ಶಾಲಾ ಶುಲ್ಕ ವಿವರ:- ಗೇಟಿನ ಮುಂಭಾಗದಲ್ಲಿ ಫಲಕದಲ್ಲಿ ಪ್ರಕಟಿಸಲು ಸೂಚನೆ

Spread the love

ಶಾಲಾ ಶುಲ್ಕ ವಿವರ:- ಗೇಟಿನ ಮುಂಭಾಗದಲ್ಲಿ ಫಲಕದಲ್ಲಿ ಪ್ರಕಟಿಸಲು ಸೂಚನೆ

ಮಂಗಳೂರು:- 2018-19ನೇ ಸಾಲಿನಿಂದ ದಾಖಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಎಲ್‍ಕೆಜಿ ಯಿಂದ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮತ್ತು ಪ್ರೌಢ ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿಗಳ ಪ್ರವೇಶಾತಿಯ ಕುರಿತು ಶಾಲಾ ಆಡಳಿತ ಮಂಡಳಿ/ಶಾಲಾ ಮುಖ್ಯಸ್ಥರು ತಮ್ಮ ಶಾಲೆಯಲ್ಲಿ ಲಭ್ಯವಿರುವ ಸೀಟುಗಳ ಮತ್ತು ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶಾಲಾ ನೋಟೀಸ್ ಬೋರ್ಡಿನಲ್ಲಿ ಪ್ರಕಟಿಸಲು ಹಾಗೂ ದಾಖಲಾತಿ ಸಂದರ್ಭದಲ್ಲಿ ಪಡೆಯಬಹುದಾದ ಶುಲ್ಕದ ವಿವರಗಳನ್ನು ಶಾಲಾ ಆವರಣ ಮತ್ತು ಗೇಟಿನ ಮುಂಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ 6×10 ಅಡಿ ಅಳತೆಯ ಬೋರ್ಡ್‍ನಲ್ಲಿ ಪ್ರಕಟಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಫಲಕದಲ್ಲಿ ಪ್ರಕಟಿಸಬೇಕಾದ ವಿಷಯದ ವಿವರಗಳನ್ನು (ನಮೂನೆಯನ್ನು) ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯಿಂದ ಪಡೆದುಕೊಂಡು ಪ್ರತೀ ಶಾಲೆಗಳಲ್ಲಿ ಶುಲ್ಕದ ವಿವರವನ್ನು ಪ್ರಕಟಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಯ, ಆಡಳಿತ ಮಂಡಳಿ ಮುಖ್ಯಸ್ಥರಿಗೆ, ಶಾಲಾ ಸಂಚಾಲಕರಿಗೆ, ಮುಖ್ಯ ಶಿಕ್ಷಕರಿಗೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ.


Spread the love