ವೋಲ್ವೊ ಹೈಬ್ರೀಡ್ ವಿಲಾಸಿ ಕಾರು ಖರೀದಿಸಿದ ಶಾಸಕ ಮೊಯ್ದಿನ್ ಬಾವ

Spread the love

ವೋಲ್ವೊ ಹೈಬ್ರೀಡ್ ವಿಲಾಸಿ ಕಾರು ಖರೀದಿಸಿದ ಶಾಸಕ ಮೊಯ್ದಿನ್ ಬಾವ

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ ಎ ಮೊಯ್ದಿನ್ ಬಾವ ಅವರು ಇತ್ತೀಚೆಗೆ ಭಾರತದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ ಪ್ರಥಮವಾಗಿ ಬಿಡುಗಡೆಗೊಂಡ ಸುಪ್ರಸಿದ್ದ ವೋಲ್ವೊ ಕಂಪೆನಿಯ ಎಕ್ಸ್ ಸಿ 90 ಟ8 ಎಕ್ಸಲೆನ್ಸ್ ಕಾರನ್ನು ಖರೀದಿಸಿದ್ದಾರೆ.

ಪೆಟ್ರೋಲ್ ಹಾಗೂ ಬ್ಯಾಟರಿಯಿಂದ ಚಾಲನೆಗೊಳ್ಳುವ ಪರಿಸರ ಸ್ನೇಹಿಯಾಗಿರುವ ಈ ಕಾರು ಭಾರತದಲ್ಲಿ ಪ್ರಥಮವಾಗಿ ಬಿಡುಗಡೆಯಾಗಿದ್ದು, 30 ರಿಂದ 40 ಕಿಮಿ ಮೈಲೇಜ್ ನೀಡುವ ಈ ಕಾರು ಕಡಿಮೆ ಇಂಧನ ಕ್ಷಮತೆಯನ್ನು ಹೊಂದಿದೆ. ಪರಿಸರ ಮಾಲಿನ್ಯ ಪ್ರಮಾಣ ಕಡಿಮೆ ಇರುವ ಕಾರಣ ಇದೊಂದು ಪರಿಸರ ಸ್ನೇಹಿ ಕಾರು ಆಗಿದ್ದು, 5-6 ಕೋಟಿ ರೂ ಬೆಲೆ ಬಾಳುವ ಕಾರುಗಳಲ್ಲಿ ಹೊಂದಿರುವ ವಿಶೇಷ ಸೌಲಭ್ಯಗಳನ್ನು ಈ ಹೈಬ್ರೀಡ್ ಕಾರು ಹೊಂದಿದೆ. ವೀಶೇಷ ಸೌಲಭ್ಯಗಳನ್ನು ಹೊಂದಿರುವ ಕಾರಿನ ಆನ್ ರೋಡ್ ಬೆಲೆ ರೂ 1.65 ಕೋಟಿ.

ಸ್ಪೀಡಿಶ್ ತಂತ್ರಜ್ಞಾನದ ಈ ಕಾರು ಆರು ತಿಂಗಳ ಹಿಂದೆ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಇದೀಗ ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ರಸ್ತೆಗಿಳಿದಿದೆ. ದೂರ ಪ್ರಯಾಣದ ವೇಳೆ ನಿದ್ರಿಸಿಕೊಂಡು ಹೋಗಲು ಅನೂಕೂಲಕರವಾದ ಸೀಟು, ಫ್ರೀಡ್ಜ್ ಹಾಗೂ ಇತರ ಸೌಲಭ್ಯಗಳನ್ನು ಹೊಂದಿದೆ.


Spread the love

1 Comment

  1. 1.65 crore No big deal at all…even Yeddi friend Reddy spent 500 crore for his daughter marriage and Acche din Friend Gadkari spent lot of crores in his daughter marriage function and recently Maharashtra BJP president’s daughter marriage spent countless crores, so what is the big deal in Bawa buying jujubi 1.65 crore cars….it’s nothing but peanut for politician…at least Bawa will concentrate on road repair to ensure his new car’s smooth drive.
    I think Bawa is planning for LUNGI dance to celebrate his new car.

Comments are closed.