ಕೂಂಬಿಂಗ್ ವೇಳೆ ನಾಪತ್ತೆಯಾದ ಶೃಂಗೇರಿ ಎಎನ್ ಎಫ್ ಸಿಬಂದಿ; ಹೆಬ್ರಿಯಲ್ಲಿ ಪತ್ತೆ

Spread the love

ಕಾರ್ಕಳ: ಕಾಡಿನಲ್ಲಿ ಕೂಂಬಿಂಗ್ ನಡೆಸುತ್ತಿದ್ದ ಶೃಂಗೇರಿ ತಾಲೂಕು ಎಎನ್ಎಫ್ ಕೂಂಬಿಂಗ್ ತಂಡ ದಾರಿ ತಪ್ಪಿ ನಾಪತ್ತೆಯಾದ ಪೋಲಿಸರು ಹೆಬ್ರಿ ಬಳಿಯ ನಾಡ್ಪಾಲು ಬಳಿ ಭಾನುವಾರ ಪತ್ತೆಯಾಗಿದ್ದಾರೆ.
ಶನಿವಾರ ಬೆಳಿಗ್ಗೆ ಶೃಂಗೇರಿ ತಾಲೂಕು ಕ್ಯಾಂಪ್ ನಿಂದ ಕಾಡಿನಲ್ಲಿ ಕೂಂಬಿಂಗ್ ನಡೆಸಲು ಕಾಡಿನಲ್ಲಿ ಹೊರಟಿತ್ತು ಈ ವೇಳೆ ಕಾಡಿನಲ್ಲಿ ದಾರಿ ತಪ್ಪಿದ್ದು, ತಂಡದಿಂದ ನಾಡ್ಪಾಲು ಗ್ರಾಮಕ್ಕೆ ಮರಳಿ ಬಂದ ಇಬ್ಬರು ಪೋಲಿಸರ ಮಾಹಿತಿ ಆಧರಿಸಿ ಉಡುಪಿ ಜಿಲ್ಲೆಯ ಕಾರ್ಕಳ ಎ ಎನ್ ಎಫ್ ಸಿಬಂದಿ ಹುಡುಕಾಟ ಆರಂಭಿಸಿದ್ದು, ಕಣ್ಮರೆಯಾಗಿದ್ದ ಐದು ಮಂದಿ ಎಎನ್ ಎಫ್ ಸಿಬಂದಿಗಳೂ ಕೂಡ್ಲು ಜಲಪಾತದಿಂದ ಒಂದುವರೆ ಕಿಮಿ ದೂರದಲ್ಲಿ ಸಂಪರ್ಕಕ್ಕೆ ಸಿಕ್ಕಿದ್ದಾರೆ.
ಸಂಪರ್ಕಕ್ಕೆ ಸಿಕ್ಕ ಸಿಬಂದಿಗಳನ್ನು ಹೆಬ್ರಿ ಠಾಣೆಗೆ ಕರೆತರಲಾಗಿದೆ. ನಾಪತ್ತೆಯಾಗಿದ್ದ ಸಿಬಂದಿಗಳ ವಿವರ ಇನ್ನಷ್ಟೇ ಲಭಿಸಬೇಕಿದೆ.


Spread the love