ಸಾಮೂಹಿಕ ಪ್ರಾರ್ಥನೆ ಆರೋಪ; ಪಡುಕೋಣೆ ಚರ್ಚ್ ಧರ್ಮಗುರು ಸೇರಿದಂತೆ ಏಳು ಮಂದಿ ಮೇಲೆ ಎಫ್ ಐ ಆರ್

Spread the love

ಸಾಮೂಹಿಕ ಪ್ರಾರ್ಥನೆ ಆರೋಪ; ಪಡುಕೋಣೆ ಚರ್ಚ್ ಧರ್ಮಗುರು ಸೇರಿದಂತೆ ಏಳು ಮಂದಿ ಮೇಲೆ ಎಫ್ ಐ ಆರ್

ಬೈಂದೂರು: ಜಿಲ್ಲಾಧಿಕಾರಿಗಳು ಹೊರಡಿಸಿರುವ ಸೆಕ್ಷನ್ 144(3) ಆದೇಶದ ಹೊರತಾಗಿಯೂ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಆರೋಪ ಮೇಲೆ ಪಡುಕೋಣೆ ಚರ್ಚಿನ ಧರ್ಮಗುರು ಸೇರಿದಂತೆ ಏಳು ಮಂದಿ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಪಡುಕೋಣೆ ಚರ್ಚಿನಲ್ಲಿ ಗುರುವಾರ ಸಂಜೆ ನಾಡ ಗ್ರಾಮ ಪಂಚಾಯತ್ ಪಿ.ಡಿ.ಓ ರವರಿಗೆ ಬೈಂದೂರು ತಾಲೂಕು ನಾಡ ಗ್ರಾಮ, ಪಡುಕೋಣೆ ಸಂತ ಅಂತೋನಿ ಚರ್ಚ್ ನಲ್ಲಿ ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರವ ಬಗ್ಗೆ ಸಾರ್ವಜನಿಕ ದೂರವಾಣಿ ಕರೆಯ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆ ಸಮಯ ಸಂತ ಅಂತೋನಿ ಚರ್ಚ್ ನಲ್ಲಿ ಧರ್ಮಗುರುಗಳು ಹಾಗೂ ಇತರ 6 ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದು ದೃಢಪಟ್ಟಿದ್ದು, ಇವರುಗಳು ಜಿಲ್ಲಾ ದಂಡಾಧಿಕಾಯವರು ಉಡುಪಿ ಜಿಲ್ಲೆ ಇವರು ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆ ಹಿನ್ನಲೆಯಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಸಭೆ ಸಮಾರಂಭಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ, ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಏಳು ಮಂದಿಯ ವಿರುದ್ದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 188, 269 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. ಜಿಲ್ಲಾಡಳಿತದ ಆದೇಶದ ಹಿನ್ನಲೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಕೂಡ ಚರ್ಚುಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.


Spread the love