ಸುದೀರ್ಘ ಕಾಲದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯರಿಗೆ ಶುಭಕೋರಿದ ಐವನ್ ಡಿʼಸೋಜಾ

Spread the love

ಸುದೀರ್ಘ ಕಾಲದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯರಿಗೆ ಶುಭಕೋರಿದ ಐವನ್ ಡಿʼಸೋಜಾ

ಮಂಗಳೂರು: ಕರ್ನಾಟಕ ರಾಜ್ಯದ ಅತ್ಯಂತ ಸುದೀರ್ಘಕಾಲದ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಆಡಳಿತ ನಡೆಸಿ, ದೇವರಾಜು ಅರಸುರವರ ದಾಖಲೆಯನ್ನು ಮುರಿದು ಇನ್ನೂ ಅನೇಕ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯವ ಅರ್ಹತೆಯನ್ನು ಹೊಂದಿರುವ ರಾಜ್ಯದ ಏಕೈಕ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಕರ್ನಾಟಕ ರಾಜ್ಯದಲ್ಲಿ 16 ಬಜೆಟ್ಗಳನ್ನು ಮಂಡಿಸುವ ಮೂಲಕ ರಾಜ್ಯದ ಜನರಿಗೆ ಹೊಸ ಆಡಳಿತಕ್ಕೆ ಹೊಸ ದಿಸೆಯನ್ನು ತೋರಿಸಿ, ರಾಜ್ಯಭಾರವನ್ನು ನಡೆಸುವುದು ಅತ್ಯಂತ ಕಠಿಣ ಕೆಲಸ. ಅದರೂ, ಏಲ್ಲರನ್ನೂ ವಿಶ್ವಾಸವನ್ನು ತೆಗೆದುಕೊಂಡು 16 ಬಜೆಟ್ ಮಂಡನೆ ಮಾಡುವ ಮೂಲಕ ದೇಶದಲ್ಲಿಯೇ ಅತ್ಯಂತ ಹೆಚ್ಚು ಬಜೆಟ್ ಮಂಡನೆ ಮಾಡಿದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಒಳ್ಳೆಯ ಆಡಳಿತ ನಡೆಸುವಂತೆ ದೇವರು ಅವರಿಗೆ ಅಯುಷ್ಯ–ಆರೋಗ್ಯ ಕರುಣಿಸಲಿ ಎಂದು ಐವನ್ ಡಿʼಸೋಜಾ ಇಂದು ಶುಭ ಹಾರೈಸಿದ್ದಾರೆ.

ಪಂಚ ಗ್ಯಾರಂಟಿಗಳ ಮೂಲಕ ದೇಶದಲ್ಲಿಯೇ ಆರುವರೆ ಕೋಟಿಗೂ ಅಧಿಕ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿ, ಒಂದಲ್ಲ ಒಂದು ಯೋಜನೆಗಳನ್ನು ತಲುಪಿಸುವ ಮೂಲಕ ಭ್ರಷ್ಠಾಚಾರ ರಹಿತ ಆಡಳಿತ ಮಾಡುವ ಮೂಲಕ ಪ್ರಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಜನರ ವಿಶ್ವಾಸವನ್ನು ಗಳಿಸಿ, ಅತ್ಯಂತ ಪ್ರಮಾಣಿಕ ಆಡಳಿತಗಾರ ಎಂದು ಹೆಸರುವಾಸಿಯಾಗಿರುವ ಸಿದ್ಧರಾಮಯ್ಯನವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಕಾಂಗ್ರೆಸ್ ಪಕ್ಷದ ಹೆಮ್ಮೆಯ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷ ಅತ್ಯಂತ ಹರ್ಷದಿಂದ ಅವರ ಸೇವೆಯನ್ನು ಸ್ವಾಗತ ಮಾಡುತ್ತೇವೆ. ಎಂದು ವಿಧಾನಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅವರ ಮನೆಯಲ್ಲಿ ಭೇಟಿ ಮಾಡಿ ತಿಳಿಸಿದರು.

ಈ ಸಂರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ರವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments