22 ಮಂದಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Spread the love

22 ಮಂದಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವಾರ್ಷಿಕವಾಗಿ ನೀಡುವ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವೈಯುಕ್ತಿಕ ಹಾಗೂ ಸಂಘಸಂಸ್ಥೆಗಳು ಸೇರಿದಂತೆ 22 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರ ವಿವರ ಇಂತಿದೆ: ಪ್ರಭಾಕರ ಮಯ್ಯ (ಕೃಷಿ), ಎಸ್ ಎಂ ಅಬೂಬಕ್ಕರ್ (ಶಿಕ್ಷಣ), ಎಮ್ ಸುಮಿತ್ರ ಕುಮಾರ್ (ಯಕ್ಷಗಾನ), ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ಸಮಾಜ ಸೇವೆ), ಭಾಸ್ಕರ್ ಕುಲಾಲ್ (ಸಾಹಿತ್ಯ), ಸತ್ಯಾ ಪಿ (ಜಾನಪದ), ರಾಮಕೃಷ್ಣ ಆರ್ (ಪತ್ರಿಕೋದ್ಯಮ), ಡಾ ಅಲ್ಫೋನ್ಸಸ್ ಸುರೇಶ್ ಜೋಸೇಫ್ ಆರಾಹ್ನ (ವೈದ್ಯಕೀಯ), ಗೋಪಾಲಕೃಷ್ಣ ಬಂಗೇರ (ಲಲಿತ ಕಲೆ), ಖಾಲೀದ್ ತಣ್ಣಿರುಬಾವಿ (ಸಂಗೀತ), ಜಯಂತಿ ಎಸ್ ಬಂಗೇರ (ತುಳುಸಾಹಿತ್ಯ ಹಾಗೂ ರಂಗಭೂಮಿ), ನಾರಯಣ ಕೋಟ್ಯಾನ್ (ಕ್ರೀಡೆ/ಕುಸ್ತಿ), ಸಾಧು ಪೂಜಾರಿ (ಶಿಕ್ಷಣ), ಮೊಡಂಬೈಲ್ ರವಿ ಶೆಟ್ಟಿ (ಸಮಾಜಸೇವೆ), ಜಗದೀಶ್ಚಂದ್ರ ಅಂಚನ್ (ಬರವಣಿಗೆ), ಯೋಗಿಶ್ ಕುಮಾರ್ (ಸಮಾಜಸೇವೆ), ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಸಸಿ ಹಿತ್ಲು, ಸ್ವಸ್ತಿಕ್ ಕಲಾಕೇಂದ್ರ ಮಂಗಳೂರು, ಶ್ರೀ ಶಾರದಾಂಬಾ ಭಜನಾ ಮಂಡಳಿ (ಸಮಾಜಸೇವೆ), ಜಗದೀಶ್ ಶೆಟ್ಟಿ (ಯೋಗ), ಹಮೀದ್ ಕೂರ್ನಡ್ಕ (ದೃಶ್ಯಮಾಧ್ಯಮ).
ಎಲ್ಲಾ ವಿಜೇತರಿಗೆ ಸೋಮವಾರ ಮಂಗಳೂರು ಕೇಂದ್ರ ಮೈದಾನದಲ್ಲಿ ಜರುಗಲಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಲಿರುವರು.


Spread the love