ಗಣ್ಯರಿಂದ ಈದ್ ಶುಭಾಶಯ

Spread the love

ಗಣ್ಯರಿಂದ ಈದ್ ಶುಭಾಶಯ

ಮ0ಗಳೂರು : ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಶುಭಾಶಯ ತಿಳಿಸಿದ್ದಾರೆ.
ರಮದಾನ್ ತಿಂಗಳಲ್ಲಿ ಒಂದು ತಿಂಗಳ ನಿರಂತರ ಉಪವಾಸ ಕೈಗೊಂಡು, ಸಮಾಜದ ಬಡವರ ಜೀವನಶೈಲಿಯ ಬಗ್ಗೆ ಸ್ವತಹ: ಅನುಭವಿಸಿ ಇದೀಗ ಶಾಂತಿ ಸೌಹಾರ್ದತೆ, ಸಮಾನತೆ, ಮಾನವೀಯ ಮೌಲ್ಯಗಳನ್ನು ಎತ್ತಿ ಎಡಿಯುತಾ ಪವಿತ್ರ ಈದುಲ್ ಫಿತರ್ ಹಬ್ಬದ ಆಚರಣೆಯಲ್ಲಿರುವ ನಾಡಿನ ಸರ್ವ ಮುಸ್ಲಿಮರಿಗೂ ಶುಭಾಶಯಗಳು , ಈದ್ ಹಬ್ಬದ ಸಂದೇಶ ನಾಡಿನ ಎಲ್ಲೆಡೆಗೂ ಪಸರಿಸಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆನಿಲ್ಲಲಿ ಎಂದು ಸಚಿವ ರಮಾನಾಥ ರೈ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಇದೀಗ ಹಬ್ಬದ ಸಂಭ್ರಮದಲ್ಲಿರುವ ಮುಸ್ಲಿಂ ಬಾಂಧವರಿಗೆ ಈದ್ ಹಬ್ಬವು ಒಳಿತು ಹಾಗೂ ನೆಮ್ಮದಿಯನ್ನು ತರುವಂತಾಗಲಿ ಎಂದು ಸಚಿವರು ಶುಭ ಹಾರೈಸಿದ್ದಾರೆ.

ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರು ತಮ್ಮ ಸಂದೇಶದಲ್ಲಿ, ತ್ಯಾಗ, ಹಸಿವು, ಕಷ್ಟಗಳನ್ನು ಸಹಿಸಿ ದಾನಧರ್ಮಗಳಿಂದ ದುರ್ಬಲರಿಗೆ ನೆರವಾಗಿ ರಮದಾನ್ ತಿಂಗಳನ್ನು ಪುನೀತರನ್ನಾಗಿಸಿ, ಇದೀಗ ರಮದಾನ್ ಮುಕ್ತಾಯದ ಸಂಕೇತವಾಗಿ ನಡೆಯುವ ಈದ್ ಹಬ್ಬವು ಜನತೆಗೆ ನೆಮ್ಮದಿ, ಶಾಂತಿ ಮೂಡಿಸಿ, ಸರ್ವರೂ ಏಕತೆಯಿಂದ ಹಬ್ಬವನ್ನು ಆಚರಿಸುವಂತಾಗಲಿ ಎಂದು ಈದ್ ಸಂದೇಶ ನೀಡಿದ್ದಾರೆ.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದುಲ್ ಫಿತರ್ ಹಬ್ಬದ ಶುಭಾಶಯ ಕೋರುತ್ತಾ ನಾಡಿನಲ್ಲಿ ಶಾಂತಿ, ಸಹೋದರತ್ವ ಸೌಹಾರ್ದ ನೆಲೆಸಲಿ ಎಂದು ಮೀನುಗಾರಿಕೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವರಾರಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ರವರು ಹಾರೈಸಿರುತ್ತಾರೆ.

ಶಾಸಕರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಬಿ.ಎ. ಮೊಹಿದೀನ್ ಬಾವಾ, ಜೆ.ಆರ್.ಲೋಬೋ, ವಿಧಾನಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ, ಮೇಯರ್ ಹರಿನಾಥ್ ಮತ್ತಿತರರು ಜನತೆಗೆ ಈದ್ ಶುಭಾಶಯ ಕೋರಿದ್ದಾರೆ.


Spread the love