19 ವರ್ಷದ ಯುವತಿ ಕಾಣೆ: ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು: 19 ವರ್ಷದ ಯುವತಿ ಕಾಣೆಯಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಪಿರ್ಯಾದುದಾರರಾದ ಇಬ್ರಾಹಿಂ ಅವರು ನರಿಂಗಾನ ಗ್ರಾಮದ ತೌಡುಗೋಳಿ, ನಿಡ್ಮಾಡ್ ಆಲಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರ ಮಗಳು ರಾಭಿಯತುಲ್ ಅಧಭಿಯ (19) 10ನೇ ತರಗತಿ ತನಕ ವಿದ್ಯಾಭ್ಯಾಸ ಮಾಡಿ ಮನೆಯಲ್ಲೇ ಇದ್ದಳು.
ದಿನಾಂಕ 03-05-2026 ರಂದು ರಾತ್ರಿ ಸುಮಾರು 10 ಗಂಟೆಗೆ ಮನೆಯವರು ಊಟ ಮುಗಿಸಿ ಮಲಗಿದ್ದರು. ಪಿರ್ಯಾದುದಾರರು ಮಂಗಳೂರು ದಕ್ಕೆಗೆ ತೆರಳಲು ಮುಂಜಾನೆ 2:30 ಗಂಟೆಗೆ ಎದ್ದು ನೋಡಿದಾಗ ಮಗಳು ರಾಭಿಯತುಲ್ ಅಧಭಿಯ ರೂಮಿನಲ್ಲಿ ಕಾಣಿಸದಿದ್ದಳು. ಅಡುಗೆ ಮನೆಯ ಹಿಂಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ನಂತರ ಎಲ್ಲೆಡೆ ಹುಡುಕಾಟ ನಡೆಸಿ ಸಂಬಂಧಿಕರಲ್ಲಿಯೂ ವಿಚಾರಿಸಿದರೂ ಯುವತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 44/2026 ಅಡಿಯಲ್ಲಿ “ಹೆಂಗಸು ಕಾಣೆ” ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾದ ಯುವತಿಯ ವಿವರಗಳು:
ಹೆಸರು: ರಾಭಿಯತುಲ್ ಅಧಭಿಯ
ತಂದೆ: ಇಬ್ರಾಹಿಂ ಯಂ
ವಯಸ್ಸು: 19 ವರ್ಷ
ಎತ್ತರ: 4.6 ಅಡಿ
ಚಹರೆ: ಗೋಧಿ ಮೈಬಣ್ಣ, ಸಾಧಾರಣ ಶರೀರ
ಧರಿಸಿದ್ದ ಉಡುಪು: ಗುಲಾಬಿ ಬಣ್ಣದ ಚೂಡಿದಾರ
ತಿಳಿದಿರುವ ಭಾಷೆಗಳು: ಕನ್ನಡ, ಬ್ಯಾರಿ, ಮಲಯಾಳಂ, ಇಂಗ್ಲೀಷ್
ಯುವತಿ ಪತ್ತೆಯಾದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536 / 9480802350) ಸಂಖ್ಯೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.













