ರಾಜ್ಯದ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ: 28 ಮಂದಿಗೆ ಬಡ್ತಿ! 13 ಜಿಲ್ಲೆಗಳ ಎಸ್‌ಪಿ ಬದಲಾವಣೆ

Spread the love

ರಾಜ್ಯದ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ: 28 ಮಂದಿಗೆ ಬಡ್ತಿ! 13 ಜಿಲ್ಲೆಗಳ ಎಸ್‌ಪಿ ಬದಲಾವಣೆ

ಬೆಂಗಳೂರು: ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪಟ್ಟಿಗೆ ಅನುಮೋದನೆ ನೀಡಿದ್ದಾರೆ. ಈ ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್‌ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ.

ಪ್ರಮುಖ ಬದಲಾವಣೆಗಳು ಏನು?
ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಡಿಸಿಪಿ ಹುದ್ದೆಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ವೈಟ್‌ಫೀಲ್ಡ್ ವಿಭಾಗಕ್ಕೆ ಸೈದುಲು ಅದಾವತ್, ಪಶ್ಚಿಮ ವಿಭಾಗಕ್ಕೆ ಯತೀಶ್ ಎನ್., ಈಶಾನ್ಯ ವಿಭಾಗಕ್ಕೆ ಮಿಥುನ್ ಕುಮಾರ್, ಪೂರ್ವ ವಿಭಾಗಕ್ಕೆ ವಿಕ್ರಮ್ ಆಮ್ಟೆ ಹಾಗೂ ಆಗ್ನೇಯ ವಿಭಾಗಕ್ಕೆ ಮಹಮ್ಮದ್ ಸುಜೀತಾ ಅವರನ್ನು ನೇಮಿಸಲಾಗಿದೆ.

ಇತ್ತ ಬೆಳಗಾವಿ ಎಸ್‌ಪಿ ಆಗಿದ್ದ ಭೀಮಾಶಂಕರ್ ಗುಳೇದ್ ಅವರಿಗೆ ಡಿಐಜಿಪಿ ಆಗಿ ಮುಂಬಡ್ತಿ ನೀಡಿ ಸಿಐಡಿ (ಆರ್ಥಿಕ ಅಪರಾಧ) ವಿಭಾಗಕ್ಕೆ ವರ್ಗಾಯಿಸಲಾಗಿದೆ. ಬೆಳಗಾವಿಯ ನೂತನ ಎಸ್‌ಪಿಯಾಗಿ ಕೊಡಗಿನಲ್ಲಿದ್ದ ಕೆ. ರಾಮರಾಜನ್ ಅವರನ್ನು ನಿಯೋಜಿಸಲಾಗಿದೆ. ಮೈಸೂರು ಎಸ್‌ಪಿಯಾಗಿದ್ದ ವಿಷ್ಣುವರ್ಧನ ಅವರಿಗೆ ನಿರ್ದೇಶಕರು ಕೆಪಿಎ (KPA) ಹುದ್ದೆಗೆ ನೀಡಲಾಗಿದ್ದು, ಮಂಡ್ಯ ಎಸ್‌ಪಿಯಾಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಮೈಸೂರು ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.
ಮುಂಬಡ್ತಿ ವಿವರ

ದಕ್ಷಿಣ ವಲಯದ ಡಿಐಜಿಪಿ ಆಗಿದ್ದ ಡಾ. ಎಂ.ಬಿ. ಬೋರಲಿಂಗಯ್ಯ ಅವರಿಗೆ ಐಜಿಪಿಯಾಗಿ ಮುಂಬಡ್ತಿ ನೀಡಲಾಗಿದ್ದು, ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಹಾಗೆಯೇ ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿದ್ದ ಅಜಯ್ ಹಿಲೋರಿ ಅವರಿಗೂ ಐಜಿಪಿಯಾಗಿ ಪದೋನ್ನತಿ ನೀಡಲಾಗಿದೆ.

