಂದು ಸಮಾಜದ ಪುರೋಹಿತರಾದ ಶ್ರೀ ನಿತ್ಯಾನಂದ ಭಟ್ ಇವರು ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ್ ನಾಯಕ್ ಮೈರಾ, ಕೋಶಾಧಿಕಾರಿ ಬಿ. ಆರ್. ಭಟ್, ಡಾ. ಬಿ ದೇವದಾಸ್ ಪೈ, ಶ್ರೀ ಪುಣಾ೯ನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ, ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ದಯಾನಂದ ನಾಯಕ್ ಪುಂಜಾಲ್ಕಟ್ಟೆ, ಸುಚಿತ್ರಾ ರಮೇಶ್ ನಾಯಕ್, ಸುರೇಂದ್ರ ಸಾಮಂತ್, ಅನಂತ ಪ್ರಭು ಮರೋಳಿ, ವಿಶ್ವನಾಥ ಶೆಣೈ ಮರೋಳಿ, ರಾಜೇಶ್ ಪ್ರಭು ಬನ್ನೂರು, ಗಣೇಶ್ ನಾಯಕ್ ಬೋಳಂಗಡಿ, ರಾಜೇಶ್ ನಾಯಕ್ ಬೋಳಂಗಡಿ, ಪ್ರಭಾಕರ ಪ್ರಭು ಗೋಳಿಮಾರ್, ಭಾಸ್ಕರ್ ಪ್ರಭು ಕೊರ್ದೊಟ್ಟು, ಭಾಸ್ಕರ್ ಪ್ರಭು ಗೋಳಿಮಾರು, ರತ್ನಾವತಿ ಪ್ರಭು ಕುಲಶೇಖರ್, ಸುಧಾ ಪ್ರಭು ಕುಲಶೇಖರ್, ಸುಧಾಕರ್ ನಾಯಕ್ ಅಸೈಗೋಳಿ, ಮೋಹನ್ ನಾಯಕ್ ಒಡ್ಡೂರು, ಸೀತಾರಾಮ ಪ್ರಭು ಕೊಟ್ಟಾರ, ಅರವಿಂದ ಪ್ರಭು ಕುಲಶೇಖರ್, ಅಶೋಕ್ ನಾಯಕ್ ಬಿಕನ೯ಕಟ್ಟೆ, ಪ್ರಭಾಕರ ಪ್ರಭು ಮೇರೀಹಿಲ್, ಗೋಪಾಲ್ ಸಾಮಂತ್ ಮೈರಾ, ವಿಜಯ ಶೆಣೈ ಕೊಡಂಗೆ, ಮುಂತಾದವರು ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ ರಮೇಶ್ ನಾಯಕ್ ಮೈರಾ ಸ್ವಾಗತಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ ವಂದಿಸಿದರು.