2018ರಿಂದ ಕಾಣೆಯಾಗಿದ್ದ ದೇವರಾಜ್ ಪೂಜಾರಿ ಪತ್ತೆಗೆ ಕೊಣಾಜೆ ಪೊಲೀಸ್ ಠಾಣೆಯಿಂದ ಸಾರ್ವಜನಿಕರಿಗೆ ವಿನಂತಿ

Spread the love

2018ರಿಂದ ಕಾಣೆಯಾಗಿದ್ದ ದೇವರಾಜ್ ಪೂಜಾರಿ ಪತ್ತೆಗೆ ಕೊಣಾಜೆ ಪೊಲೀಸ್ ಠಾಣೆಯಿಂದ ಸಾರ್ವಜನಿಕರಿಗೆ ವಿನಂತಿ

ಉಳ್ಳಾಲ ತಾಲೂಕು ಪಾವುರು ಗ್ರಾಮದ ಗಾಣದಕೊಟ್ಯ ನಿವಾಸಿ ದೇವರಾಜ್ ಪೂಜಾರಿ (49) ಎಂಬವರು 2018 ರಿಂದ ಕಾಣೆಯಾಗಿರುವ ಪ್ರಕರಣದಲ್ಲಿ, ಕೊಣಾಜೆ ಪೊಲೀಸ್ ಠಾಣೆಯವರು ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಪಿರ್ಯಾದಿದಾರರಾದ ಶ್ರೀಮತಿ ಬೂಬು ಪೂಜಾರಿ ಅವರು 07-06-2018 ರಂದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಪ್ರಕಾರ, ಅವರ ಮಗ ದೇವರಾಜ್ ಪೂಜಾರಿ (ಆಗ 42 ವರ್ಷ) ದಿನಾಂಕ 27-05-2018 ರಂದು ಬೆಳಿಗ್ಗೆ 9.00 ಗಂಟೆಗೆ “ಕೆಲಸಕ್ಕೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಅದರ ನಂತರ ಮನೆಗೆ ವಾಪಸ್ಸಾಗದೆ ಕಾಣೆಯಾಗಿದ್ದಾರೆ.

ಈ ದೂರು ಆಧರಿಸಿ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 151/2018 ಅಡಿಯಲ್ಲಿ ಮನುಷ್ಯ ಕಾಣೆಯಾಗಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

ಕಾಣೆಯಾದ ವ್ಯಕ್ತಿಯ ವಿವರಗಳು

ಹೆಸರು: ದೇವರಾಜ್ ಪೂಜಾರಿ

ಪ್ರಾಯ: 49 ವರ್ಷ

ತಂದೆ: ದಿ. ಸೋಮಪ್ಪ ಪೂಜಾರಿ

ತಾಯಿ: ಶ್ರೀಮತಿ ಬೂಬು ಪೂಜಾರಿ

ವಿಳಾಸ: ಗಾಣದಕೊಟ್ಯ ಮನೆ, ಪಾವೂರು ಗ್ರಾಮ, ಉಳ್ಳಾಲ ತಾಲೂಕು

ಎತ್ತರ: ಸುಮಾರು 5 ಅಡಿ 7 ಇಂಚು

ಮೈಬಣ್ಣ: ಗೋಧಿ

ಮೈಕಟ್ಟು: ಸಾಧಾರಣ

ಕೂದಲು: ಗುಂಗುರು ಕೂದಲು, ತಲೆಯ ಕೆಲವು ಭಾಗ ಬೋಳು

ಶಿಕ್ಷಣ: 4ನೇ ತರಗತಿ

ತಿಳಿದಿರುವ ಭಾಷೆಗಳು: ಕನ್ನಡ, ತುಳು

ಕೊನೆಯಾಗಿ ಧರಿಸಿದ್ದ ಬಟ್ಟೆ: ಬಿಳಿ ಪ್ಯಾಂಟ್ ಮತ್ತು ಬಿಳಿ ಶರ್ಟ್

ದೇವರಾಜ್ ಪೂಜಾರಿ ಅವರ ಬಗ್ಗೆ ಯಾರೇ ಆದರೂ ಮಾಹಿತಿ ಹೊಂದಿದ್ದರೆ ಕೆಳಗಿನ ಸಂಪರ್ಕ ಸಂಖ್ಯೆಯಲ್ಲಿ ಪೊಲೀಸರಿಗೆ ತಿಳಿಸಲು ವಿನಂತಿಸಲಾಗಿದೆ:

📞 9480802315
📞 9019873901
☎️ 0824-2220536
📧 konajemgc@ksp.gov.in


Spread the love
Subscribe
Notify of

0 Comments
Inline Feedbacks
View all comments