400 ವಿದ್ಯಾರ್ಥಿನಿಯರಿಗೆ ಒಂದೇ ಸಂಕೀರ್ಣದಡಿ ರಾಜ್ಯಕ್ಕೆ ಮಾದರಿ ವಸತಿ ಶಾಲೆ- ಪ್ರಮೋದ್ ಮಧ್ವರಾಜ್

Spread the love

400 ವಿದ್ಯಾರ್ಥಿನಿಯರಿಗೆ ಒಂದೇ ಸಂಕೀರ್ಣದಡಿ ರಾಜ್ಯಕ್ಕೆ ಮಾದರಿ ವಸತಿ ಶಾಲೆ-
ಪ್ರಮೋದ್ ಮಧ್ವರಾಜ್

ಉಡುಪಿ : ಮಣಿಪಾಲದಲ್ಲಿ ಮೂರುಕೋಟಿ 15ಲಕ್ಷ ರೂ. ವೆಚ್ಚದ ಮೆಟ್ರಿಕ್ ನಂತರದ ವೃತ್ತಿಪರ ವ್ಯಾಸಂಗ ಮಾಡುವ ಬಾಲಕಿಯರ ವಸತಿ ನಿಲಯದ ಕಟ್ಟಡಕ್ಕೆ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.

ಒಂದೇ ಸಂಕೀರ್ಣದಡಿ ನಡೆಸಲ್ಪಡುವ ಹಾಸ್ಟೆಲ್‍ಗಳಲ್ಲಿ ಒಟ್ಟು 400 ವಿದ್ಯಾರ್ಥಿನಿಯರಿಗೆ ನಿಲ್ಲಲು ಅವಕಾಶವಿದ್ದು ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದ ಸಚಿವರು, ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಉತ್ತಮ ಗುಣಮಟ್ಟದೊಂದಿಗೆ ಕಟ್ಟಲು ಸಂಬಂಧಪಟ್ಟವರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಒಟ್ಟು 1808.34 ಸ್ಕ್ವಾರ್ ಮೀಟರ್‍ನಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು,ಎಲ್ಲ ಮೂಲಸೌಕರ್ಯಗಳನ್ನು ಹೊಂದಲಿದೆ. ಶಂಕುಸ್ಥಾಪನೆ ವೇಳೆ ಬಿಸಿಎಂ ಅಧಿಕಾರಿ ಹರೀಶ್ ಗಾಂವ್ಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love