ಸೈಬರ್ ವಂಚನೆಗೆ 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆ, 250 ಕ್ಕೂ ಹೆಚ್ಚು ಸಿಮ್ ಗಳನ್ನು ಬಳಸಿದ್ದ ಆರೋಪಿಗಳ ಬಂಧನ

Spread the love

ಸೈಬರ್ ವಂಚನೆಗೆ 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆ, 250 ಕ್ಕೂ ಹೆಚ್ಚು ಸಿಮ್ ಗಳನ್ನು ಬಳಸಿದ್ದ ಆರೋಪಿಗಳ ಬಂಧನ

ಮಂಗಳೂರು: ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 45/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ ಮತ್ತು ಕಲಂ.420 ಐಪಿಸಿ ಪ್ರಕರಣದಲ್ಲಿ ಯಾರೋ ಅಪಚಿರಿತ ವ್ಯಕ್ತಿ ದೂರುದಾರರಿಗೆ ಕಸ್ಟಮ್ಸ್ ಹೆಸರಿನಲ್ಲಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು 7,27,000/- ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿಯಾಗಿ ದೂರು ನೀಡಿದಂತೆ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೊಳ್ಳಲಾಗಿರುತ್ತದೆ.

ಬಂಧಿತರನ್ನು ತ್ರಿಪುರಾದ ದಾಮೆನ್ ಜೊಯ್ ರೆನಾಗ್ (27) ಮತ್ತು ಮಣಿಪುರದ ಹಮಗಿತ್ ರೆಯಲ್ ಕೊಮ್ (33) ಎಂದು ಗುರುತಿಸಲಾಗಿದೆ

ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ವಿವರ ಪರಿಶೀಲಿಸಿ ಬ್ಯಾಂಕ್ ಖಾತೆದಾರನಾದ Damenjoy Reang ಎಂಬಾತನನ್ನು ದಿನಾಂಕ: 13-11-2025 ರಂದು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,  ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿರುತ್ತದೆ.

ಪ್ರಕರಣದಲ್ಲಿ ತನಿಖೆ ಮುಂದುವರೆಸಿ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ಸೈಬರ್ ವಂಚಕರಿಗೆ ನೀಡಿದ ಸುಳಿವಿನ ಆಧಾರದಲ್ಲಿ Hmngte Reail kom @ Mangte amosh ಎಂಬಾತನನ್ನು ದಿನಾಂಕ: 15-11-2025 ರಂದು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ದಿನಾಂಕ:16-11-2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,   ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿರುತ್ತದೆ.

ತನಿಖೆಯ ವೇಳೆ ಆರೋಪಿತನಾದ Hmngte Reail kom @ Mangte amosh ಎಂಬಾತನು 300 ಕ್ಕೂ ಹೆಚ್ಚೂ ಬ್ಯಾಂಕ್ ಖಾತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಸೈಬರ್ ವಂಚನೆಗ ಬಳಕೆ ಮಾಡಿರುವುದು ಕಂಡುಬಂದಿರುತ್ತದೆ. ಸದ್ರಿ ಆರೋಪಿತನಿಂದ 08-ಮೊಬೈಲ್ ಫೋನ್ ಗಳು, 20- ವಿವಿಧ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಗಳು,18- ವಿವಿಧ ಬ್ಯಾಂಕ್ ಗಳ ಪಾಸ್ ಬುಕ್ ಗಳು,11- ವಿವಿಧ ಬ್ಯಾಂಕ್ ಗಳ ಚೆಕ್ ಬುಕ್ ಹಾಗೂ 7- ಸಿಮ್ ಕಾರ್ಡ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

ಸದ್ರಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿರವರು ಭಾಗವಹಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments