ಬರ್ಕೆಯಲ್ಲಿ ಯುವಕನ ಮೇಲೆ ಹಲ್ಲೆ – ಆಸ್ಪತ್ರೆಗೆ ದಾಖಲು

Spread the love

ಬರ್ಕೆಯಲ್ಲಿ ಯುವಕನ ಮೇಲೆ ಹಲ್ಲೆ – ಆಸ್ಪತ್ರೆಗೆ ದಾಖಲು

ಮಂಗಳೂರು:,ಬಳ್ಳಾಲ್ ಬಾಗ್ ಫ್ರೆಂಡ್ಸ್ ಇದರ ಪದಾಧಿಕಾರಿ ರಕ್ಷಿತ್ ಕೊಟ್ಟಾರಿ ಅವರ ಹಲ್ಲೆ ,ಕೊಲೆ ಬೆದರಿಕೆ ಪ್ರಕರಣ ಬರ್ಕೆ ಪೊಲೀಸ್ ಠಾಣೆಯಲ್ಲಿ ಇರುವಾಗಲೇ ಇದೀಗ ರಿತೇಶ್ ಕೊಟ್ಟಾರಿ ಎಂಬವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಗುರುವಾರ ರಾತ್ರಿ ನಡೆದಿದೆ.

ನಾಗುರಿಯಲ್ಲಿ ರುವ ತನ್ನ ಅಜ್ಜಿ ಮನೆಯಲ್ಲಿರುವಾಗ ಸ್ಥಳಕ್ಕೆ ಬಂದ ರಕ್ಷಿತ್ ಕೊಟ್ಟಾರಿ ಮತ್ತು ಆತನ ಸ್ನೇಹಿತರು ಏಕಾಏಕಿ ನನ್ನ ವಿರುದ್ದ ಬಂದ ನ್ಯೂಸ್ ನ ಕ್ಲಿಪ್ಪಿಂಗ್ ಫಾರ್ವಾಡ್ ಮಾಡುತ್ತಿಯಾ ಎಂದು ಹೇಳಿ ಎದೆ,ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆ.

ರಿತೇಶ್ ಕೊಟ್ಟಾರಿ ಅವರು ಈ ಸಂಬಂಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಿತೇಶ್ ಕೊಟ್ಟಾರಿ ಅವರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.


Spread the love