ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೊಳಲಗಿರಿಯ ಜೊಯ್ಸ್ಟನ್ ಡಿಸೋಜಾ

Spread the love

ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೊಳಲಗಿರಿಯ ಜೊಯ್ಸ್ಟನ್ ಡಿಸೋಜಾ

ಉಡುಪಿ: ಉಡುಪಿಯ ಕೊಳಲಗಿರಿಯ ಜಾಯ್ಸ್ಟನ್ ಡಿಸೋಜಾ ಅವರು ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ತಮ್ಮ ಶೈಕ್ಷಣಿಕ ಹಾಗೂ ವೃತ್ತಿಪರ ಪಯಣದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದ್ದಾರೆ. ಅವರು ದಿ. ಜಾನ್ ಪಿಯುಸ್ ಡಿಸೋಜಾ ಹಾಗೂ ಫ್ಲಾವಿಯಾ ಡಿಸೋಜಾ ಅವರ ಪುತ್ರರಾಗಿದ್ದಾರೆ.

ಜಾಯ್ಸ್ಟನ್ ಅವರು ತಮ್ಮ ಆರ್ಟಿಕಲ್ಶಿಪ್ ತರಬೇತಿಯನ್ನು ಪ್ರಸನ್ನ ಶೆಣೈ ಅಂಡ್ ಅಸೋಸಿಯೇಟ್ಸ್ ನಲ್ಲಿ ಪೂರ್ಣಗೊಳಿಸಿದ್ದು, ಅಲ್ಲಿ ವೃತ್ತಿಪರ ಅನುಭವ ಹಾಗೂ ಪ್ರಾಯೋಗಿಕ ಜ್ಞಾನವನ್ನು ಸಂಪಾದಿಸಿದ್ದಾರೆ. ಪ್ರಸ್ತುತ ಅವರು ಮಂಗಳೂರಿನ ನಿತಿನ್ ಜೆ. ಶೆಟ್ಟಿ ಅಂಡ್ ಕೋ. ಯಲ್ಲಿ ಅಸೋಸಿಯೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾರ್ಥಿ ಅವಧಿಯಲ್ಲಿ, ಜಾಯ್ಸ್ಟನ್ ಅವರು ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನ ಸದರ್ನ್ ಇಂಡಿಯಾ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ (SICASA) ಮಂಗಳೂರು ಶಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಅವರ ಕಾರ್ಯತತ್ಪರತೆ ಹಾಗೂ ನೇತೃತ್ವಕ್ಕೆ ರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿತ್ತು.

ಜಾಯ್ಸ್ಟನ್ ಅವರ ಈ ಸಾಧನೆ ಅವರ ಬದ್ಧತೆ, ಪರಿಶ್ರಮ ಹಾಗೂ ಶ್ರೇಷ್ಠತೆಯ ದೃಢನಿಷ್ಠೆಗೆ ಸಾಕ್ಷಿಯಾಗಿದ್ದು, ಈ ಭಾಗದ ಮಹತ್ವಾಕಾಂಕ್ಷಿ ಹಣಕಾಸು ವೃತ್ತಿಪರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.


Spread the love
Subscribe
Notify of

0 Comments
Inline Feedbacks
View all comments