ವರ್ಗಾವಣೆ ಮತ್ತು ಮುಂಬಡ್ತಿಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ

ಧಿಕಾರಿಯ ಹೆಸರು ಪ್ರಸ್ತುತ ಹುದ್ದೆ ವರ್ಗಾವಣೆಗೊಂಡ/ ಮುಂಬಡ್ತಿ ಹುದ್ದೆ
ಭೀಮಾಶಂಕರ್ ಗುಳೇದ್ ಎಸ್‌ಪಿ, ಬೆಳಗಾವಿ ಜಿಲ್ಲೆ ಡಿಐಜಿಪಿ, ಸಿಐಡಿ (ಆರ್ಥಿಕ ಅಪರಾಧ)
ಇಲಾಕ್ಕಿಯ ಕರುಣಾಕರನ್ ಎನ್‌ಎಚ್‌ಆರ್‌ಸಿ (NHRC) ಯಿಂದ ವಾಪಸ್ ಡಿಐಜಿಪಿ, ವೈರ್‌ಲೆಸ್ (ನಿಸ್ತಂತು)
ವೇದಮೂರ್ತಿ ಎಸ್‌ಪಿ, ರಾಜ್ಯ ಗುಪ್ತಚರ ಡಿಐಜಿಪಿ, ರಾಜ್ಯ ಗುಪ್ತಚರ
ಕೆ.ಎಂ. ಶಾಂತರಾಜು ಎಸ್‌ಪಿ, ಐಎಸ್‌ಡಿ (ISD) ಡಿಐಜಿಪಿ, ಐಎಸ್‌ಡಿ
ಹನುಮಂತರಾಯ ಎಸ್‌ಪಿ, ಕೆಎಲ್‌ಎ ಡಿಐಜಿಪಿ, ಎಸ್‌ಎಚ್‌ಆರ್‌ಸಿ (SHRC)
ಡಿ. ದೇವರಾಜು ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು ಡಿಐಜಿಪಿ, ತರಬೇತಿ
ಡಾ. ಸಿರಿ ಗೌರಿ ಎಸ್‌ಪಿ, ಎಸ್‌ಸಿಆರ್‌ಬಿ (SCRB) ಡಿಐಜಿಪಿ, ಕರ್ನಾಟಕ ಲೋಕಾಯುಕ್ತ
ಡಾ. ಕೆ. ಧರಣಿ ದೇವಿ ಎಸ್‌ಪಿ, ಡಿಸಿಆರ್‌ಇ (DCRE) ಡಿಐಜಿಪಿ, ಗುಪ್ತಚರ
ಎಸ್. ಸವಿತಾ ಎಸ್‌ಪಿ, ಸಿಐಡಿ ಡಿಐಜಿಪಿ, ಗೃಹ ರಕ್ಷಕ ದಳ
ಸಿ.ಕೆ. ಬಾಬಾ ಎಸ್‌ಪಿ, ಬೆಂಗಳೂರು ಗ್ರಾಮಾಂತರ ಡಿಐಜಿಪಿ, ಕೆಎಸ್‌ಆರ್‌ಪಿ (KSRP)
ಅಬ್ದುಲ್ ಅಹದ್ ನಿರ್ದೇಶಕರು, ಬಿಎಂಟಿಸಿ ನಿರ್ದೇಶಕರು, ಬಿಎಂಟಿಸಿ (ದರ್ಜೆ ಏರಿಕೆ)
ಎಸ್. ಗಿರೀಶ್ ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ಡಿಐಜಿಪಿ, ಎಎನ್‌ಟಿಎಫ್ (ANTF)
ಎಂ. ಪುಟ್ಟಮಾದಯ್ಯ ಎಸ್‌ಪಿ, ರಾಯಚೂರು ಡಿಐಜಿಪಿ, ಪ್ರಾಂಶುಪಾಲರು, ಪಿಟಿಸಿ ಕಲಬುರಗಿ
ಟಿ. ಶ್ರೀಧರ ಎಸ್‌ಪಿ, ಡಿಸಿಆರ್‌ಇ (DCRE) ಡಿಐಜಿಪಿ, ಕೇಂದ್ರ ಕಚೇರಿ (Hqrs)
ಎ.ಎನ್. ಪ್ರಕಾಶ್ ಗೌಡ ಎಸ್‌ಪಿ, ಐಎಸ್‌ಡಿ ಡಿಐಜಿಪಿ, ಎಸ್‌ಎಎಫ್ (SAF)
ಜಿನೇಂದ್ರ ಖಾನಗಾವಿ ಎಸ್‌ಪಿ, ಐಎಸ್‌ಡಿ ಡಿಐಜಿಪಿ, ಕಾರಾಗೃಹ (Prisons)
ಜೆ.ಕೆ. ರಶ್ಮಿ ಡೆಪ್ಯುಟಿ ಕಮಾಂಡೆಂಟ್, ಗೃಹ ರಕ್ಷಕ ಡಿಐಜಿಪಿ, ರೈಲ್ವೇಸ್
ಟಿ.ಪಿ. ಶಿವಕುಮಾರ್ ಎಸ್‌ಪಿ, ಕೆಪಿಸಿಎಲ್ (KPCL) ಡಿಐಜಿಪಿ, ಎಸ್‌ಸಿಆರ್‌ಬಿ (SCRB)
ವಿಷ್ಣುವರ್ಧನ ಎಸ್‌ಪಿ, ಮೈಸೂರು ಜಿಲ್ಲೆ ನಿರ್ದೇಶಕರು, ಕೆಪಿಎ (KPA)
ಡಾ. ಸಂಜೀವ್ ಎಂ ಪಾಟೀಲ್ ಎಐಜಿಪಿ, ಜನರಲ್ ಡಿಐಜಿಪಿ, ಜನರಲ್
ಕೆ. ಪರಶುರಾಮ ಡಿಸಿಪಿ, ವೈಟ್‌ಫೀಲ್ಡ್ ಡಿಐಜಿಪಿ, ಸಿಟಿಆರ್‌ಎಸ್ (CTRS)
ಎಚ್.ಡಿ. ಆನಂದ್ ಕುಮಾರ್ ಎಸ್‌ಪಿ, ಡಿಸಿಆರ್‌ಇ ಡಿಐಜಿಪಿ, ಸೈಬರ್ ಕಮಾಂಡ್
ಕಲಾ ಕೃಷ್ಣಸ್ವಾಮಿ ಎಐಜಿಪಿ, ಅಪರಾಧ ಡಿಐಜಿಪಿ, ಅಪರಾಧ (Crime)

ಐಜಿಪಿ (IGP) ಆಗಿ ಮುಂಬಡ್ತಿ

ಅಧಿಕಾರಿಯ ಹೆಸರು ಪ್ರಸ್ತುತ ಹುದ್ದೆ ಹೊಸ ಹುದ್ದೆ
ಡಾ. ಎಂ.ಬಿ. ಬೋರಲಿಂಗಯ್ಯ ಡಿಐಜಿಪಿ, ದಕ್ಷಿಣ ವಲಯ, ಮೈಸೂರು ಐಜಿಪಿ, ದಕ್ಷಿಣ ವಲಯ, ಮೈಸೂರು
ಅಜಯ್ ಹಿಲೋರಿ ಜಂಟಿ ಆಯುಕ್ತರು, ಅಪರಾಧ, ಬೆಂಗಳೂರು ಹೆಚ್ಚುವರಿ ಆಯುಕ್ತರು (ಐಜಿಪಿ ದರ್ಜೆ), ಅಪರಾಧ, ಬೆಂಗಳೂರು

ಎಸ್‌ಪಿ ಮತ್ತು ಡಿಸಿಪಿಗಳ ವರ್ಗಾವಣೆ ಪಟ್ಟಿ

ಅಧಿಕಾರಿಯ ಹೆಸರು ಪ್ರಸ್ತುತ ಹುದ್ದೆ ವರ್ಗಾವಣೆಗೊಂಡ ಹುದ್ದೆ
ಚಂದ್ರಕಾಂತ್ ಎಂ.ವಿ ಸ್ಥಳ ನಿರೀಕ್ಷೆಯಲ್ಲಿದ್ದರು ಎಸ್‌ಪಿ, ಬೆಂಗಳೂರು ಗ್ರಾಮಾಂತರ
ಸೈದುಲು ಅದಾವತ್ ಎಸ್‌ಪಿ, ಸಿಐಡಿ ಡಿಸಿಪಿ, ವೈಟ್‌ಫೀಲ್ಡ್, ಬೆಂಗಳೂರು
ಯತೀಶ್ ಎನ್ ಎಸ್‌ಪಿ, ರೈಲ್ವೇಸ್ ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು
ಕೆ. ರಾಮರಾಜನ್ ಎಸ್‌ಪಿ, ಕೊಡಗು ಎಸ್‌ಪಿ, ಬೆಳಗಾವಿ ಜಿಲ್ಲೆ
ಬಿ. ನಿಖಿಲ್ ಎಸ್‌ಪಿ, ಕೋಲಾರ ಎಸ್‌ಪಿ, ಶಿವಮೊಗ್ಗ
ಅರುಣಾಂಶು ಗಿರಿ ಎಸ್‌ಪಿ, ಸಿಐಡಿ ಎಸ್‌ಪಿ, ರಾಯಚೂರು
ಶುಭನ್ವಿತಾ ಎಸ್‌ಪಿ, ಸಿಐಡಿ ಎಸ್‌ಪಿ, ಹಾಸನ
ಮಿಥುನ್ ಕುಮಾರ್ ಎಸ್‌ಪಿ, ಶಿವಮೊಗ್ಗ ಡಿಸಿಪಿ, ಈಶಾನ್ಯ ವಿಭಾಗ, ಬೆಂಗಳೂರು
ವಿಕ್ರಮ್ ಆಮ್ಟೆ ಎಸ್‌ಪಿ, ಚಿಕ್ಕಮಗಳೂರು ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು
ಜಿತೇಂದ್ರ ಕುಮಾರ್ ದಯಾಮ್ ಎಸ್‌ಪಿ, ಎಎನ್‌ಎಫ್ (ANF) ಎಸ್‌ಪಿ, ಚಿಕ್ಕಮಗಳೂರು
ಕನ್ನಿಕಾ ಸಿಕ್ರಿವಾಲ್ ಡಿಸಿಪಿ, ಎಲ್&ಒ, ಕಲಬುರಗಿ ಎಸ್‌ಪಿ, ಕೋಲಾರ ಜಿಲ್ಲೆ
ಬಿಂದು ಮಣಿ ಡಿಸಿಪಿ, ಎಲ್&ಒ, ಮೈಸೂರು ಎಸ್‌ಪಿ, ಕೊಡಗು ಜಿಲ್ಲೆ
ಮಹಮ್ಮದ್ ಸುಜೀತಾ ಎಂ.ಎಸ್ ಎಸ್‌ಪಿ, ಹಾಸನ ಡಿಸಿಪಿ, ಆಗ್ನೇಯ ವಿಭಾಗ, ಬೆಂಗಳೂರು
ಶೋಭಾರಾಣಿ ಎಸ್‌ಪಿ, ಬಳ್ಳಾರಿ ಎಸ್‌ಪಿ, ಮಂಡ್ಯ
ಸಾರಾ ಫಾತಿಮಾ ಡಿಸಿಪಿ, ಆಗ್ನೇಯ ವಿಭಾಗ ಎಸ್‌ಪಿ, ರೈಲ್ವೇಸ್
ಮುತ್ತುರಾಜು ಎಂ ಎಸ್‌ಪಿ, ಬಿಎಂಟಿಎಫ್ (BMTF) ಎಸ್‌ಪಿ, ಚಾಮರಾಜನಗರ
ಡಾ. ಕವಿತಾ ಬಿ.ಟಿ ಎಸ್‌ಪಿ, ಚಾಮರಾಜನಗರ ಎಸ್‌ಪಿ, ಸಿಐಡಿ, ಬೆಂಗಳೂರು
ಸಜಿತ್ ಡಿಸಿಪಿ, ಈಶಾನ್ಯ ವಿಭಾಗ ಎಸ್‌ಪಿ, ಐಎಸ್‌ಡಿ (ISD)
ಪವನ್ ನೆಜ್ಜೂರ್ ಎಸ್‌ಪಿ, ಲೋಕಾಯುಕ್ತ ಎಸ್‌ಪಿ, ಬಳ್ಳಾರಿ ಜಿಲ್ಲೆ
ಮಲ್ಲಿಕಾರ್ಜುನ ಬಾಲದಂಡಿ ಎಸ್‌ಪಿ, ಮಂಡ್ಯ ಎಸ್‌ಪಿ, ಮೈಸೂರು
ಸ್ಯಾಮ್ ವರ್ಗೀಸ್ (ASP to SP) ಎಎಸ್‌ಪಿ, ಚನ್ನಗಿರಿ ಎಸ್‌ಪಿ, ಸಿಐಡಿ
ಶಾಲೂ ಎಸಿಪಿ ಹೊಳೆನರಸೀಪುರ ಎಸ್‌ಪಿ, ಸಿಐಡಿ
ಡಾ ಹರ್ಷ ಪ್ರಿಯಮ್ವದ ಎಎಸ್‌ಪಿ ಉಡುಪಿ ಎಸ್‌ಪಿ ಸಿಐಡಿ

Spread the love
Subscribe
Notify of

0 Comments
Inline Feedbacks
View all comments