Spread the love
ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಟಿಪ್ಪರ್ ಲಾರಿಯಲ್ಲಿ ಮಣ್ಣು ಸಾಗಾಟ – ಸಾರ್ವಜನಿಕರ ಆಕ್ರೋಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಾಣಿ ಹಾಗೂ ಬಿ.ಸಿ ರೋಡು ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ಮೂಲಕ ಮಣ್ಣು ಸಾಗಿಸುತ್ತಿದ್ದ ಬಗ್ಗೆ ವರದಿಯಾಗಿದೆ.
ಟಿಪ್ಪರ್ ಲಾರಿಯಲ್ಲಿ ಮಣ್ಣು ಸಾಗಿಸುವ ಸಂದರ್ಭ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಮಣ್ಣಿನ ಮೇಲೆ ಯಾವುದೇ ಟರ್ಪಲ್ ಹೊದಿಕೆ ಹಾಕಲಿಲ್ಲ.. ಟಿಪ್ಪರಿನ ಹಿಂಬದಿಯಿಂದ ಗಾಳಿಯ ಒತ್ತಡಕ್ಕೆ ಮಣ್ಣು ಮತ್ತು ಸಣ್ಣ ರೀತಿಯ ಮರಳು ಬೀಳುತ್ತಿದ್ದು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಅಂತೆಯೇ ಟಿಪ್ಪರ್ ಚಾಲಕರು ಅತಿ ವೇಗದ ಚಾಲನೆಯನ್ನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
Spread the love













