ಹಿರಿಯಡ್ಕ ಅಕ್ರಮ ಮರಳುಗಾರಿಕೆಗೆ ದಾಳಿ ರೂ. 16 ಲಕ್ಷದ ಸೊತ್ತು ವಶ

Spread the love

ಹಿರಿಯಡ್ಕ ಅಕ್ರಮ ಮರಳುಗಾರಿಕೆಗೆ ದಾಳಿ ರೂ. 16 ಲಕ್ಷದ ಸೊತ್ತು ವಶ

ಉಡುಪಿ: ಹಿರಿಯಡ್ಕ ಬಳಿಯ ಕುಕ್ಕೆಹಳ್ಳಿ ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ಸೆಪ್ಟೆಂಬರ್ 26 ರಂದು   ಡಾ. ಹೆಚ್.ಎಸ್. ಮಹದೇಶ್ವರ (44), ತಂದೆ: ಸಿದ್ದಯ್ಯ.  ಆಯುಕ್ತರು  ಭೂ ವಿಜ್ಙಾನಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆ, ಉಡುಪಿ. ರಜತಾದ್ರಿ ಮಣಿಪಾಲ, ಉಡುಪಿ ತಾಲೂಕು ಇವರಿಗೆ ದೊರೆತ ಮಾಹಿತಿಯಂತೆ ವಿಶೇಷ ತಹಶೀಲ್ದಾರರು ಬ್ರಹ್ಮಾವರ ಕುಕ್ಕೆಹಳ್ಳಿಯ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು, ಬ್ರಹ್ಮಾವರ , ಗಣಿ ಭೂ ವಿಜ್ಙಾನ ಇಲಾಖೆಯ ಅಧಿಕಾರಿ ಹಾಗೂ  ಪೊಲೀಸ್ ಉಪನಿರೀಕ್ಷಕರವರೊಂದಿಗೆ ಉಡುಪಿ ತಾಲೂಕು ಕುಕ್ಕೆಹಳ್ಳಿ  ಗ್ರಾಮದ ಸರ್ವೆ ನಂ 133  ರ ಮಡಿಸಾಲು ಹೊಳೆಗೆ ಹೊಂದಿಕೊಂಡಿರುವ ಪಟ್ಟಾ ಜಾಗ ಸರ್ವೆ ನಂಬ್ರ 138/8,138/4,125/3 ರಲ್ಲಿ ರುವ ಜಾಗಕ್ಕೆ ದಾಳಿ ಮಾಡಿ ಸ್ಥಳದಲ್ಲಿ ಹಂದಾಡಿ ನಿವಾಸಿ ಪ್ರಜ್ವಲ್ ಶೆಟ್ಟಿ ಎಂಬವರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು ತಂಡ ಧಾಳಿ ನಡೆಸಿದೆ.

ದಾಳಿಯ ವೇಳೆ 5 ಕಬ್ಬಿಣದ ಪೈಪ್ ಗಳು, ಒಂದು ಕಬ್ಬಿಣದ ಜರಡಿ, ಯಾಂತ್ರೀಕೃತ ದೋಣಿ 2, SANY ಹೆಸರಿನ ಹಿಟಾಚಿ-1   ಸೇರಿದಂತೆ ಒಟ್ಟು ರೂಪಾಯಿ 16,06,000/-  ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love