ಸಂಡೇ ಲಾಕ್ ಡೌನ್ ಸಂಪೂರ್ಣ ಸ್ಥಬ್ದಗೊಂಡ ಉಡುಪಿ ಜಿಲ್ಲೆ- ರಸ್ತೆಗಳು ಖಾಲಿ ಖಾಲಿ

Spread the love

ಸಂಡೇ ಲಾಕ್ ಡೌನ್ ಸಂಪೂರ್ಣ ಸ್ಥಬ್ದಗೊಂಡ ಉಡುಪಿ ಜಿಲ್ಲೆ- ರಸ್ತೆಗಳು ಖಾಲಿ ಖಾಲಿ

ಉಡುಪಿ: ರಾಜ್ಯದಲ್ಲಿ ಕೊರೋನಾ ಸೋಂಕು ಕೈಮೀರುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಜುಲೈ 5ರಿಂದ ಅಗಸ್ಟ್ 2 ರ ವರೆಗೆ ಪ್ರತಿಭಾನುವಾರ ಲಾಕ್ ಡೌನ್ ಆದೇಶ ಹೊರಡಿಸಿದ್ದ ಇದಕ್ಕೆ ಉಡುಪಿ ಜಿಲ್ಲೆ ಇಂದು ಸಂಪೂರ್ಣ ಸ್ಥಗಿತಗೊಂಡಿದೆ.

ಈ ಮಾದರಿಯ ಲಾಕ್’ಡೌನ್ ಇನ್ನು ಒಂದು ತಿಂಗಳ ಕಾಲ ಮುಂದುವರೆಯಲಿದೆ. ಲಾಕ್’ಡೌನ್ ವೇಳೆ ಹಾಲು, ತರಕಾರಿ, ಹಣ್ಣು, ಔಷಧ, ಮಾಂಸದ ಅಂಗಡಿ ಸೇರಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಮದ್ಯದಂಗಡಿ, ಟ್ಯಾಕ್ಸಿ, ಆಟೋ, ಬಿಎಂಟಿಸಿ, ಕೆಎಸ್ಆರ್’ಟಿಸಿ ಬಸ್, ದೇವಾಲಯಗಳು ಸೇರಿ ಅನಗತ್ಯ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಖಾಸಗಿ, ಸರಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಆಟೋಗಳು ಸಹ ರಸ್ತೆಗಿಳಿದಿಲ್ಲ.

ಲಾಕ್ ಡೌನ್ ವೇಳೆ ಸುಖಾಸುಮ್ಮನೆ ಮನೆಯಿಂದ ಹೊರಬಂದರೆ ಮುಲಾಜಿಲ್ಲದೆ ಪೊಲೀಸರು ಕೇಸ್ ದಾಖಲಿಸಿ ವಾಹನ ಮುಟ್ಟುಗೋಲು ಹಾಕುವುದಾಗಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ

ಸರಕು ಸಾಗಣೆ ಮತ್ತು ತುರ್ತು ಸೇವೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರಲಿದ್ದು, ಆಸ್ಪತ್ರೆ, ಮೆಡಿಕಲ್ ಶಾಪ್, , ಹಾಲು ಮತ್ತು ವೈದ್ಯಕೀಯ ಸೇವೆ ಸಿಗಲಿದೆ.


Spread the love