ಹತ್ಯೆಗಳನ್ನು ರಾಜಕೀಯಗೊಳಿಸುವ ಬಿಜೆಪಿ ಬಣ್ಣ ಬಯಲು.ಸುಹೈಲ್ ಕಂದಕ್

Spread the love

ಹತ್ಯೆಗಳನ್ನು ರಾಜಕೀಯಗೊಳಿಸುವ ಬಿಜೆಪಿ ಬಣ್ಣ ಬಯಲು.ಸುಹೈಲ್ ಕಂದಕ್*

ಕೋಣಾಜೆ ಪಜೀರು ನಿವಾಸಿ ಕಾರ್ತಿಕ್ ರಾಜ್ ಹತ್ಯೆಯ ನೈಜ ಆರೋಪಿಗಳಾದ ಆತನ ಸಹೋದರಿ ಮತ್ತು ಪ್ರಿಯತಮ ನನ್ನು ಬಂಧಿಸಿದ ಪೋಲೀಸರ ಕಾರ್ಯಾಚರಣೆ ಶ್ಲಾಘನೀಯವಾಗಿದ್ದು ಇದು ಹತ್ಯೆಗಳನ್ನು ರಾಜಕೀಯ ಮಾಡುವ ಶಕ್ತಿಗಳ ಕರಾಳ ಮುಖವನ್ನು ಅನಾವರಣಗೊಳಿಸಿದೆ.ಕಾರ್ತಿಕ್ ರಾಜ್ ಪ್ರಕರಣದಲ್ಲಿ ಜಿಲ್ಲೆಗೆ ಬೆಂಕಿ ಕೊಡುತ್ತೇನೆ ಎಂದಿದ್ದ ಮಂಗಳೂರು ಲೋಕಸಭಾ ಸದಸ್ಯರು ಈಗ ಬೆಂಕಿಯನ್ನು ಎಲ್ಲಿಗೆ ಕೊಡುತ್ತಾರೆ ಎಂಬುವುದನ್ನು ಕರಾವಳಿಯ ಜನರಿಗೆ ವಿವರಿಸಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಯುವ ಕಾಂಗ್ರೇಸ್ಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಪ್ರಶ್ನಿಸಿದ್ದಾರೆ.

ಕಾರ್ತಿಕ ಕೊಲೆ ಪ್ರಕರಣವನ್ನು ಜಿಲ್ಲೆಯ ಕೋಮುಸಾಮರಸ್ಯ ಕದಡಲು ಮತ್ತು ರಾಜಕೀಯಗೊಳಿಸಿ ಸಚಿವ ಯುಟಿ ಖಾದರ್ ರವರ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸಿದ ಎಲ್ಲಾ ವಂಚಕರ ಬಣ್ಣ ಈ ಮೂಲಕ ಬಯಲಾಗಿದೆ ಎಂದ ಸುಹೈಲ್ ಕಂದಕ್ ಪೋಲೀಸರ ಪ್ರಾಮಾಣಿಕ ಮತ್ತು ದಕ್ಷ ಕಾರ್ಯಾಚರಣೆ ರಾಜ್ಯದ ಕಾಂಗ್ರೇಸ್ಸ್ ನೇತೃತ್ವದ ಸರಕಾರದ ನ್ಯಾಯ ಸಮಾನತೆಯನ್ನು ಪ್ರತಿಬಿಂಭಿಸುತ್ತದೆ ಎಂದರು.

ಈ ಮೊದಲು ಬಂಟ್ವಾಳ ಹರೀಶ್ ಎಂಬ ಅಮಾಯಕನ ಹತ್ಯೆಯಲ್ಲೂ ಬಿಜೆಪಿಗರು ಮತ್ತು ಸಂಘಪರಿವಾರದ ನಾಯಕರು ರಾಜಕೀಯ ಮಾಡಿದ್ದರು.ಅದೇ ರೀತಿ ಸವಣೂರಿನಲ್ಲಿ ತಮ್ಮದೇ ಕಾರ್ಯಕರ್ತರ ಮೂಲಕ ಹಿಂದೂ ಸಮಾಜೋತ್ಸವ ಬ್ಯಾನರನ್ನು ಹಾನಿಗೊಳಿಸಿ ಗಲಭೆಗೆ ಸಂಚು ರೂಪಿಸಿ ವಿಫಲವಾದರು. ಕರೋಪಾಡಿ ಜಲೀಲ್ ರವರ ಹತ್ಯೆಯನ್ನು ಪರಿವಾರದ ಯುವಕರಿಂದ ಮಾಡಿಸಿ ಕರಾವಳಿಯಲ್ಲಿ ಕೋಮು ವೈಷಮ್ಯ ಹೆಚ್ಚುವಂತೆ ಮಾಡಿದರು.ಸರ್ವ ಧರ್ಮೀಯರ ಸೌಹಾರ್ಧತೆ ಕದಡಲು ಮತ್ತು ಇವರ ರಾಜಕೀಯ ಅಸ್ತಿತ್ವವನ್ನು ಉಳಿಸಲು ಇವರು ಅಮಾಯಕ ಹಿಂದೂ ಯುವಕರ ಬದುಕನ್ನೂ ನಾಶ ಮಾಡಿದರು.ಇವರ ಅಜೆಂಡಾ ಮತ್ತು ಸಿದ್ದಾಂತಗಳು ಮಾನವ ದ್ವೇಷಿ ಎಂದು ಜಿಲ್ಲೆಯ ಪ್ರತೀಯೊಬ್ಬರಿಗೂ ವಿವರಿಸುವ ಕಾರ್ಯವನ್ನು ಕಾಂಗ್ರೇಸ್ಸ್ ಯುವಘಟಕ ಮಾಡಲಿದೆ ಎಂದು ಸುಹೈಲ್ ಕಂದಕ್ ಹೇಳಿದರು.


Spread the love