ಸ್ಟೆಂಟ್ ತೊಡಕುಗಳ ನಂತರ ಬಿದಿದ ಅನ್ಯೂರಿಸಮ್ ಗಾಗಿ ಕರಾವಳಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ತೆರೆದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ಎಜೆ ಆಸತ್ರೆ
ಮಂಗಳೂರಿನ ಎಜೆ ಆಸತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಎಂಡೋವಾಸ್ಕುಲರ್ ಅನ್ನೂರಿಸಮ್ ರಿಪೇರಿ (ಇವಿಎಆರ್) ಎಂಬ ಹಿಂದಿನ ಸ್ಟೆಂಟ್ಸ್ ವಿಧಾನದಿಂದ ಉಂಟಾದ ತೊಡಕುಗಳ ನಂತರ ಬಿದಿದ್ದ ಅತ್ಯಂತ ಅಪಾಯಕಾರಿ ಕಿಬೊಟ್ಟೆಯ ಮಹಾಪಧಮನಿಯ ಅನ್ನೂರಿಸಮ್ ನ್ನು ಸರಿಪಡಿಸಲು ಕರಾವಳಿ ಕರ್ನಾಟಕದಲ್ಲಿ ಮೊದಲ ತೆರೆದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಮತ್ತು ಅಧಿಕ ರಕ್ತದೊತ್ತಡದಿಂದ ಪೀಡಿತ 57 ವರ್ಷದ ಪುರುಷ ರೋಗಿಗೆ ನಿಯಮಿತವಾಗಿ ಡಯಾಲಿಸಿಸ್ ಮಾಡಲಾಗುತಿತ್ತು ಮತ್ತು ಮೂತ್ರಪಿಂಡ ಕಸಿಗೆ ತಯಾರಿ ನಡೆಯುತಿತ್ತು. ಪೂರ್ವ www ತಪಾಸಣೆಯ ಸಂದರ್ಭದಲ್ಲಿ ಸಿಟಿ ಅಂಜಿಯೋಗ್ರಾಫಿಯ ಮೂಲಕ, ಹೃದಯದಿಂದ ಕೆಳಭಾಗಕ್ಕೆ ರಕ್ತ ಸಾಗಿಸುವ ಪ್ರಮುಖ ಶಿರೆಯಾದ ಕಿಬ್ಬೊಟ್ಟೆಯ ಮಹಾಪಧಮನಿಯಲ್ಲಿ ದೊಡ್ಡ ಉಬ್ಬು (ಅನ್ಯೂರಿಸಮ್) ಪತ್ತೆಯಾಯಿತು. ತಕ್ಷಣದ ಅಗತ್ಯತೆ ಇರುವುದರಿಂದ ಕನಿಷ್ಠ ಆಕ್ರಮಣಕಾರಿ ವಿಧಾನವಾದ ಎಂಡೋವಾಸ್ಕುಲರ್ ಅನ್ನೂರಿಸಮ್ ರಿಪೇರಿ (ಇವಿಎಆರ್) ಪ್ರಕ್ರಿಯೆಯ ಮೂಲಕ ರೋಗಿಗೆ ಸೆಂಟ್ ಅಳವಡಿಸಲಾಯಿತು.
ಆದರೆ ಎರಡು ತಿಂಗಳ ಬಳಿಕ ಆ ರಕ್ತನಾಳದಲ್ಲಿ ಸೋರಿಕೆ ಆರಂಭವಾಗಿ ಕೊನೆಗೆ ಛಿದ್ರವಾಯಿತು. ತಕ್ಷಣವೇ ಎಜೆ ಆಸತ್ರೆಯ ತಜ್ಞ ವೈದ್ಯರ ತಂಡ ಈ ಗಂಭೀರ ಪರಿಸ್ಥಿತಿಗೆ ಪ್ರತಿಕ್ರಿಯಿಸಿ, ಸೋರಿಕೆಯಾಗುತ್ತಿದ್ದ ಸ್ಟೆಂಟ್ ಅನ್ನು ತೆಗೆದುಹಾಕಿ ಹಾನಿಗೊಂಡ ಧಮನಿಯನ್ನು ಸರಿಪಡಿಸಲು ಜಟಿಲವಾದ ತೆರೆದ ಶಸ್ತ್ರಚಿಕಿತ್ಸೆ ನಡೆಸಿತು.
