ಉಡುಪಿಯಲ್ಲಿ ಎಸ್ಸೆಸ್ಸೆಫ್ ವತಿಯಿಂದ ಆಝಾದಿ ಜಾಥಾ -ಪ್ರಜಾ ಸಂಗಮ

Spread the love

ಉಡುಪಿಯಲ್ಲಿ ಎಸ್ಸೆಸ್ಸೆಫ್ ವತಿಯಿಂದ ಆಝಾದಿ ಜಾಥಾ -ಪ್ರಜಾ ಸಂಗಮ

ಉಡುಪಿ: ಉಡುಪಿ ಜಿಲ್ಲಾ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ವತಿಯಿಂದ `ನಮ್ಮೊಳಗಿನ ಭಾರತ ಜಾಗೃತಗೊಳ್ಳಲಿ’ ಘೋಷಣೆಯೊಂದಿಗೆ ಸ್ವಾತಂತ್ರ ದಿನಾಚರಣೆ ಅಂಗವಾಗಿ ಆಝಾದಿ ರ್ಯಾಲಿ ಹಾಗೂ ಪ್ರಜಾ ಸಂಗಮ ಕಾರ್ಯಕ್ರಮವನ್ನು ಬುಧವಾರ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಅಂಜುಮಾನ್ ಮಸೀದಿಯಿಂದ ಬ್ರಹ್ಮಗಿರಿ ಲಯನ್ಸ್ ಭವನದ ವರೆಗೆ ನಡೆದ ಆಝಾದಿ ರ್ಯಾಲಿಗೆ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಚಾಲನೆ ನೀಡಿದರು. ರ್ಯಾಲಿಯಲ್ಲಿ ವಿವಿಧ ಧಪ್, ಸ್ಕೌಟ್ ದಳಗಳ ವೈವಿಧ್ಯಮಯ ಆಕರ್ಷಕ ಪ್ರದರ್ಶಗಳು ಗಮನ ಸೆಳೆದವು.

ಬಳಿಕ ಲಯನ್ಸ್ ಭವನದಲ್ಲಿ ನಡೆದ ಪ್ರಜಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂಝತ್ ಹೆಜಮಾಡಿ ಮಾತನಾಡಿ, ಈ ದೇಶಕ್ಕಾಗಿ ಮುಸ್ಲಿಮರು ಹೋರಾಟ, ತ್ಯಾಗ ಮಾಡಿದ್ದಾರೆ. ಆದರೆ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ. ಈ ದೇಶದಲ್ಲಿನ ಭಯೋತ್ಪಾದನೆ, ಅತ್ಯಾಚಾರ, ಭ್ರಷ್ಟಾಚಾರಗಳು ಕೊನೆಯಾದಾಗ ಮಾತ್ರ ಸ್ವಾತಂತ್ರಕ್ಕೆ ಒಂದು ಅರ್ಥ ಬರುತ್ತದೆ. ಮುಸ್ಲಿಮರು ಭಯೋತ್ಪಾದನೆ, ಕೋಮುವಾದದ ವಿರುದ್ಧ ಹೋರಾಟ ನಡೆಸಬೇಕು ಎಂದರು.

ಜಿಲ್ಲಾ ಎಸ್ವೈಎಸ್ ಅಧ್ಯಕ್ಷ ಅಸ್ಸೈಯ್ಯದ್ ಜಅಫರ್ ಸ್ವಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಎಫ್ ರಾಜ್ಯ ನಾಯಕ ಮೌಲಾನ ನೌಫಲ್ ಸಖಾಫಿ ಕಳಸ ಸಂದೇಶ ಭಾಷಣ ಮಾಡಿದರು.

ವೇದಿಕೆಯಲ್ಲಿ ಎಸ್ವೈಎಸ್ ರಾಜ್ಯ ಉಪಾಧ್ಯಕ್ಷ ಗುಡ್ವಿಲ್ ಮುಹ್ಯಿದ್ದೀನ್ ಹಾಜಿ, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಕೆ.ಪಿ.ಇಬ್ರಾಹಿಂ ಮಟ ಪಾಡಿ, ಎಸ್ಜೆಯು ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಕನ್ನಂಗಾರ್, ಎಸ್ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ ರಝಾಕ್ ಖಾಸಿಮಿ, ಎಸ್ಎಂಎ ಜಿಲ್ಲಾಧ್ಯಕ್ಷ ಮನ್ಸೂರ್ ಕೋಡಿ, ಅಬ್ದುಲ್ ವಹೀದ್, ಅಬ್ದುರ್ರವೂಫ್ ಖಾನ್, ನಹೀಂ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ನಾವುಂದ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಸ್ವೈಎಸ್ ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಸಿರಾಜು ದ್ದೀನ್ ಸಖಾಫಿ ಸ್ವಾಗತಿಸಿದರು. ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಅಬ್ದುರ್ರಹೀಂ ಹೊಸ್ಮಾರು ವಂದಿಸಿದರು. ಕ್ಯಾಂಪಸ್ ಕಾರ್ಯದರ್ಶಿ ರಾಖೀಬ್ ಕನ್ನಂಗಾರ್ ಕಾರ್ಯಕ್ರಮ ನಿರೂಪಿಸಿದರು.


Spread the love