ಸಂಸದ ಚೌಟ ವಿಚಾರಗಳನ್ನು ತಿಳಿದು ಮಾತನಾಡಲಿ : ಪದ್ಮರಾಜ್
ಮಂಗಳೂರು: ಸಂಸದ ಬ್ರಿಜೇಶ್ ಚೌಟ ವಿದ್ಯಾವಂತರಾದ ವ್ಯಕ್ತಿ. ಆದರೆ, ವಿಚಾರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಮಾತನಾಡಬೇಕು. ಜನರಿಗೆ ತಪ್ಪು ಮಾಹಿತಿ ನೀಡಬಾರದು. ಸಿಎಂ ಸಿದ್ದರಾಮಯ್ಯ ಜನಪರ ನಾಯಕರು; ಅವರು ರಾಜ್ಯದ ಅಭಿವೃದ್ಧಿಗೆ ಸತತ ಪ್ರಯತ್ನಿಸುತ್ತಿದ್ದಾರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಎಂದು ಹೇಳಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಸದ ಬ್ರಿಜೇಶ್ ಚೌಟ ಅವರು “ಸಿಎಂ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಹಲವು ಅಸಂಗತತೆಗಳು ಗೋಚರಿಸುತ್ತಿವೆ” ಎಂದು ಆರೋಪಿಸಿದ್ದರು. ಜಿಎಸ್ಟಿ ಕುರಿತ ವಿಚಾರವನ್ನು ಪ್ರಸ್ತಾಪಿಸಿ, “ಆರೋಗ್ಯ ಕ್ಷೇತ್ರದಲ್ಲಿ ಉಚಿತ ಸೇವೆ ನೀಡಬೇಕೆಂದು ಆಗಲೇ ಒತ್ತಾಯವಿತ್ತು, ಆದರೆ ಇತ್ತೀಚಿನ ಹೆಲ್ತ್ ಪಾಲಿಸಿಯಲ್ಲಿ ಜಿಎಸ್ಟಿ ಶೂನ್ಯ ಮಾಡಿದರೆಂದು ಹೇಳಲಾಗುತ್ತಿದೆ — ಆದರೆ ನಿಜವಾಗಿಯೂ ಎಲ್ಲಲ್ಲಿ ಶೂನ್ಯ ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.
ಚೌಟ ಅವರು “ಸಿದ್ದರಾಮಯ್ಯ ಅವರು 15 ಬಜೆಟ್ ಮಂಡನೆ ಮಾಡಿದ ನಾಯಕರು. ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಸರ್ಕಾರ ದಿವಾಳಿ ಆಗುತ್ತದೆ ಎಂದಿದ್ದರೂ, ಸರ್ಕಾರ ಇಂದು ಸುಸಜ್ಜಿತವಾಗಿ ನಡೀತಿದೆ” ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಪುತ್ತೂರಿನ ಜನಮನ ಕಾರ್ಯಕ್ರಮದಲ್ಲಿ ನಡೆದ ನೂಕುನುಗ್ಗಲು ಕುರಿತು ಅವರು ಹೇಳಿದ್ದು, “ಹವಾಮಾನ ವೈಪರಿತ್ಯದಿಂದ ಈ ಘಟನೆ ನಡೆದಿದೆ. ಗಾಯಗೊಂಡವರ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಿದೆ” ಎಂದು ಹೇಳಿದರು.
“ಬಿಜೆಪಿ ಆಡಳಿತ ವೇಳೆ ಬಂಗಾರದ ಬೆಲೆ ₹28 ಸಾವಿರ ಇತ್ತು, ಈಗ ₹1.30 ಲಕ್ಷಕ್ಕೆ ಏರಿದೆ. ಕ್ರೂಡ್ ಆಯಿಲ್ ಬೆಲೆಯೂ ಹೆಚ್ಚಾಗಿದೆ, ಆದರೂ ವಿರೋಧ ಪಕ್ಷ ಮೌನವಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ರಾಜ್ಯ ಸರ್ಕಾರದ ಜಿಎಸ್ಟಿ ಮರುಪಾವತಿ ಸರಿಯಾಗಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೇ ಈ ವಿಷಯದಲ್ಲಿ ಸ್ಪಷ್ಟತೆ ನೀಡಬೇಕಿದೆ. ರಾಜ್ಯದ ಮೇಲೆ ಅನವಶ್ಯಕ ಆರೋಪ ಮಾಡುವುದು ಸರಿಯಲ್ಲ” ಎಂದು ಹೇಳಿದರು.