ಹೆನಿಟಾ ಜೋಸ್ನಾ ಮಿನೇಜಸ್ ಅವರಿಗೆ ಪಿ.ಎಚ್.ಡಿ ಪದವಿ
ಉಡುಪಿ: ಹೃದಯ ರಕ್ತನಾಳದ ಕಾಯಿಲೆ ಇರುವ ಮಹಿಳೆಯರಿಗೆ ತಂತ್ರಜ್ಞಾನ-ಆಧಾರಿತ ಸಮಗ್ರ ಹೃದಯ ಪುನರ್ವಸತಿ ಚಿಕಿತ್ಸೆಯ ಕುರಿತು ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಸಂಶೋಧನಾ ಅಧ್ಯಯನ ನಡೆಸಿ ಮಂಡಿಸಿರುವ ಮಹಾಪ್ರಬಂಧಕ್ಕೆ, ಕಾಪು ತಾಲೂಕು, ಬೆಳ್ಳೆ ಗ್ರಾಮದ, ಪಾಂಬೂರಿನ ಹೆನಿಟಾ ಜೋಸ್ನಾ ಮಿನೇಜಸ್ ಅವರಿಗೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಲಭಿಸಿದೆ.
ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ನ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆಗಿರುವ ಡಾ| ಸೋನಿಯಾ ಆರ್. ಬಿ. ಡಿ’ಸೋಜ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆಗಿರುವ ಡಾ| ಪದ್ಮಕುಮಾರ್ ಆರ್ ಇವರಿಗೆ ಮಾರ್ಗದರ್ಶಕರಾಗಿದ್ದರು.
ಹೆನಿಟಾ ಅವರು ಪಾಂಬೂರು ಮಾನಸ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಹೆನ್ರಿ ಹಾಗೂ ಜೆಸಿಂತಾ ಮಿನೇಜಸ್ ಅವರ ಪುತ್ರಿಯಾಗಿರುತ್ತಾರೆ.













