ಹೈಕಮಾಂಡ್ ಅವಕಾಶ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ; ರಾಜಶೇಖರನಾಂದ ಸ್ವಾಮೀಜಿ

Spread the love

ಹೈಕಮಾಂಡ್ ಅವಕಾಶ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ; ರಾಜಶೇಖರನಾಂದ ಸ್ವಾಮೀಜಿ

ಮಂಗಳೂರು:  ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಉಹಾಪೋಹಗಳ ಬಗ್ಗೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಪ್ರತಿನಿಧಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಾಮೀಜಿ ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದು, ಹಲವಾರು ಹಿಂದು ಸಂಘಟನೆಗಳ ನಡುವೆ ತಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಸೂಚನೆಗಳು ಬರುತ್ತಿದೆ. ದೆಹಲಿ ಮಟ್ಟದಿಂದ ಕೂಡ ತಾನು ಸ್ಪರ್ಧೀಸಬೇಕೆಂಬ ಸೂಚನೆ ಬಂದಾಗ ತಾನು ಹೈಕಮಾಂಡ್ ಅವಕಾಶ ನೀಡಿದರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದ.

ತಾನು ಯಾವುದೇ ಒಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ದೀಸಲು ಸಿದ್ದನಾಗಿದ್ದು ಪಕ್ಷ ಅದನ್ನು ನಿರ್ಧರಿಸಬೇಕು. ನಮ್ಮಲ್ಲಿ ಹಲವಾರು ಹಿಂದು ಸಂಘಟನೆಗಳಿದ್ದು, ಹಿಂದು ಸಂಘಟನೆಗಳ ಸದಸ್ಯರು ಚುನಾವಣೇಯಲ್ಲಿ ಸ್ಪರ್ಧಿಸಲು ಒತ್ತಡ ಹಾಕುತ್ತಿದ್ದಾರೆ. ನಾವು ನಮ್ಮ ಹಿಂದು ಧರ್ಮವನ್ನು ಬಲಿಷ್ಠವಾಗಿಸುವುದರೊಂದಿಗೆ ಅದನ್ನು ರಕ್ಷಿಸುವ ಅಗತ್ಯವಿದೆ. ಹಿಂದು ಧರ್ಮ ಬಲಿಷ್ಠವಾದರೆ ಕರ್ನಾಟಕ ರಾಜ್ಯ ಅಭಿವೃದ್ಧಿಯಾಗಲಿದೆ. ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷದಿಂದ ಸೂಕ್ತವಾದ ರಸ್ತೆಗಳಿಲ್ಲ ಅಲ್ಲದೆ ಯಾವುದೇ ರೀತಿಯ ಅಭಿವೃದ್ಧಿಯನ್ನು ಕಂಡಿಲ್ಲ. ರಾಜ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು ಅದನ್ನು ಸುಧಾರಿಸುವ ಅಗತ್ಯತೆ ಇದೆ. ಒಂದು ವೇಳೆ ನನಗೆ ಅವಕಾಶ ನೀಡಿದರೆ ನಾನು ರಾಜ್ಯವನ್ನು ಅಭಿವೃದ್ಧೀಯತ್ತ ಕೊಂಡೊಯ್ಯುವೆ ಎಂದರು.

ನಾನು ಎಂದಿಗೂ ಕೂಡ ಜಾತ್ಯಾತೀತ ವ್ಯಕ್ತಿಯಲ್ಲ ಬದಲಾಗಿ ನಾನು ನಂಬುವುದು ಕೇವಲ ಹಿಂದು ಧರ್ಮವನ್ನು. ಪ್ರತಿಯೊಬ್ಬರನ್ನು ನಾನು ಕಾಣುವುದು ಹಿಂದು ಧರ್ಮದ ಆಧಾರದಲ್ಲಿ ಆಗಿದೆ. ಉದಾಹರಣೆಗೆ ಮುಸ್ಲಿಂರು ರಮ್ಜಾನ್ ಸಮಯದಲ್ಲಿ ಒಂದು ತಿಂಗಳ ಕಾಲ ಉಪವಾಸ ಕೈಗೊಳ್ಳುತ್ತಾರೆ ಆದರೆ ಹಲವಾರು ವರ್ಷಗಳಿಂದ ಹಿಂದುಗಳು ಉಪವಾಸವನ್ನು ಮಾಡುತ್ತಾರೆ. ಕ್ರೈಸ್ತರು ಹೊಸ ಬೆಳೆಯ ಹಬ್ಬವನ್ನು ಆಚರಿಸುತ್ತಾರೆ ಅದನ್ನು ಹಿಂದೂಗಳು ಆಚರಿಸಿಕೊಂಡು ಬಂದಿದ್ದಾರೆ. ನಾನು ಪ್ರತಿಯೊಬ್ಬರನ್ನು ಹಿಂದು ಧರ್ಮದ ಆಧಾರದ ಮೇಲೆಯೇ ಗೌರವಿಸುವುದರೊಂದಿಗೆ ಪ್ರತಿಯೊಬ್ಬರನ್ನು ಹಿಂದು ಧರ್ಮದ ಆಧಾರದಲ್ಲಿಯೇ ಒಟ್ಟಾಗಿ ಕೊಂಡೊಯ್ಯಲಿದ್ದೇನೆ.

ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿಯಿರಲಿಲ್ಲ ಆದರೆ ಅಮೃತ ಸಂಜೀವಿನಿ, ಹಿಂದೂ ಸಂರಕ್ಷಣ ಸಮಿತಿ ಹಾಗೂ ಇತರ ಹಿಂದೂ ಸಂಘಟನೆಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದರ ಕಾರಣಕ್ಕೆ ಈ ಕುರಿತು ಚಿಂತನೆ ನಡೆಸಿದ್ದೇನೆ. ನನ್ನ ಪ್ರಥಮ ಆದ್ಯತೆ ಹಿಂದೂ ಧರ್ಮವನ್ನು ರಕ್ಷಿಸುವ ಕೆಲಸ ಮೊದಲು. ನನಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲ ನಾನೊಬ್ಬಾ ಧಾರ್ಮಿಕ ವ್ಯಕ್ತಿ ನನಗೆ ಯಾವುದೇ ರೀತಿಯ ಸ್ವಹಿತಾಸಕ್ತಿ ಇಲ್ಲ. ಆದರೆ ಹೈಕಮಾಂಡ್ ಈ ಕುರಿತು ಸೂಕ್ತ ಅಭ್ಯರ್ಥಿಯ ಕುರಿತು ಚಿಂತಿಸಿ ಆಯ್ಕೆ ಮಾಡಬೇಕಾಗಿದೆ ಎಂದರು.


Spread the love