ಜುಲೈ 19ರಂದು ದುಬೈಯಲ್ಲಿ  ಬೃಹತ್ ರಕ್ತದಾನ ಶಿಬಿರ

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್( DKSC) ಯು.ಎ.ಇ ಯೂತ್ ವಿಂಗ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಹಬಾಗಿತ್ವದಲ್ಲಿ ಜುಲೈ 19ರಂದು ಬೆಳಿಗ್ಗೆ 9ರಿಂದ ಮದ್ಯಾಹ್ನ 2ರ ವರೆಗೆ ಡಿ.ಕೆ.ಎಸ್.ಸಿ ಇದರ 20ನೇ ವಾರ್ಷಿಕೋತ್ಸವದ ಪ್ರಚಾರಾರ್ಥ ಲತೀಫಾ ಆಸ್ಪತ್ರೆ ಹೂದ್ ಮೆಹ್ತಾ ದುಬೈಯಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಧಾರ್ಮಿಕ ನೇತಾರರು ಹಾಗೂ ಉದ್ಯಮಿಗಳು ಮತ್ತು ಯು.ಎ.ಇ ಅನಿವಾಸಿ ಪ್ರಮುಖರು ಭಾಗವಹಿಸಲಿದ್ದಾರೆ.ರಕ್ತದಾನ ಶಿಬಿರದಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯಕ್ರಮದ ಸಂಘಟಕರಾದ ಡಿ.ಕೆ.ಎಸ್.ಸಿ ಯೂತ್ ವಿಂಗ್ ಯು.ಎ.ಇ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಯು.ಎ.ಇ ಕಾರ್ಯ ನಿರ್ವಾಹಕರು  ತಿಳಿಸಿದ್ದಾರೆ.

ಹೆಚ್ಚಿನಮಾಹಿತಿಗಾಗಿ ಸಂಪರ್ಕಿಸಿ: ಶಂಸುದ್ದೀನ್ ಪಿಲಿಗೂಡು – +971528981904, ಸಮದ್ ಬಿರಾಲಿ – +971553540287