23 ವರ್ಷ ವಯಸ್ಸಿನ ಯುವಕನನ್ನು ಇರಿದು ಕೊಲೆ

Spread the love

23 ವರ್ಷ ವಯಸ್ಸಿನ ಯುವಕನನ್ನು ಇರಿದು ಕೊಲೆ

ಮಂಗಳೂರು: 23 ವರ್ಷ ವಯಸ್ಸಿನ ಯುವಕನೋರ್ವನನ್ನು ಗೆಳೆಯರು ಕೊಲೆ ಮಾಡಿದ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ.
ಮೃತನನ್ನು ಮರೋಳಿ ನಿವಾಸಿ ಪ್ರತಾಪ್ ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಶನಿವಾರ ಹತ್ತು ಜನರ ತಂಡವೊಂದು ಮಣಿಕಂಠ ಎಂಬವನ್ನನ್ನು ವಿಚಾರಿಸಿ ಬಂದಿದ್ದು, ತಂಡವು ಮಣಿಕಂಠನನ್ನು ಹಲ್ಲೆಗೆ ಯತ್ನಿಸಿದ ವೇಳೆ ತಂಡವು ಪ್ರತಾಪ್ ಮೇಲೆ ಚೂರಿಯಿಂದ ಇರಿದು ಪರಾರಿಯಾಗಿದೆ ಎನ್ನಲಾಗಿದೆ.
ಆರೋಪಿಗಳು ಗಾಂಜಾ ವ್ಯವಹಾರ ನಡೆಸುತ್ತಿದ್ದು, ಕಂಕನಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love