ಹಿಂದೆ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರನ್ನು ದೂಷಿಸುವುದು ಸಲ್ಲದು : ಪೇಜಾವರ ಶ್ರೀ

Spread the love

ಹಿಂದೆ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರನ್ನು ದೂಷಿಸುವುದು ಸಲ್ಲದು : ಪೇಜಾವರ ಶ್ರೀ

ಉಡುಪಿ: ಹಿಂದೂಗಳ ಅರಾಧ್ಯದೇವ ಶಿವನನ್ನು ಪೂಜಿಸುವ ಲಿಂಗಾಯಿತರು ಹಿಂದೂಗಳಲ್ಲ ಎಂದು ಹೇಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪೇಜಾವರ ಶ್ರೀ ಅಗ್ರಹಿಸಿದರು.

ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಶೈವ-ಲಿಂಗಾಯಿತರು ಪ್ರತ್ಯೇಕವೇ ಎಂಬುದನ್ನು ಸಮಾಜದ ಮಠಾಧೀಶರೇ ತೀರ್ಮಾನಿಸಬೇಕು. ಅದರೆ ಇಬ್ಬರೂ ಒಂದಾದರೆ ಸಮಾಜ ಬಲ ಹೆಚ್ಚಲಿದೆ. ಏಕ ದೇವತಾವಾದವನ್ನು ಅವರು ಒಪ್ಪಿದ್ದಾರೆ. ದ್ವೈತ, ಅದ್ವೈತದಲ್ಲೂ ತಾತ್ವಿಕ ಭೇದಗಳಿದ್ದರೂ ಎಲ್ಲರೂ ಹಿಂದೂ ಧರ್ಮದ ಭಾಗ ಎಂಬುದನ್ನು ಒಪ್ಪಲಾಗಿದೆ. ಸಹೋದರನಂತೆ ಮನೆಯಿಂದ ಹೊರಹೋಗುವುದು ಬೇಡ ಎಂದು ಹೇಳುವ ಹಕ್ಕು ತನಗಿದೆ ಎಂದು ಆವರು ತಿಳಿಸಿದರು.

ಪ್ರಸ್ತುತ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣರಿಂದ ಯಾವ ಆನ್ಯಾಯವೂ ನಡೆಯುವುದಿಲ್ಲ. ಮುಸಲ್ಮಾನರು ಮಾಡಿದ ಆನ್ಯಾಯಕ್ಕೆ ಈಗಿನ ಮುಸ್ಲೀಂರನ್ನು ದೂಷಿಸುವುದು ಸರಿಯಲ್ಲ. ಅದರಂತೆ ಹಿಂದೆ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರನ್ನು ದೂಷಿಸುವುದು ಸಲ್ಲದು ಎಂದು ಹೇಳಿದರು.

ಪಂಚಮ ಪರ್ಯಾಯದಲ್ಲಿ ಕೃಷ್ಣ ಮಠದಲ್ಲಿ 11.5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ನವೀಕರಣ, ತಲಾ 2 ಕೋಟಿ ರೂ. ವೆಚ್ಚದಲ್ಲಿ 2 ಅತಿಥಿಗೃಹಗಳ ನಿರ್ಮಾಣ, 3 ಕೋಟಿ ರೂ. ವೆಚ್ಚದಲ್ಲಿ ಮಧ್ವಾಂಗಣ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೃಷ್ಣ ಮಠದ ಆದಾಯದಲ್ಲಿ ಸುತ್ತುಪೌಳಿ ನವೀಕರಣ ಮಾಡಲಾಗಿದೆ. ಪರ್ಯಾಯ ಸಂಚಾರ ಕಾಲದಲ್ಲಿ ಭಕ್ತರು ನೀಡಿದ ಕಾಣಿಕೆಯಲ್ಲಿ ಉಳಿದ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದರು.

ಪಾಜಕದಲ್ಲಿ 40 ಎಕರೆ ಪ್ರದೇಶದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಅನಂದ ತೀರ್ಥ ವಿದ್ಯಾಲಯ ಕಾಮಗಾರಿ ನಡೆಯುತ್ತಿದ್ದು, ಹೈಸ್ಕೂಲ್ ವರೆಗಿನ ಕಟ್ಟಡ ಪೂರ್ಣಗೊಂಡಿದೆ. ಇಲ್ಲಿ ಧರ್ಮ ಸಂಸ್ಕøತಿಯ ನೆಲೆಯಲ್ಲಿ ಸನಿವಾಸ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.


Spread the love