ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಗಫೂರ್, ನಾರಾಯಣ ಗುರು ಪ್ರಾಧಿಕಾರಕ್ಕೆ ಮಂಜುನಾಥ ಪೂಜಾರಿ ನೇಮಕ

Spread the love

ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಗಫೂರ್, ನಾರಾಯಣ ಗುರು ಪ್ರಾಧಿಕಾರಕ್ಕೆ ಮಂಜುನಾಥ ಪೂಜಾರಿ ನೇಮಕ

ಉಡುಪಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಎಮ್ ಎ ಗಫೂರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆಸ್ಕರ್ ಫೆರ್ನಾಂಡಿಸ್ ಅವರ ನಿಕಟವರ್ತಿಯಾಗಿದ್ದ ಎಮ್ ಎ ಗಫೂರ್ ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಅಲ್ಲದೆ ಕೆಪಿಸಿಸಿ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

ಇದೇ ವೇಳೆ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುನಾಥ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ.

ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗೆ ಕೊನೆಗೂ ನೇಮಕವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಡಬ್ಲ್ಯೂಸಿ ಸಭೆಗೆಂದು ಬಿಹಾರ್ ತೆರಳಿದ ಸಂದರ್ಭದಲ್ಲೇ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದೆ. 39 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಹೈಕಮಾಂಡ್‌ ಮುದ್ರೆ ಹಾಕಿ ಇಂದು (ಸೆಪ್ಟೆಂಬರ್ 24) ರಾಜ್ಯಕ್ಕೆ ರವಾನೆ ಮಾಡಿದೆ.  ಯಾರಿಗೆ ಯಾವ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ನಿಗಮ ಮಂಡಳಿ ನೇಮಕ ಪಟ್ಟಿ ಇಂತಿದೆ

