ಸಿಸಿಬಿ ಪೋಲಿಸರಿಂದ ದರೋಡೆಗೆ ಯತ್ನಿಸಿದ 7 ಮಂದಿಯ ಸೆರೆ

Spread the love

ಸಿಸಿಬಿ ಪೋಲಿಸರಿಂದ ದರೋಡೆಗೆ ಯತ್ನಿಸಿದ 7 ಮಂದಿಯ ಸೆರೆ

ಮಂಗಳೂರು: ನಗರದ ಬಿಜೈ ಬಿಗ್ ಬಝಾರ್ ಎದುರು ದರೋಡೆಗೆ ಯತ್ನಿಸಿದ 7 ಮಂದಿಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರುಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಕಾವೂರು ಕಾಪಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (23), ಕುಂಜತ್ತ ಬೈಲ್ ನಿವಾಸಿ ವಿಶಾಲ್ ಕುಮಾರ್ (23), ಕೊಂಚಾಡಿ ನಿವಾಸಿ ಗೌತಮ್ ದೇವಾಡಿಗ (23), ಮೂಡುಶೆಡ್ಡೆ ನಿವಾಸಿ ವಿನೋದ್ ರಾಜ್ (21), ದಿವಾಕರ (29), ತೊಕ್ಕೊಟ್ಟು ನಿವಾಸಿ ಪ್ರವಣ್ (25) ಮತ್ತು ಯೆಯ್ಯಾಡಿ ನಿವಾಸಿ ಕಾರ್ತಿಕ್ (25) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 18ರಂದು ಸಂಜೆ 4.40 ರ ಸುಮಾರಿಗೆ ಮಂಗಳೂರು ನಗರದ ಬಿಜೈಕಾಫಿಕಾಡ್ ರಸ್ತೆಯಲ್ಲಿರುವ ಬಿಜೈ ಬಿಗ್ ಬಝಾರ್ ಎದುರು 2-3 ಬೈಕ್ ಗಳಲ್ಲಿ 6-7 ಮಂದಿಯುವಕರು ದರೋಡೆಗೆ ಯತ್ನಿಸುವ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿ ದರೋಡೆಗೆ ಯತ್ನಿಸಿದ ಪ್ರಸ್ತುತ ಜೈಲಿನಲ್ಲಿ ವಿಚಾರಣಾ ಖೈದಿಯಾಗಿರುವ ಆಕಾಶಭವನ ಶರಣ್ ಎಂಬಾತನ ಸಹಚರರಾಗಿರುವ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಮಾರಕಾಯುಧಗಳನ್ನು, 3 ದ್ವಿಚಕ್ರ ವಾಹನಗಳನ್, ಹಾಗೂ 6 ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿ ಆಕಾಶ ಭವನ ಶರಣ್ @ ರೋಹಿದಾಸ್ ಎಂಬಾತನ ಸೂಚನೆಯಂತೆ ದರೋಡೆಗೆ ಸಂಚು ರೂಪಿಸಿರುವುದಾಗಿ ಪೋಲಿಸ್ ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳ ಪೈಕಿ ಪ್ರೀತಂ ಎಂಬಾತನು ಈ ಹಿಂದೆ ಮಂಗಳೂರು ಪೂರ್ವ, ಬರ್ಕೆ, ಕಾವೂರು ಪೊಲೀಸ್ ಠಾಣೆಗಳಲ್ಲಿ ದರೋಡೆಗೆ ಯತ್ನ, ಹಫ್ತಾ ಹಣಕ್ಕೆ ಬೆದರಿಕೆಗೆ ಸಂಬಂಧಪಟ್ಟಂತೆ 3 ಪ್ರಕರಣಗಳು ದಾಖಲಾಗಿರುತ್ತದೆ. ವಿಶಾಲ್ ಕುಮಾರ್ ಎಂಬಾತನ ವಿರುದ್ಧ ಕಾವೂರು, ಬರ್ಕೆಪೊಲೀಸ್ ಠಾಣೆಗಳಲ್ಲಿ ಒಟ್ಟು 2 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳನ್ನು ಹಾಗೂವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತುಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಈವಿಶೇಷ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗ ವಹಿಸಿರುತ್ತಾರೆ


Spread the love