ಈ ಗಂಭೀರ ಜೀವರಕ್ಷಣಾತ್ಮಕ ಶಸ್ತ್ರಚಿಕಿತ್ಸೆಗೆ ಕಾರ್ಡಿಯೋಫೊರಾಸಿಕ್, ನಾಳೀಯ ಮತ್ತು ಎಂಡೋವಾಸ್ಕುಲರ್ ಸರ್ಜನ್ ಡಾ. ಸಂಭ್ರಮ್ ಶೆಟ್ಟಿ ನೇತೃತ್ವ ವಹಿಸಿದರು. ಡಾ. ಜಯಶಂಕರ್ ಮಾರ್ಲಾ (ಕಾರ್ಡಿಯೋಫೊರಾಸಿಕ್ ಸರ್ಜನ್), ಡಾ. ಶಿವಶಂಕರ್ ಭಟ್ಸ್ (ಸಾಮಾನ್ಯ ಹಾಗೂ ಲ್ಯಾಪರೊಸ್ಕೋಪಿಕ್ ಸರ್ಜನ್), ಡಾ. ಗುರುರಾಜ್ ತಂತ್ರಿ ಮತ್ತು ಡಾ. ರಾಕೇಶ್ (ಹೃದಯ ಅರಿವಳಿಕೆ ತಜ್ಞರು) ಮತ್ತು ಡಾ. ಸುದೇಶ್ ರಾವ್ (ಎಂಐಸಿಯು ಇಂಟೆನ್ಸಿವಿಸ್ಟ್) ಸೇರಿದಂತೆ ಹೆಚ್ಚು ಅನುಭವಿ ಬಹುಶಿಸ್ತೀಯ ತಂಡದ ಸಹಕಾರದೊಂದಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ನಿಖರವಾದ ಆರೈಕೆ ಒದಗಿಸಲಾಯಿತಲ್ಲದೆ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ಪರಿಣಿತ ವೈದ್ಯರ ನೆರವಿನಿಂದ ಅವರು ಉತ್ತಮ ಚೇತರಿಕೆಯನ್ನು ಸಾಧಿಸಿ ಸ್ಥಿರ ಸ್ಥಿತಿಯಲ್ಲಿ ಆಸತ್ರೆಯಿಂದ ಬಿಡುಗಡೆಗೊಳ್ಳಲಾಯಿತು. ಮಹಾಪಧಮನಿಯ ರಕ್ತನಾಳದ ಅನ್ನೂರಿಸಮ್ ಗೆ ‘ತೆರೆದ ಶಸ್ತ್ರಚಿಕಿತ್ಸೆ’ (ಓಪನ್ ಸರ್ಜರಿ) ಅತ್ಯುತ್ತಮ ಹಾಗೂ ನಿರ್ಣಾಯಕ ಚಿಕಿತ್ಸೆ ವಿಧಾನವಾಗಿದ್ದರೂ, ಇದು ಅತ್ಯಂತ ಜಟಿಲವಾಗಿದ್ದು ಯಶಸ್ವಿಯಾಗಿ ನೆರವೇರಿಸಲು ವಿಶಿಷ್ಟ ತಾಂತ್ರಿಕ ಸಾಮರ್ಥ್ಯ ಮತ್ತು ಶಸ್ತ್ರಚಿಕಿತ್ಸಾ ಪರಿಣತಿಯ ಅಗತ್ಯವಿದೆ. ಇದಕ್ಕೆ ಸಂಪೂರ್ಣವಾಗಿ ಸುಸಜ್ಜಿತ ಆಸತ್ರೆಯ ಮೂಲಸೌಕರ್ಯ ಕೂಡ ಅವಶ್ಯಕವಾಗಿರುತ್ತದೆ.
ಈ ಸಾಧನೆಯ ಕುರಿತು ಮಾತನಾಡಿದ ಎಜೆ ಆಸತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲಾ, “ಎಜೆ ಆಸತ್ರೆಯಲ್ಲಿ ನಾವು ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ನಿರಂತರವಾಗಿ ಅನ್ವಯಿಸುತ್ತಿದ್ದೇವೆ. ಈ ಯಶಸ್ವಿ ಚಿಕಿತ್ಸೆಯು ನಮ್ಮ ವೈದ್ಯರ ಪರಿಣತಿ, ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಜೀವ ಉಳಿಸುವ ನಿಷ್ಠೆಯನ್ನು ಪ್ರದರ್ಶಿಸುತ್ತದೆ. ಮಂಗಳೂರು ಹಾಗೂ ಕರಾವಳಿ ಭಾಗದ ಜನರಿಗೆ ಈಗ ಜಾಗತಿಕ ಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿದೆ. ಭವಿಷ್ಯದಲ್ಲಿಯೂ ಎಲ್ಲಾ ವೈದ್ಯಕೀಯ ಕ್ಷೇತ್ರಗಳಲ್ಲಿ ಶ್ರೇಷ್ಠತೆಗಾಗಿ ನಾವು ಶ್ರಮಿಸುವೆವು,” ಎಂದು ಹೇಳಿದರು.
ಎಜೆ ಆಸತ್ರೆ ಈ ಪ್ರದೇಶದಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ, ಅತ್ಯುನ್ನತ ಗುಣಮಟ್ಟದ ಆರೈಕೆ ಮತ್ತು ಶ್ರೇಷ್ಠತೆಯೊಂದಿಗೆ ವಿಶಿಷ್ಟ ಜೀವ ಉಳಿಸುವ ಚಿಕಿತ್ಸೆಯನ್ನು ಒದಗಿಸುತ್ತಿದೆ.