ಸುರತ್ಕಲ್ ಟೋಲ್ ತೆರವಿಗೆ ಒಕ್ಕೊರಲ ಜನಾಗ್ರಹ

Spread the love

ಸುರತ್ಕಲ್ ಟೋಲ್ ತೆರವಿಗೆ ಒಕ್ಕೊರಲ ಜನಾಗ್ರಹ

ಸುರತ್ಕಲ್:  ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸಬೇಕು, ಮಾರ್ಚ್ ಒಂದರಿಂದ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಇಂದು ಟೋಲ್ ಗೇಟ್ ಮುಂಭಾಗ ಹಮ್ಮಿಕೊಂಡಿದ್ದ “ಜನಾಗ್ರಹ ಸಭೆ” ಗೆ ಸ್ಥಳೀಯ ನಾಗರಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಜನಾಗ್ರಹ ಸಭೆಯಲ್ಲಿ ಮೂವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. ತಾತ್ಕಾಲಿಕ‌ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅನ್ನು ಹೆದ್ದಾರಿ ಪ್ರಾಧಿಕಾರ ಈಗಾಗಲೇ ತೆಗೆದು ಕೊಂಡಿರುವ ತೀರ್ಮಾನದಂತೆ ವಿಳಂಬವಿಲ್ಲದೆ ಅಲ್ಲಿಂದ ತೆರವುಗೊಳಿಸಬೇಕು, ತೆರವುಗೊಳ್ಳುವವರಗೆ ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸಬಾರದು, ಜನಾಗ್ರಹ ಸಭೆಯ ಒತ್ತಾಯದ ಹೊರತಾಗಿಯೂ ಮಾರ್ಚ್ ಒಂದರಿಂದ (ನಾಳೆಯಿಂದ) ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಗೊಂಡರೆ ಸಾಮೂಹಿಕವಾಗಿ ಟೋಲ್ ಪಾವತಿಸದೆ ಪ್ರತಿರೋಧ ಒಡ್ಡುವುದು, ಯಾವುದೆ ಬೆಲೆ ತೆತ್ತಾದರು ಸ್ಥಳೀಯರಿಂದ ಟೋಲ್ ಸಂಗ್ರಹಿಸದಂತೆ ಪ್ರತಿಭಟಿಸುವುದಾಗಿ ಸಾಮೂಹಿಕವಾಗಿ ಸಭೆಯು ತೀರ್ಮಾನಿಸಿತು.

ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಯ ಸಂಚಾಲಕ ಮುನೀರ್ ಕಾಟಿಪಳ್ಳ, ತೆರವುಗೊಳಿಸುವ ತೀರ್ಮಾನ ಕೈಗೊಂಡು ವರ್ಷದ ನಂತರವೂ ಅಕ್ರಮ ಟೋಲ್ ಗೇಟ್ ಸುರತ್ಕಲ್ ನಲ್ಲಿ ಕಾರ್ಯಾಚರಿಸಲು ಸಂಸದ ನಳಿನ್ ಕುಮಾರ್ ಕಟೀಲು ಅವರ ವೈಫಲ್ಯವೇ ನೇರಕಾರಣ. “ಸ್ಥಳೀಯರಿಗೆ ಟೋಲ್ ವಿಧಿಸಿದರೆ ಟೋಲ್ ಗೇಟ್ ಒಡೆದು ಹಾಕುವೆ” ಎಂದು ಶಾಸಕ ಭರತ್ ಶೆಟ್ಟಿ ಹೇಳಿಕೆ ಒಪ್ಪತ್ತಕ್ಕದ್ದಲ್ಲ. ಶಾಸಕ, ಸಂಸದರಾದವರಿಗೆ ಕಾನೂನು, ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಾಗಬೇಕು, ಜನಪ್ರತಿನಿಧಿಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರೆ, ಸ್ಥಳೀಯ ವಾಹನ ಸವಾರರು ಟೋಲ್ ವಿನಾಯತಿಗಾಗಿ ಬೀದಿಗಿಳಿಯುವ ಸ್ಥಿತಿ ಬರುತ್ತಿರಲಿಲ್ಲ, ಸುರತ್ಕಲ್ ನಲ್ಲಿ ಟೋಲ್ ಗೇಟ್ ಅಸ್ಥಿತ್ವದಲ್ಲೇ ಇರುತ್ತಿರಲಿಲ್ಲ. ಈಗಲಾದರೂ ಶಾಸಕರು, ಸಂಸದರ ಜೊತೆಗೂಡಿ ಟೋಲ್ ಗೇಟ್ ತೆರವುಗೊಳಿಸುವ ಕುರಿತಾದ ತೀರ್ಮಾನ ಜಾರಿಗೊಳಿಸಲು ಪ್ರಯತ್ನಿಸಲಿ ಎಂದರು.

ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರ್, ಮಾಜಿ ಮೇಯರ್ ಹಿಲ್ಡಾ ಆಳ್ವ,ಮೂಲ್ಕಿ ಅಭಿವೃದ್ದಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್, ಸಾಮಾಜಿಕ ಹೋರಾಟಗಾರರು ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಕಾರ್ಪೊರೇಟರುಗಳಾದ ಪುರುಷೋತ್ತಮ್ ಚಿತ್ರಾಪುರ, ದಯಾನಂದ ಶೆಟ್ಟಿ, ರೇವತಿ ಪುತ್ರನ್, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಪುತ್ತುಮೋನು,ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ ಜೋಕಟ್ಟೆ, ಮಯ್ಯದ್ದಿ ಪಕ್ಷಿಕೆರೆ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಮುಖರಾದ ವೈ ರಾಘವೇಂದ್ರ ರಾವ್, ಮೂಸಬ್ಬ, ರಹೀಮ್ ಪಕ್ಷಿಕೆರೆ, ರಾಜೇಶ್ ಶೆಟ್ಟಿ ಪಡ್ರೆ, ರಶೀದ್ ಮುಕ್ಕ, ಡಿ ವೈ ಎಫ್ ಐ ಮುಖಂಡರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಅಜ್ಮಲ್ ಅಹಮದ್, ಆಶಾ ಬೋಳೂರ್, ಐ ಮೊಹಮ್ಮದ್, ಬಿ. ಕೆ ಮಕ್ಸೂದ್, ಮುಸ್ತಫಾ ಬೈಕಂಪಾಡಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ,ಸಿಪಿಎಂ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ವಾಸುದೇವ ಉಚ್ಚಿಲ್, ಕೆಪಿಸಿಸಿ ಕಾರ್ಯದರ್ಶಿ ವಸಂತ ಬೆರ್ನಾಡ್,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಸುರತ್ಕಲ್ ನಾಗರಿಕ ಸಮಿತಿಯ ಸುಭಾಸಚಂದ್ರ ಶೆಟ್ಟಿ, ರಾಘವೇಂದ್ರ ಟಿ. ಎನ್, ಮಹಾಬಲ ರೈ, ವಿಷ್ಣುಮೂರ್ತಿ,ಪುಷ್ಪರಾಜ್ ಶೆಟ್ಟಿ ಕುಡುಂಬೂರ್, ಮೂಲ್ಕಿ ಅಭಿವೃಧ್ದಿ ನಾಗರಿಕ ಸಮಿತಿಯ ಮಧು ಆಚಾರಿ, ವಿನೋದ್ ಸಾಲ್ಯಾನ್, ಸದಾಶಿವ ಹೊಸದುರ್ಗ, ಜೆಡಿಎಸ್ ಮುಖಂಡರಾದ ಇಕ್ಬಾಲ್ ಅಹ್ಮದ್ ಮೂಲ್ಕಿ, ರಿಯಾಜ್ ಕಾರ್ನಾಡ್, ನೂರುಲ್ಲಾ ಮುಲ್ಕಿ, ಅಝೀಜ್ ಸುರತ್ಕಲ್, ಜೋಕಟ್ಟೆ ನಾಗರಿಕ ಸಮಿತಿಯ ಕವಿತಾ, ಸಿಲ್ವಿಯಾ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಇಂಟಕ್ ಜಿಲ್ಲಾ ಮುಖಂಡರಾದ ಮನೋಹರ್ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ದ. ಕ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಯೂನಿಯನ್ ಅಧ್ಯಕ್ಷರಾದ ದಿನೇಶ್ ಕುಂಪಲ,ಕಾರ್ಯಾಧ್ಯಕ್ಷರಾದ ಪ್ರಮೋದ್ ಉಳ್ಳಾಲ್, ಆನ್ಲೈನ್ ಟ್ಯಾಕ್ಸಿ ಯೂನಿಯನ್ ಮುಖಂಡರಾದ ಸತ್ಯೇಂದ್ರ ಶೆಟ್ಟಿ, ಮುನಾವರ್ ಕುತ್ತಾರ್, ಅಲ್ತಾಫ್ ಉಳ್ಳಾಲ,ಕುಳಾಯಿ ನಾಗರೀಕ ಸಮಿತಿಯ ಭರತ್ ಶೆಟ್ಟಿ, ಗಂಗಾಧರ್ ಬಂಜನ್,ರಫೀಕ್ ಕುಳಾಯಿ, ಕವಿ ಹುಸೈನ್ ಕಾಟಿಪಳ್ಳ, ಮಹಿಳಾ ಕಾಂಗ್ರೆಸ್ ಮುಖಂಡರಾದ ಶಕುಂತಲಾ ಕಾಮತ್, ಸಿಂಥಿಯಾ ಡಿಸೋಜಾ, ಸಕೀನಾ ಕೃಷ್ಣಾಪುರ, ಫಿಲೋಮಿನಾ ಹೊಸಬೆಟ್ಟು, ಮಮತಾ ಶೆಟ್ಟಿ, ಬೈಕಂಪಾಡಿ ನಾಗರೀಕ ಸಮಿತಿಯ ಬಿ ಮಯ್ಯದ್ದಿ, ಶರಫುದ್ದೀನ್, ಇಲ್ಯಾಸ್, ಸುರತ್ಕಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಎಂ ಶರೀಫ್ ಚೇರಿಯೋನು, ಮುಸ್ಲಿಂ ಸೇವಾ ಸಮಿತಿಯ ಹಮೀದ್ ಕಟ್ಲ, ಮುಕ್ಕ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್,ಕಾರ್ಯದರ್ಶಿ ಉಮ್ಮರ್ ಫಾರೂಕ್, ಖಿಲಿರಿಯ ಯಂಗ್ ಮೆನ್ಸ್ ಕಮಿಟಿಯ ಇಂತಿಯಾಜ್ ಇಡ್ಯಾ.ಉಮೇಶ್ ಪೂಜಾರಿ ಪಡ್ರೆ, ಸಲೀಂ ಕಾಟಿಪಳ್ಳ, ಸೈಫುಲ್ಲಾ ಕಾಟಿಪಳ್ಳ, ಅಶ್ರಫ್ ಸಫಾ ಕೃಷ್ಣಾಪುರ, ಇಬ್ರಾಹಿಂ ಕೃಷ್ಣಾಪುರ, ಕಿನ್ನಿಗೋಳಿ ಲಾರಿ ಮಾಲೀಕರ ಸಂಘದ ಅಬೂಬಕ್ಕರ್ ಗುತ್ತಕಾಡು,ರಘುರಾಮ್ ಪುನರೂರು, ದೀಪಕ್ ಕಾಮತ್ ಇನ್ನಾ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ಸಹ ಸಂಚಾಲಕ ಬಿಕೆ ಇಮ್ತಿಯಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love