ಹಿಂದೂಗಳ ಮತಾಂತರ ಮಾಡುತ್ತಿರುವ ಮುಲ್ಕಿಯ ಡಿವೈನ್ ಕಾಲ್ ಸೆಂಟರ್ ನಿಷೇಧಿಸಿ – ಶರಣ್ ಪಂಪ್ ವೆಲ್

Spread the love

ಹಿಂದೂಗಳ ಮತಾಂತರ ಮಾಡುತ್ತಿರುವ ಮುಲ್ಕಿಯ ಡಿವೈನ್ ಕಾಲ್ ಸೆಂಟರ್ ನಿಷೇಧಿಸಿ – ಶರಣ್ ಪಂಪ್ ವೆಲ್

ಉಡುಪಿ: ಹಿಂದೂ ಧರ್ಮವನ್ನು ಅವಹೇಳನ ಮಾಡಿ ಅಮಾಯಕ ಹಿಂದೂಗಳನ್ನು ಮತಾಂತರಗೊಳಿಸುತ್ತಿರುವ ದಕ ಜಿಲ್ಲೆಯ ಮೂಲ್ಕಿಯ ಕಾರ್ನಾಡಿನ ಡಿವೈನ್ ಕಾಲ್ ಸೆಂಟರ್ ಪ್ರಾರ್ಥನಾ ಮಂದಿರವನ್ನು ಮುಚ್ಚುವಂತೆ ರಾಜ್ಯ ಸರ್ಕಾರವನ್ನು ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.

ಅವರು ಮಂಗಳವಾರ ಉಡುಪಿಯ ಕಿದಿಯೂರು ಹೋಟೆಲಿನಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ದಕ ಜಿಲ್ಲೆ ಮುಲ್ಕಿಯ ಕಾರ್ನಾಡಿನ ಡಿವೈನ್ ಕಾಲ್ ಸೆಂಟರ್ ಎಂಬ ಸಂಸ್ಥೆಯು ಕಾರ್ಯಾಚರಿಸುತ್ತಿದ್ದು ಇಲ್ಲಿ ಹಿಂದು ಧರ್ಮದ ಅವಹೇಳನ ಮಾಡಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿರುವುದು ಬೆಳಕಿಗ ಬಂದಿದೆ. ಅದಕ್ಕೆ ಪ್ರಮುಖ ಸಾಕ್ಷಿ ಎಂಬಂತೆ ಉಡುಪಿ ಸಮೀಪದ ಉದ್ಯವಾರದ ಪ್ರದೀಪ್ ಎಂಬ ಯುವಕ ರಿಕ್ಷಾ ಚಾಲನೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದನು. ಆತನ ನೆರೆಮನೆಯ ಮಹಿಳೆ ಐರಿನ್ ಎಂಬವರು ರಿಕ್ಷಾವನ್ನು ಬಾಡಿಗೆಗೆ ಗೊತ್ತು ಮಾಡಿ ಡಿವೈನ್ ಕಾಲ್ ಸೆಂಟರಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಬಲಾತ್ಕಾರವಾಗಿ ಆತನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಒತ್ತಾಯಿಸಿದ್ದಾರೆ.

ಪ್ರದೀಪ್ ಅವರಿಗೆ ಮಾನಸಿಕ ಹಿಂಸೆ ಹಾಗೂ ಹೆದರಿಸಿ ಬಳಿಕ ಆತನಿಂದ ಹಿಂದೂ ಧರ್ಮ ವಿರೋಧಿ ಹೇಳಿಕೆಯ ವೀಡಿಯೋ ರೆಕಾರ್ಡಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದ್ದಾರೆ. ಈ ಘಟನೆಯ ಹಿಂದೆ ಪ್ರದೀಪ್ ಅವರ ನೆರೆಮನೆಯ ಮಹಿಳೆ ಐರಿನ್ ಹಾಗೂ ಮುಲ್ಕಿಯ ಕಾರ್ನಾಡಿನ ಡಿವೈನ್ ಕಾಲ್ ಸೆಂಟರ್ ಎಂಬ ಸಂಸ್ಥೆಯ ವಂ|ಆಬ್ರಾಹಾಂ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಆದ್ದರಿಂದ ಅವರ ವಿರುದ್ದ ಈಗಾಗಲೇ ಮೂಲ್ಕಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಕೂಡಲೇ ಮುಲ್ಕಿಯ ಕಾರ್ನಾಡಿನ ಡಿವೈನ್ ಕಾಲ್ ಸೆಂಟರ್ ಎಂಬ ಸಂಸ್ಥೆಯನ್ನು ಮುಚ್ಚುವುದರೊಂದಿಗೆ ಘಟನೆಗೆ ಕಾರಣರಾದ ಇಬ್ಬರನ್ನು ಕೂಡ ಬಂಧಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಸಂಸ್ಥೆಯ ವೆಬ್ ಸೈಟ್ ನ್ನು ಕೂಡ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಮತ್ತು ಕ್ರೈಸ್ತ ಬಾಂಧವರು ಅತ್ಯಂತ ಗೌರವ ಮತ್ತು ಪ್ರೀತಿ ಹಾಗೂ ಶಾಂತಿಯಿಂದ ಪರಸ್ಪರ ಅನೊನ್ಯತೆಯಿಂದ ಬದುಕುತ್ತಿದ್ದು ಕೆಲವೊಂದು ಸಂಘಟನೆಗಳು ಈ ಅನೊನ್ಯತೆಯನ್ನು ಹಾಳುಗೆಡಹುವ ಕೆಲಸದಲ್ಲಿ ತೊಡಗಿವೆ. ಕೆಲವೊಂದು ಸಂಘಟನೆಗಳು ಹಿಂದೂ ಧರ್ಮದ ವಿರುದ್ದ ಹೇಳಿಕೆ ನೀಡಿ ಮತಾಂತರಗೊಳಿಸುವ ಪ್ರಯತ್ನ ನಡೆಸುತ್ತಿದ್ದ ಇದರಿಂದ ಹಿಂದೂ ಮತ್ತು ಕ್ರೈಸ್ತ ಸಮಾಜದ ಭಾವೈಕ್ಯಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಇಂತಹ ಸಂಘಟನೆಗಳ ಕುರಿತು ಈಗಾಗಲೇ ಮಂಗಳೂರು ಜಿಲ್ಲಾಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್ ಅವರಿಗೆ ದೂರನ್ನು ನೀಡಿದ್ದು ಪ್ರಾರ್ಥನಾ ಮಂದಿರದ ಹೆಸರಿನಲ್ಲಿ ಹಿಂದೂಗಳ ಬಲಾತ್ಕಾರಾದ ಮತಾಂತ ಮಾಡುತ್ತಿರುವ ಸಂಸ್ಥೆಗಳ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿಲಾಗಿದೆ ಎಂದರು.

ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ ಆರ್, ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಪ್ರಮೋದ್, ಕಾರ್ಯದರ್ಶಿ ಸಂತೋಷ್ ಸುವರ್ಣ, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಸುದ್ದಿಗೊಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love