“ಶಾಸ್ತ್ರಿ ಸರ್ಕಲ್ ಚಲೋ” ಕಾರ್ಯಕ್ರಮ ಕುಂ.ತಾ.ಕಾ. ಪತ್ರಕರ್ತರ ಸಂಘಕ್ಕೆ ಸಂಬಂಧವಿಲ್ಲ

Spread the love

“ಶಾಸ್ತ್ರಿ ಸರ್ಕಲ್ ಚಲೋ” ಕಾರ್ಯಕ್ರಮ ಕುಂ.ತಾ.ಕಾ. ಪತ್ರಕರ್ತರ ಸಂಘಕ್ಕೆ ಸಂಬಂಧವಿಲ್ಲ

ಉಡುಪಿ: ಇತ್ತೀಚಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರನ್ನು ಹೋಲುವ ಇನ್ನೊಂದು ಸಂಘ ಕುಂದಾಪುರದಲ್ಲಿ ಹುಟ್ಟಿಕೊಂಡಿದೆ. ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಎಂಬ ಹೆಸರಿನಡಿಯಲ್ಲಿ ಆರಂಭವಾದ ಸಂಘಟನೆಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಜಿಲ್ಲಾ ಸಂಘ ಸ್ಪಷ್ಟನೆ ನೀಡಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾ ಸಂಘಟನೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ), ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ (ರಿ) ಇದರ ಅಧೀನ ಸಂಸ್ಥೆಯಾಗಿದ್ದು ರಾಜ್ಯ ಸರ್ಕಾರ ಮಾನ್ಯತೆ ಪಡೆದ ಏಕೈಕ ಪತ್ರಕರ್ತರ ಸಂಘಟನೆಯಾಗಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬ್ರಹ್ಮಗಿರಿಯ ನಾಯರ್ ಕೆರೆಯ ಬಳಿ ಕೇಂದ್ರ ಕಚೇರಿಯನ್ನ ಹೊಂದಿದ್ದು ಇದರ ಅಧೀನಕ್ಕೆ ಒಳಪಟ್ಟು ಕಾಪು, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಉಡುಪಿ, ಬೈಂದೂರುನಲ್ಲಿ ತಾಲೂಕು ಸಂಘಗಳು ಕಾರ್ಯಚರಿಸುತ್ತಿವೆ. ಉಡುಪಿಯಾದ್ಯಂತ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 197 ಸದಸ್ಯರನ್ನು ಹೊಂದಿದ್ದು ತಾಲೂಕು ಸಂಘಗಳು ಸಂಘಟನಾತ್ಮಕವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ.

ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರಾಗಿ ಜನಾರ್ದನ ಮರವಂತೆ, ಕೋಶಾಧಿಕಾರಿಯಾಗಿ ಅರುಣ್ ಕುಮಾರ್ ಶಿರೂರು, ಕುಂದಾಪುರದಲ್ಲಿ ಶಶಿಧರ್ ಹೆಮ್ಮಾಡಿ ಅದ್ಯಕ್ಷರಾಗಿ, ಕಾರ್ಯದರ್ಶಿಯಾಗಿ ನಾಗರಾಜ್ ರಾಯಪ್ಪನ ಮಠ, ಬ್ರಹ್ಮಾವರ ತಾಲೂಕು ಸಂಘದ ಅದ್ಯಕ್ಷರಾಗಿ ಪ್ರಭಾಕರ ಆಚಾರ್ಯ, ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಗಾಣಿಗ, ಕಾರ್ಕಳದಲ್ಲಿ ಅದ್ಯಕ್ಷರಾಗಿ ಆರ್.ಬಿ ಜಗದೀಶ್ , ಕಾರ್ಯದರ್ಶಿಯಾಗಿ ಸಂಪತ್ ನಾಯಕ್, ಕಾಪುವಿನಲ್ಲಿ ಅದ್ಯಕ್ಷರಾಗಿ ಪ್ರಮೋದ್ ಸುವರ್ಣ ಹಾಗೂ ಕಾರ್ಯದರ್ಶಿಯಾಗಿ ವಾದಿರಾಜ್ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಉಡುಪಿಯಲ್ಲಿ ಸಂಘ ಕೇಂದ್ರ ಕಚೇರಿ ಸಂಘ ಹೊಂದಿರುವ ಕಾರಣ ಉಡುಪಿಯಲ್ಲಿ ಪ್ರೆಸ್ ಕ್ಲಬ್ ನ ಸಂಚಾಲಕ ನಾಗರಾಜ್ ಹಾಗೂ ಸಹ ಸಂಚಾಲಕರಾಗಿ ಸುಭಾಶ್ಚಂದ್ರ ವಾಗ್ಳೆ ಪ್ರೆಸ್ ಕ್ಲಬ್ ನ ಜವಾಬ್ಧಾರಿಯನ್ನ ನಿರ್ವಹಿಸುತ್ತಿದ್ದಾರೆ.

ಇತ್ತೀಚಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರನ್ನು ಹೋಲುವ ಇನ್ನೊಂದು ಸಂಘ ಕುಂದಾಪುರದಲ್ಲಿ ಹುಟ್ಟಿಕೊಂಡಿದೆ. ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಎಂಬ ಹೆಸರಿನಡಿಯಲ್ಲಿ ಆರಂಭವಾದ ಈ ಸಂಘದಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಮತ್ತು ಪದಾಧಿಕಾರಿಗಳಿಗೂ ಹಾಗೂ ನೂತನವಾಗಿ ಆರಂಭವಾದ ಕುಂದಾಪುರ ತಾಲೂಕು ಪತ್ರಕರ್ತರ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ. ಆದ್ದರಿಂದ ಅಂತಹ ಯಾವುದೇ ಸಂಘದಿಂದ ವ್ಯವಹರಿಸಿದರೆ ಅದಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಜವಬ್ಧಾರಿಯಾಗುವುದಿಲ್ಲ ಎಂದು ಈ ಮೂಲಕ ತಿಳಿಯಬಯಸುವುದಾಗಿ ಜಿಲ್ಲಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

“ಶಾಸ್ತ್ರಿ ಸರ್ಕಲ್ ಚಲೋ” ಕಾರ್ಯಕ್ರಮಕ್ಕೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಂಬಂಧವಿಲ್ಲ

ಅಕ್ಟೋಬರ್ 20ರ ಭಾನುವಾರ ಕುಂದಾಪುರದಲ್ಲಿ ನಡೆಯಲಿದೆ ಎನ್ನಲಾಗಿರುವ “ಶಾಸ್ತ್ರಿ ಸರ್ಕಲ್ ಚಲೋ” ಎಂಬ ಹೆಸರಿನ ಕಾರ್ಯಕ್ರಮಕ್ಕೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಂಯೋಜಿತವಾಗಿರುವ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಾಲೂಕು ಸಂಘದ ಅಧ್ಯಕ್ಷರಾದ ಶಶಿಧರ ಹೆಮ್ಮಾಡಿ ಹಾಗೂ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love