ಸೆ 10 : ಉಡುಪಿ ಜಿಲ್ಲೆಯಲ್ಲಿ 227 ಮಂದಿಗೆ ಕೊರೋನಾ ಪಾಸಿಟಿವ್ ದೃಢ, 4 ಸಾವು

Spread the love

ಸೆ 10 : ಉಡುಪಿ ಜಿಲ್ಲೆಯಲ್ಲಿ 227 ಮಂದಿಗೆ ಕೊರೋನಾ ಪಾಸಿಟಿವ್ ದೃಢ, 4 ಸಾವು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 227 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 13572 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 119, ಕುಂದಾಪುರದ 42, ಕಾರ್ಕಳದ 56 ಹಾಗೂ ಇತರೆ ಜಿಲ್ಲೆಗಳ 10 ರೋಗಿಗಳು ಇದ್ದಾರೆ. 121 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 106 ಮಂದಿಗೆ ಲಕ್ಷಣಗಳು ಇಲ್ಲ.

ಪ್ರಾಥಮಿಕ ಸಂಪರ್ಕದ 124, ಐಎಲ್ಐ ಲಕ್ಷಣಗಳಿರುವ 58, ‘ಸಾರಿ’ ಲಕ್ಷಣಗಳಿರುವ 9 ಹಾಗೂ ಹೊರ ಜಿಲ್ಲೆ, ಹೊರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವ 0 ಮಂದಿಗೆ ಸೋಂಕು ತಗುಲಿದ್ದು, 36 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 560ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗುರುವಾರ 384 ವರದಿಗಳು ನೆಗೆಟಿವ್ ಬಂದಿದ್ದು, 227 ಪಾಸಿಟಿವ್ ಬಂದಿವೆ. 317 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಗುರುವಾರ 210 ಮಂದಿ ಗುಣಮುಖರಾಗಿದ್ದು ಇದುವರೆಗೂ 11552 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1897 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಗುರುವಾರ 4 ಮಂದಿ ಕೊರೊನಾದಿಂದ ಸಾವನಪ್ಪಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 126 ಮಂದಿ ಸಾವನಪ್ಪಿದ್ದಾರೆ.


Spread the love