ಉದ್ಯಾವರ: ದೇಶದ ಮುಂದಿನ ಭವಿಷ್ಯ ಇಂದಿನ ಮಕ್ಕಳ ಕೈಯಲ್ಲಿದೆ-  ವಿನಯಕುಮಾರ್ ಸೊರಕೆ

Spread the love

ಉದ್ಯಾವರ: ಇಂದಿನ ಮಕ್ಕಳನ್ನು ನಾವು ಸಚ್ಛಾರಿತ್ರಾರಿತ್ರವಂತರನ್ನಾಗಿಸುವಲ್ಲಿ ಶಾಲೆಗಳ ಪಾತ್ರಗಳು ಹಿರಿದಾದದ್ದು. ಈ ನಿಟ್ಟಿನಲ್ಲಿ ಶಾಲೆಗಳು ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಹಾಗಾದಾಗ ಮಾತ್ರ ದೇಶದ ಮುಂದಿನ ಭವಿಷ್ಯ ಉಜ್ವಲವಾದೀತು. ನೂರೈವತ್ತು ವರ್ಷಗಳ ಈ ಶಾಲೆ ಇಂತಹ ಕೆಲಸ ಕಾರ್ಯಗಳನ್ನು ಮಾಡಿದುದರಿಂದಲೇ ಇಂಗ್ಲೀಷ್ ಮಾಧ್ಯಮದ ಎಲ್ಲಾ ಸವಾಲುಗಳನ್ನು ಮೀರಿ ಅಭಿವೃದ್ಧಿಯನ್ನು ಕಾಣುತ್ತಿದೆ. ಈ ಸಂದರ್ಭದಲ್ಲಿ ನಾವು ನೂರೈವತ್ತು ವರ್ಷಗಳ ಹಿಂದೆ ಈ ಶಾಲೆಯನ್ನು ಸ್ಥಾಪಿಸಿದ ಸ್ಧಾಪಕರ ದೂರದರ್ಶಿತನಕ್ಕೆ ನಾವು ಕೃತಜ್ಞತರಾಗಬೇಕಾಗಿದೆ. ಕೃತಜ್ಞದಙತೆ ಎಂಬುದು ನಮ್ಮ ಮೂಲ ಗುಣ ಎಂದು ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕೆಯವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ “ವರ್ಷದ ಹರ್ಷ ನೂರೈವತ್ತು” ಕಾರ್ಯಕ್ರಮದ ಧ್ವಜಾರೋಹಣ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ನುಡಿದರು. ಅವರು ಮುಂದುವರಿಯುತ್ತಾ ಈ ಶಾಲೆಯ ಅಭಿವೃದ್ಧಿಗೆ ಯಾವತ್ತೂ ನನ್ನ ಸಹಕಾರ ಇದೆ ಎಂದು ನುಡಿದರು.

hindu_school_udyavara 26-12-2015 21-41-51 hindu_school_udyavara 26-12-2015 21-50-43

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡುವ ಈ ಶಾಲೆ ಇಂಗ್ಲೀಷ್ ಮಾಧ್ಯಮದಿಂದ ಕಳೆಗುಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಮಾದರಿಯಾಗಿದೆ. ಈ ಶಾಲೆಯ ಈ ಅಭಿವೃದ್ಧಿಗೆ ಶಾಲಾ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಶ್ರಮ ಕಾರಣ ಎಂದು ಧ್ವಜಾರೋಹಣಗೈದ ಉದ್ಯಾವರ ಗ್ರಾಮ ಪಂಚಾಯತ್‍ನ ಅದ್ಯಕ್ಷರಾದ ಸುಗಂಧಿಶೇಖರ್ ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಂಗಳೂರು ವಿಶ್ವವಿದ್ಯಾನಿಲಯದ ಅಕಡಮಿಕ್ ಕೌನ್ಸಿಲಿನ ಸದಸ್ಯರಾದ ಅಮೃತ್ ಶೆಣೈಯವರು ಮಾತನಾಡುತ್ತಾ ಒಂದು ಊರಿನ ಅಭಿವದೃದ್ಧಿಯಲ್ಲಿ ಶಾಲೆಯ ಪಾತ್ರ ಮಹತ್ತರವಾಗಿದ್ದು ಈ ಶಾಲೆಯನ್ನು ನೋಡಿದಾಗ ಈ ಊರು ಕೂಡ ಅದೇ ರೀತಿ ಅಭಿವೃದ್ದಿ ಹೊಂದಿದೆ ಎಂದು ನಾವು ಮನಗಾಣಬಹುದು. ಶಾಲೆ ಒಂದು ಸೌಹಾರ್ದತೆಯ ಕೇಂದ್ರ ಇಲ್ಲಿ ಮಕ್ಕಳು ಜಾತಿ ಮತದ ಹಂಗಿಲ್ಲದೆ ಬದುಕುತ್ತಾರೆ. ಮಕ್ಕಳ ಈ ಮನೋಭಾವ ಶಾಲೆಯಿಂದ ಹೊರಗೂ ಮುಂದುವರಿದರೆ ಸ್ವಸ್ಥ ಸಮಾಜದ ನಿರ್ಮಾಣವಾದೀತು. ಈ ಶಾಲೆಯಿಂದ ಇದಾಗಲಿ ಎಂದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷರಾದ  ರಿಯಾಝ್ ಪಳ್ಳಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ಮುರಳೀಕೃಷ್ಣ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಿರೀಶ್ ಕುಮಾರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸುನೀತ ನಟರಾಜ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾದ್ಯಾಯರಾದ ಗಣಪತಿ ಕಾರಂತ್ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕರಾದ ಕೃಷ್ಣಕುಮಾರ್ ರಾವ್ ಕೊನೆಯಲ್ಲಿ ವಂದಿಸಿದರು. ಹಿರಿಯ ಶಿಕ್ಷಕಿಯರಾದ ಹೇಮಲತಾ ಮತ್ತು ರತ್ನಾವತಿ ಯವರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ರಾಜೀವಿ, ಅನುರಾಧ, ವಿಕ್ರಮ್ ಆಚಾರ್ಯ, ಮಾಕ್ಸಿಂ ಡಿ ಸಿಲ್ವ, ಕುಮಾರಿ ಸುಪ್ರಿಯಾ, ಕುಮಾರಿ ವೃಂದಾ ಕೆ ರಾವ್ ಬಹುಮಾನದ ಪಟ್ಟಿಯನ್ನು ವಾಚಿಸಿದರು.


Spread the love