ಸುರತ್ಕಲ್: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

Spread the love

ಸುರತ್ಕಲ್: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಸುರತ್ಕಲ್: ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಹೃದಯಾಘಾತಕೊಳ್ಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಕೃಷ್ಣಾಪುರ ಹಿಲ್ ಸೈಡ್ ಬಳಿ ಸೋಮವಾರ ಮಧ್ಯಾಹ್ನ ವರದಿಯಾಗಿದೆ.

ಮೃತ ಯುವಕನನ್ನು ಹಿಲ್ ಸೈಡ್ ನಿವಾಸಿ ಅಸ್ಗರ್ ಅಲಿ ಎಂಬವರ ಪುತ್ರ ಅಫ್ತಾಬ್ (18) ಎಂದು ತಿಳಿದು ಬಂದಿದೆ. ಈತ ಸುರತ್ಕಲ್ ಸೆಕ್ರೆಡ್ ಹಾರ್ಟ್ ನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ.

ಮಧ್ಯಾಹ್ನ12 ಗಂಟೆಯ ಸುಮಾರಿಗೆ ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತ ಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಸ್ಗರ್ ಅಲಿ ಅವರ ನಾಲ್ಕು ಮಂದಿ ಮಕ್ಕಳ‌ ಪೈಕಿ ಅಫ್ತಾಬ್‌ ಏಕೈಕ ಗಂಡು ಮಗನಾಗಿದ್ದು, ಇವರ ಮೂವರು ಪುತ್ರಿಯರಿಗೆ ಮದುವೆಯಾಗಿದೆ. ಅವರ ಪತ್ನಿ ಕೊರೋನ ಸಂದರ್ಭ ಮೃತಪಟ್ಟಿದ್ದು, ಮನೆಯಲ್ಲಿ ತಂದೆ‌ ಮತ್ತು ಮಗ ಇಬ್ಬರೇ ವಾಸವಾಗಿದ್ದರು.

ಆಟೊ ರಿಕ್ಷಾ ಚಾಲಕರಾಗಿದ್ದ ಅಲಿ ಅವರು ಮಧ್ಯಾಹ್ನದವರೆಗೂ ಮನೆಯಲ್ಲಿ ಮಗನೊಂದಿಗೆ ಇದ್ದರು. 1ಗಂಟೆಯ ವೇಳೆ ಅವರು ಬಾಡಿಗೆಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.


Spread the love
Subscribe
Notify of

0 Comments
Inline Feedbacks
View all comments