  • ಶಿವಲೀಲಾ ಕುಲಕರ್ಣಿ: ಕರ್ನಾಟಕ ನಗ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  • ಪಿ. ರಘು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ.
  • ಅರುಣ್ ಪಾಟೀಲ್: ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮ.
  • ಜಗದೀಶ್ ವೊಡ್ನಾಲ್: ಜೈವಿಕ ವೈವಿಧ್ಯ ಮಂಡಳಿ.
  • ಮುರಳಿ ಅಶೋಕ್: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ.
  • ಡಾ. ಮೂರ್ತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ.
  • ಕರ್ನಲ್ ಮಲ್ಲಿಕಾರ್ಜುನ್: ಮಾಜಿ ಸೈನಿಕರ ಕಲ್ಯಾಣ ಮಂಡಳಿ.
  • ಡಾ. ಬಿ. ಸಿ. ಮುದ್ದುಗಂಗಾಧರ್: ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ.
  • ಶರ್ಲೆಟ್ ಪಿಂಟೋ: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ.
  • ಮರಿಯೋಜಿ ರಾವ್: ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ.
  • ಎಂ. ಎ. ಗಫೂರ್: ಕರಾವಳಿ ಅಭಿವೃದ್ಧಿ ಪ್ರಾಧಿಕಾರ.
  • ಕೆ. ಹರೀಶ್ ಕುಮಾರ್: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ.
  • ಎನ್. ಸಂಪಂಗಿ: ಕರ್ನಾಟಕ ಗೋದಾಮು ನಿಗಮ.
  • ವೈ. ಸಯೀದ್ ಅಹಮದ್: ದೇವರಾಜ್ ಅರಸ್ ಟ್ರಕ್ ಟರ್ಮಿನಲ್.
  • ಮಹೇಶ್: ಕಾಡುಗೊಲ್ಲ ಅಭಿವೃದ್ಧಿ ನಿಗಮ.
  • ಮಂಜಪ್ಪ: ಬಯಲುಸೀಮೆ ಅಭಿವೃದ್ಧಿ ಮಂಡಳಿ.
  • ಧರ್ಮಣ್ಣ ಉಪ್ಪಾರ – ಕರ್ನಾಟಕ ಉಪ್ಪಾರ ಡೆವಲಪ್ಮೆಂಟ್ ಕಾರ್ಪೊರೇಷನ್ಅ
  • ಗಾ ಸುಲ್ತಾನ್ – ಸೆಂಟ್ರಲ್ ರಿಲೀಫ್ ಕಮಿಟಿ
  • ಎಸ್. ಜಿ. ನಂಜಯ್ಯ ಮಠ – ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೊರೇಷನ್.
  • ಆಂಜಪ್ಪ – ಕರ್ನಾಟಕ ಸೀಡ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್.
  • ನೀಲಕಂಠ ಮುಲ್ಗೆ – ಕಲ್ಯಾಣ ಕರ್ನಾಟಕ ರೋಡ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್.
  • ಬಾಬು ಹೊನ್ನ ನಾಯ್ಕ್ – ಕಮಾಂಡ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ, ಭದ್ರಾ, ಹಗರಿಬೊಮ್ಮನಹಳ್ಳಿ, ಕಲಬುರ್ಗಿ.
  • ಯುವರಾಜ್ ಕದಮ್ – ಮಲಪ್ರಭಾ & ಘಟಪ್ರಭಾ ಪ್ರಾಜೆಕ್ಟ್ ಕಮಾಂಡ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ, ಬೆಳಗಾವಿ.
  • ಜಮಾದಾರ್ ಅನಿಲ್ ಕುಮಾರ್ – ಕರ್ನಾಟಕ ತೂರ್ ದಾಲ್ ಡೆವಲಪ್ಮೆಂಟ್ ಕಾರ್ಪೊರೇಷನ್, ಕಲಬುರ್ಗಿ.
  • ಪ್ರವೀಣ್ ಹರ್ವಾಲ್ – ಗುಲ್ಬರ್ಗಾ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ.
  • ಮಂಜುನಾಥ್ ಪೂಜಾರಿ – ಶ್ರೀ ನಾರಾಯಣ ಗುರು ಡೆವಲಪ್ಮೆಂಟ್ ಕಾರ್ಪೊರೇಷನ್.
  • ಸೈಯದ್ ಮೆಹಮೂದ್ ಚಿಸ್ತಿ – ಕರ್ನಾಟಕ ಸ್ಟೇಟ್ ಪಲ್ಸಸ್ ಅಭಿವೃದ್ಧಿ ಮಂಡಳಿ ಲಿಮಿಟೆಡ್.
  • ಎಂ. ಎಸ್. ಮುತ್ತುರಾಜ್ – ಕರ್ನಾಟಕ ಸವಿತಾ ಸಮಾಜ್ ಡೆವಲಪ್ಮೆಂಟ್ ಕಾರ್ಪೊರೇಷನ್.
  • ನಂಜಪ್ಪ – ಕರ್ನಾಟಕ ಮಡಿವಾಲ ಮಾಚಿ ದೇವ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್.
  • ವಿಶ್ವಾಸ ದಾಸ್ – ಕರ್ನಾಟಕ ಗಾಣಿಗ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್.
  • ಆರ್. ಸತ್ಯನಾರಾಯಣ – ಕರ್ನಾಟಕ ಸ್ಟೇಟ್ ಟೆಂಪರೆನ್ಸ್ ಬೋರ್ಡ್.
  • ಗಂಗಾಧರ್ – ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಲಿಮಿಟೆಡ್.
  • ಶಿವಪ್ಪ – ಹಾಸನ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ.
  • ಬಿ.ಎಸ್. ಕವಲಗಿ – ಕರ್ನಾಟಕ ಲೈಮ್ ಡೆವಲಪ್ಮೆಂಟ್ ಬೋರ್ಡ್ಶ್ರೀ
  • ನಿವಾಸ ವೇಲು – ಕುಂಬಾರ ಡೆವಲಪ್ಮೆಂಟ್ ಕಾರ್ಪೊರೇಷನ್ಟಿ
  • .ಎಂ. ಶಾಹೀದ್ ತಕ್ಕಿಲ್ – ಕರ್ನಾಟಕ ಸ್ಟೇಟ್ ಮಿನಿಮಮ್ ವೇಜ್ ಬೋರ್ಡ್ಚೇ
  • ತನ್ ಕೆ. ಗೌಡ – ಕರ್ನಾಟಕ ಸ್ಟೇಟ್ ಹ್ಯಾಂಡ್ ಲೂಮ್ಸ್ ಇನ್ಫ್ರಾಸ್ಟ್ರಕ್ಚರ್ (ಪವರ್ ಲೂಮ್ಸ್) ಬೋರ್ಡ್.
  • ಶರಣಪ್ಪ ಸಾರದ್ಪುರ್ – ಕರ್ನಾಟಕ ಸ್ಟೇಟ್ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಪ್ರೊಸೆಸಿಂಗ್ ಅಂಡ್ ಎಕ್ಸ್‌ಪೋರ್ಟ್ ಬೋರ್ಡ್ಲಾ
  • ಲಾವಣ್ಯ ಬಲ್ಲಾಳ್ ಜೈನ್ – ಕರ್ನಾಟಕ ಸ್ಟೇಟ್ ಸೀಡ್ ಅಂಡ್ ಆರ್ಗಾನಿಕ್ ಸರ್ಟಿಫಿಕೇಷನ್ ಏಜೆನ್ಸಿ

Spread the love
1 Comment
Inline Feedbacks
View all comments
Madhava
1 month ago

Lavanya Ballal finally gets some thing for carrying the long spoon.