ಹಿರಿಯ ಸಹಕಾರಿ ಧುರೀಣ ಉಪೇಂದ್ರ ಸಿ ಮೈಂದನ್ ಉದ್ಯಾವರ ನಿಧನ

Spread the love

ಹಿರಿಯ ಸಹಕಾರಿ ಧುರೀಣ ಉಪೇಂದ್ರ ಸಿ ಮೈಂದನ್ ಉದ್ಯಾವರ ನಿಧನ

ಉಡುಪಿ: ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ ಉಪೇಂದ್ರ ಸಿ ಮೈಂದನ್ ಉದ್ಯಾವರ ಅವರು ಭಾನುವಾರ ನಿಧನ ಹೊಂದಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಹಲವು ವರ್ಷಗಳ ಕಾಲ ಹನುಮಾನ್ ಟ್ರಾನ್ಸ್ ಪೋರ್ಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸಿದ್ದ ಅವರು ದಕ ಮತ್ತು ಉಡುಪಿ ಮೀನು ಮಾರಾಟ ಫೆಡರೇಶನ್ ಇದರ ನಿರ್ದೇಶಕರಾಗಿ, ಉದ್ಯಾವರ ಮೀನುಗಾರಿಕಾ ಸೊಸೈಟಿಯ ಅಧ್ಯಕ್ಷರಾಗಿ, ದತ್ತಾತ್ರೇಯ ಭಜನಾ ಮಂದಿರದ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದರು.

ಮೃತರು ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಸಹಿತ ಮೂವರು ಪುತ್ರರು ಹಾಗೂ ಒರ್ವ ಪುತ್ರಿ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments